ಕೊಡಗಿನ ಚೆಲುವೆಗಾಗಿ ಈಗ ಸಾಲು ಸಾಲು ಸಿನಿಮಾಗಳು ಕಾಯ್ತಿವೆ. ಈಗ ‘ಪುಷ್ಪ- 2’ ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಬಾಲಿವುಡ್ನಲ್ಲಿ ರಶ್ಮಿಕಾ 2ನೇ ಸಿನಿಮಾ ‘ಮಿಷನ್ ಮಜ್ನು’ ಕೂಡ ಓಟಿಟಿಗೆ ಬಂದು ಸಕ್ಸಸ್ ಕಂಡಿದೆ. ‘ಪುಷ್ಪ’-2 ಜೊತೆ ಈ ವರ್ಷ ರಶ್ಮಿಕಾ ಅಭಿನಯದ 2 ಸಿನಿಮಾಗಳು ತೆರೆಗೆ ಬರಲಿದೆ.
ಇದೀಗ ರಶ್ಮಿಕಾ ಗೋಲ್ಡನ್ ಬಣ್ಣದ ಮಿರಿ ಮಿರಿ ಮಿಂಚುತ್ತಿರುವ ಫ್ರಾಕ್ ಹಾಕಿಕೊಂಡು ಕ್ಯಾಮೆರಾಗೆ ಪೋಸ್ ಕೊಟ್ಟಿರುವ ವಿಡಿಯೋವೊಂದನ್ನ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಶಾರ್ಟ್ ಗೋಲ್ಡನ್ ಫ್ರಾಕ್ ಮೇಲೆ ಬಿಳಿ ಬಣ್ಣದ ಹೂವುಗಳಿದ್ದು, ರಶ್ಮಿಕಾ ಫ್ರೀ ಹೇರ್ಸ್ ಬಿಟ್ಟಿದ್ದಾರೆ. ಜತೆಗೆ ಹಾರ್ಟ್ ಸನ್ನೆಯನ್ನೂ ಮಾಡಿ ಪೋಸ್ ನೀಡಿದ್ದಾರೆ.
ಜತೆಗೆ ಸಿಂಪಲ್ ಮೇಕಪ್ನಲ್ಲಿ ಸಖತ್ ಆಗಿ ಕಾಣಿಸಿಕೊಂಡಿದ್ದು, ನೆಟ್ಟಿಗರು ನಾನಾ ರೀತಿ ಕಾಮೆಂಟ್ ಮಾಡುತ್ತಿದ್ದಾರೆ.
ರಶ್ಮಿಕಾ ಫ್ರಾಕ್ ತುಂಬಾನೆ ಶಾರ್ಟ್ ಆಗಿದ್ದು, ಇದೇನು ಉರ್ಫಿ ಜಾವೇದ್ ಕೊಟ್ಟ ಗಿಫ್ಟಾ ಅಂತ್ಹೇಳಿ ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೋರ್ವ ಬಳಕೆದಾರರು ರಶ್ಮಿಕಾ ಈ ಡ್ರೆಸ್ನಲ್ಲಿ ಕ್ಯೂಟಿ ಪೈಳಂತೆ ಕಾಣುತ್ತಿದ್ದಾಳೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನೂ ಹಲವರು ಬೊಂಬೆಯಂತೆ ಕಾಣಿಸುತ್ತಿದ್ದೀರಿ ಎಂದಿದ್ದಾರೆ. ಸದ್ಯ ಈ ವಿಡಿಯೋ ರಶ್ಮಿಕಾ ಅವರ ಫ್ಯಾನ್ಸ್ನ ನಿದ್ದೆ ಗೆಡಿಸಿದ್ದು, ಸದ್ಯ ಈ ವಿಡಿಯೋಗೆ ನಾನಾ ಪ್ರತಿಕ್ರಿಯೆಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿವೆ.
ಇನ್ನು ಚಿತ್ರವೊಂದಕ್ಕೆ ರಶ್ಮಿಕಾ 4 ಕೋಟಿ ರೂ. ಸಂಭಾವನೆ ತೆಗೆದುಕೊಳ್ಳುತ್ತಾರೆ ಎನ್ನಲಾಗುತ್ತದೆ. ಆದರೂ ಕೂಡ ಅಭಿಮಾನಿಗಳ ನೆಚ್ಚಿನ ರಶ್ಮಿಕಾ ಮಂದಣ್ಣಗೆ ಸಖತ್ ಡಿಮ್ಯಾಂಡ್ ಕೂಡ ಕ್ರಿಯೇಟ್ ಆಗಿದೆ.