More

    ಜಿಟಿಟಿಸಿ ಡಿಪ್ಲೊಮಾ ಕೋರ್ಸ್‌ಗೆ ಪ್ರವೇಶಾರಂಭ


    ಚಿತ್ರದುರ್ಗ: ನಗರದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ)ಡಿಪ್ಲೊಮಾ ಕೋರ್ಸ್‌ಗಳಿಗೆ ಪ್ರವೇಶ ಆರಂಭವಾಗಿದೆ ಎಂದು ಕೇಂದ್ರದ ಪ್ರಾಚಾರ‌್ಯ ಕೆ.ಬಿ.ಅರುಣ್‌ಕುಮಾರ್ ಹೇಳಿದರು.

    ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತ್ರಿ ಪ್ಲಸ್ ಒನ್ ಇಯರ್ ಅವಧಿಯ ಡಿಪ್ಲೊಮಾ ಇನ್ ಟೂಲ್ ಆ್ಯಂಡ್ ಡೈ ಮೇಕಿಂಗ್ ಹಾಗೂ ಡಿಪ್ಲೊಮಾ ಇನ್ ಮೆಕಾಟ್ರಾನಿಕ್ಸ್ ಪ್ರವೇಶಕ್ಕೆ ಎಸ್ಸೆಸ್ಸೆಲ್ಸಿ ಉತ್ತೀರ್ಣರಾದ ವಿದ್ಯಾರ್ಥಿಗಳು ಮೇ ಅಂತ್ಯದವರೆಗೆ ಅರ್ಜಿ ಸಲ್ಲಿಸ ಬಹುದಾಗಿದೆ.

    ಸಂಸ್ಥೆಯಲ್ಲಿ 3 ವರ್ಷಗಳ ತರಬೇತಿ ಬಳಿಕ ಒಂದು ವರ್ಷದ ಇಂಟರ್ನ್‌ಶಿಫ್ ತರಬೇತಿ ಕಡ್ಡಾಯವಾಗಿರುತ್ತದೆ. ಮೊದಲನೇ ವರ್ಷದ ಶುಲ್ಕ 30 ಸಾವಿರ ರೂ.ಇದೆ. ಕೋರ್ಸ್ ಅವಧಿಯಲ್ಲಿ ವಿದ್ಯಾರ್ಥಿಗಳು ಪಾವತಿಸುವ ಶುಲ್ಕದ ಮೊತ್ತವು ಎಲ್ಲ ವರ್ಗದ ವಿದ್ಯಾರ್ಥಿಗಳಿಗೂ ವಿದ್ಯಾರ್ಥಿವೇತನದ ರೂಪದಲ್ಲಿ ಹಿಂತಿರುಗುತ್ತದೆ. ಸೆಕೆಂಡ್ ಪಿಯುಸಿ ವಿಜ್ಞಾನದ ವಿದ್ಯಾರ್ಥಿಗಳು ನೇರ 3ನೇ ವರ್ಷಕ್ಕೆ ದಾಖಲಾಗಬಹುದು ಎಂದರು.

    ಸಂಸ್ಥೆಯಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಉದ್ಯೋಗವಕಾಶ ಸಾಕಷ್ಟಿವೆ. ಪ್ರತಿ ಕೋರ್ಸ್‌ಗೆ 60 ವಿದ್ಯಾರ್ಥಿಗಳಿಗೆ ಅವಕಾಶವಿದೆ. ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯಕ್ಕೆ ಕಟ್ಟಡ ನಿರ್ಮಾಣವಾಗುತ್ತಿದೆ. ಹೊರವಲಯ ಕುಂಚಿಗನಾಳ್‌ನಲ್ಲಿ 2020ರಲ್ಲಿ ಆರಂಭವಾದ ನಮ್ಮ ಈ ಸಂಸ್ಥೆಯಲ್ಲಿ ನಿರ್ದಿಷ್ಟ ಅವಧಿಯ ಕೌಶಲ್ಯಾಭಿವೃದ್ಧಿ ತರಬೇತಿಯನ್ನೂ ಕೊಡಲಾಗುತ್ತಿದೆ ಎಂದರು. ಕೇಂದ್ರ ಆಡಳಿತಾಧಿ ಕಾರಿ ಕೆ.ಪಿ.ಕಾಟೇಗೌಡ, ಬೋಧಕ ಮನೋಜ್ ಎಸ್.ಪಾಟೀಲ್ ಇದ್ದರು.
    (ಸಿಟಿಡಿ 23 ಕೆ.ಬಿ.ಅರುಣ್‌ಕುಮಾರ್)ಮಗ್‌ಶಾಟ್


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts