More

    ಸಂವಿಧಾನ ನೀಡಿರುವ ಹಕ್ಕನ್ನು ಚಲಾಯಿಸಿ- ಚುನಾವಣಾಧಿಕಾರಿ ಹೇಳಿಕೆ

    ಯಲಬುರ್ಗಾ: ಚುನಾವಣೆ ಪ್ರಯುಕ್ತ ಪಟ್ಟಣದಲ್ಲಿ ತಾಲೂಕು ಸ್ವೀಪ್ ಸಮಿತಿ ಶುಕ್ರವಾರ ಹಮ್ಮಿಕೊಂಡಿದ್ದ ಮತದಾನ ಜಾಗೃತಿಯ ಕಾಲ್ನಡಿಗೆ ಜಾಥಾಕ್ಕೆ (ವಾಕಥಾನ್) ಚುನಾವಣಾಧಿಕಾರಿ ಕೆ.ವಿ.ಕಾವ್ಯಾರಾಣಿ ಚಾಲನೆ ನೀಡಿದರು.

    ತಹಸಿಲ್ ಕಚೇರಿಯಿಂದ ಆರಂಭವಾದ ಜಾಥಾ ಕಿತ್ತೂರು ರಾಣಿ ಚನ್ನಮ್ಮ ವೃತ್ತ, ಕನ್ನಡ ಕ್ರಿಯಾ ಸಮಿತಿ (ಪುನೀತ್ ಸರ್ಕಲ್) ವೃತ್ತ, ಅಂಬೇಡ್ಕರ್ ವೃತ್ತ ಹಾಗೂ ಕನಕದಾಸ ವೃತಕ್ಕೆ ಸಮಾಪ್ತಿಗೊಂಡಿತು. ನಂತರ ಮಾನವ ಸರಪಳಿ ನಿರ್ಮಿಸಿ ಮತದಾನ ನಮ್ಮ ಹಕ್ಕು, ನಾವು ಮತದಾನ ಮಾಡುತ್ತೇವೆಮ ನೀವು ಮಾಡಿ ಎನ್ನುವ ಘೋಷವಾಕ್ಯ ಕೂಗಿದರು. ಮತದಾನದ ಪ್ರತಿಜ್ಞಾವಿಧಿ ಬೋಧಿಸಲಾಯಿತು.

    ಇದನ್ನೂ ಓದಿ: ಮತದಾನ ಪ್ರತಿಯೊಬ್ಬರ ಸಂವಿಧಾನಿಕ ಹಕ್ಕು

    ಚುನಾವಣಾಧಿಕಾರಿ ಕೆ.ವಿ.ಕಾವ್ಯಾರಾಣಿ ಮಾತನಾಡಿ, ಸಂವಿಧಾನ ನೀಡಿರುವ ಹಕ್ಕನ್ನು ಚಲಾಯಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು. ಸಹಾಯಕ ಚುನಾವಣಾಧಿಕಾರಿ ವಿಠ್ಠಲ ಚೌಗಲೆ, ಕುಕನೂರು ತಹಸೀಲ್ದಾರ್ ನೀಲಪ್ರಭಾ, ಸ್ವೀಪ್ ಸಮಿತಿ ಅಧ್ಯಕ್ಷ ಸಂತೋಷ ಪಾಟೀಲ್, ಮುಖ್ಯಾಧಿಕಾರಿ ಪ್ರಕಾಶ ಮಠದ, ತಾಪಂ ಸಹಾಯಕ ನಿರ್ದೇಶಕ ಎಫ್.ಡಿ.ಕಟ್ಟಿಮನಿ, ಎಫ್.ಎಂ.ಕಳ್ಳಿ, ಬಿಇಒ ಪದ್ಮನಾಭ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts