ನವದೆಹಲಿ: ಮಹಿಳೆಯರ ಉಡುಗೆತೊಡುಗೆಗಳಲ್ಲಿ ಹೊಸ ಹೊಸ ಫ್ಯಾಶನ್ ಟ್ರೆಂಡ್ಗಳು ಜನಪ್ರಿಯವಾಗುತ್ತಿವೆ. ಭಾರತದ ಪಾರಂಪರಿಕ ಉಡುಗೆಯಾಗಿರುವ ಸೀರೆ ಮತ್ತು ಬ್ಲೌಸ್ಗಳ ಡಿಸೈನುಗಳಲ್ಲೂ ಪ್ರತಿದಿನ ಏನಾದರೂ ಹೊಸತು ಕಾಣಿಸುತ್ತಿರುತ್ತೆ. ಆದರೆ ಇಲ್ಲೊಬ್ಬ ಮಹಿಳೆ ಸೀರೆಗೆ ತೊಟ್ಟರೂ ತೊಡದಂಥಾ ಬ್ಲೌಸ್ ಒಂದನ್ನು ಹೊಂದಿಸಿರುವ ವಿಡಿಯೋ ಒಂದು ವೈರಲ್ ಆಗಿದೆ.
ಈ ಮದುವೆ ಸೀಸನ್ಗೆ ಸೀರೆ-ರವಿಕೆಯನ್ನೂ ಮೆಹೆಂದಿಯನ್ನೂ ಮೇಳೈಸಿದ ವಿಚಿತ್ರ ಧಿರಿಸನ್ನು ಈಕೆ ಪ್ರದರ್ಶಿಸಿದ್ದಾಳೆ. ಹಕೋಬಾ ಸೀರೆಗೆ ರವಿಕೆಯ ಬದಲು ಅದೇ ಆಕಾರದಲ್ಲಿ ಬೆನ್ನಿಗೆ ಮತ್ತು ಭುಜಗಳಿಗೆ ಮೆಹೆಂದಿಯ ಚಿತ್ತಾರ ಮಾಡಿಕೊಂಡು ಪ್ರಕಟವಾಗಿದ್ದಾಳೆ. ಇವಳ ವಿಡಿಯೋ ತುಣುಕನ್ನು ಥಾನೋಸ್ ಎಂಬ ಹೆಸರಿಟ್ಟುಕೊಂಡಿರುವ ಇನ್ಸ್ಟಾಗ್ರಾಂ ಬಳಕೆದಾರ ಪೋಸ್ಟ್ ಮಾಡಿದ್ದು, “ಹೀನ್ನಾ ಬ್ಲೌಸ್… ಮುಂದೇನು?” ಎಂದು ಕ್ಯಾಪ್ಷನ್ ಬರೆದಿದ್ದಾರೆ.
View this post on Instagram
ಮದುವೆ ಮುಂತಾದ ಸಮಾರಂಭಗಳಿಗೆ ಕೈಕಾಲುಗಳಿಗೆ ಮೆಹೆಂದಿ ಹಾಕಿಕೊಳ್ಳುವುದು ವಾಡಿಕೆ. ಆದರೆ ಈ ಮಹಿಳೆ, ಅದನ್ನೇ ಮೈಮುಚ್ಚಬೇಕಾದ ಬ್ಲೌಸ್ನ ಬದಲಾಗಿ ಬಳಸಿರುವುದು ನೆಟ್ಟಿಗರಲ್ಲಿ ಮಿಶ್ರ ಪ್ರತಿಕ್ರಿಯೆ ಹುಟ್ಟಿಸಿದೆ. ಪೋಲಿಗಳು, ಮೆಹೆಂದಿ ಕಲಾವಿದ ಖುಷಿಯಾಗಿರ್ಬೇಕು ಎಂದರೆ, ಮತ್ತೆ ಹಲವರು ಇದು ಎಂಥಾ ನಾಚಿಕೆಗೇಡಿನ ಕೆಲಸ.. ಫ್ಯಾಶನ್ ಹೆಸರಲ್ಲಿ ಇನ್ನು ಏನೇನು ಮಾಡ್ತಾರೋ ಎಂದು ಬೈದಿದ್ದಾರೆ.
VIDEO| ಮೈತೋರಿಸೋ ಬಟ್ಟೆ ಬಗ್ಗೆ ಟ್ರೋಲ್ ಮಾಡೋರ್ಗೆ ಉರ್ಫಿ ನೀಡಿದ ಉತ್ತರ..
ಒಮಿಕ್ರಾನ್ ಸೋಂಕು ಬಂದ್ರೆ ಏನು ಚಿಕಿತ್ಸೆ? ಸಿಎಂ ಬೊಮ್ಮಾಯಿ ಹೇಳಿದ್ದು ಹೀಗೆ