ಬೆಂಗಳೂರು: ಬಾಲ ನಟನಾಗಿ ಮುಗ್ಧ ಅಭಿನಯದಿಂದ ಹಿಡಿದು ಇಂದಿನವರೆಗೆ ದಶಕಗಳ ಕಾಲ ಕನ್ನಡ ಚಿತ್ರ ಪ್ರಿಯರನ್ನು ಸೂಜಿಗಲ್ಲಿನಂತೆ ಸೆಳೆದ ಪುನೀತ್, ಚಿತ್ರನಟ ಮಾತ್ರವಲ್ಲದೇ ಹಿನ್ನೆಲೆ ಗಾಯನ, ನಿರೂಪಕರಾಗಿಯೂ ಕೂಡ ಸ್ಯಾಂಡಲ್ವುಡ್ನಲ್ಲಿ ಛಾಪು ಮೂಡಿಸಿದವರು. ಸರಳ ವ್ಯಕ್ತಿತ್ವದಿಂದಲೇ ಎಲ್ಲರ ಮನಗೆದ್ದ ಅಪ್ಪು ಇಂದು ನಮ್ಮ ನಡುವೆ ಇಲ್ಲ ಎಂಬುದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಜತೆಗಿರದ ಜೀವ ಎಂದಿಗೂ ಜೀವಂತ ಎನ್ನುವಂತೆ ಪುನೀತ್ ಎಲ್ಲರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿದ್ದಾರೆ.
ಪುನೀತ್ ಸರಳ ಹಾಗೂ ಸ್ನೇಹ ಜೀವಿಯಾಗಿದ್ದರು. ತಮ್ಮ ತಂದೆ ಬಹುದೊಡ್ಡ ಸ್ಟಾರ್ ಎಂಬ ಹಮ್ಮುಬಿಮ್ಮು ತೋರಿದವರಲ್ಲ. ರಾಜ್ರಂತೆ ಪುನೀತ್ ಕೂಡ ಸರಳ ವ್ಯಕ್ತಿತ್ವ ಮೈಗೂಡಿಸಿಕೊಂಡಿದ್ದರು. ಸಿನಿಮಾದಲ್ಲಿ ಆಳಾಗಿ ದುಡಿದು ಜೀವನದಲ್ಲಿ ಅರಸನಂತೆ ಬದುಕಿದ ಪುನೀತ್, ಸರಳ ಜೀವನ ಶೈಲಿ ಮಾತ್ರವಲ್ಲದೇ, ಅದ್ದೂರಿ ಜೀವನಶೈಲಿಯನ್ನು ಹೊಂದಿದ್ದರು. ಆ ಕುರಿತ ಕೆಲ ಇಂಟೆರೆಸ್ಟಿಂಗ್ ಮಾಹಿತಿ ಇಲ್ಲಿದೆ.
ಪುನೀತ್ಗೆ ಉತ್ತರ ಕರ್ನಾಟಕದ ಆಹಾರ ಅಂದರೆ ತುಂಬಾ ಅಚ್ಚುಮೆಚ್ಚಾಗಿತ್ತು. ಜವಾರ್, ರೋಟಿ, ಮೀನು, ಮಂಗಳೂರಿನ ಗೀ ರೋಸ್ಟ್, ಇಡ್ಲಿ ಹಾಗೂ ಪೇಡ ಮುಂತಾದವುಗಳು ಬಲು ಇಷ್ಟವಾಗಿತ್ತು. ನಾಟಿಕೋಳಿ ಸಾಂಬರ್ ಪುನೀತ್ ಫೇವರಿಟ್ ಆಗಿತ್ತು. ಪುನೀತ್ ಹುಟ್ಟಿನಿಂದಲೂ ಅಕ್ಕಪಕ್ಕದ ಹುಡುಗನಂತಿದ್ದ. ನಾನೊಬ್ಬ ಸ್ಟಾರ್ ಮಗ ಎಂಬ ಅಹಂ ಇರಲಿಲ್ಲ. ಎಲ್ಲರ ಜತೆ ಸುಲಭವಾಗಿ ಬೆರೆಯುತ್ತಿದ್ದರು.
ಇನ್ನು ಪುನೀತ್ ಅವರ ಆದಾಯ 60 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಪ್ರತಿ ಸಿನಿಮಾಗೆ 6 ರಿಂದ 7 ಕೋಟಿ ರೂಪಾಯಿಯನ್ನು ಪಡೆಯುತ್ತಿದ್ದರು. ಅತಿ ಹೆಚ್ಚಿನ ಆದಾಯ ಜಾಹಿರಾತುಗಳಿಂದ ಬರುತ್ತಿತ್ತು. ಒಂದು ಬ್ರ್ಯಾಂಡ್ ಜಾಹಿರಾತಿಗೆ 1 ಕೋಟಿ ರೂ. ಅನ್ನು ಪುನೀತ್ ಚಾರ್ಜ್ ಮಾಡುತ್ತಿದ್ದರು. ಪಿಆರ್ಕೆ ಹೆಸರಿನ ತಮ್ಮದೇ ಸ್ವಂತ ಪ್ರೊಡಕ್ಷನ್ ಹೌಸ್ ಅನ್ನು ಹೊಂದಿದ್ದಾರೆ. ಬೆಂಗಳೂರು ರಾಯಲ್ಸ್ ಹೆಸರಿನ ಫುಟ್ಬಾಲ್ ಟೀಮ್ ಕೂಡ ಹೊಂದಿದ್ದರು.
ಪುನೀತ್ ಕಾರುಗಳ ಕ್ರೇಜ್ ಇತ್ತು. 3 ಕೋಟಿ ರೂ. ಮೌಲ್ಯದ ಐಷಾರಾಮಿ ಲ್ಯಾಂಬೋರ್ಗಿನಿ ಕಾರು ಒಡೆಯರಾಗಿದ್ದರು. ಅಲ್ಲದೆ, ಫೋರ್ಡ್, ಎಂಡೇವಿಯರ್, ಟೊಯೋಟಾ ಫಾರ್ಚುನರ್, ಮಿನಿ ಕೂಪರ್ ಕನವರ್ಟಿಬಲ್ ಹಾಗೂ ಇತರೆ ಕಾರುಗಳ ಸಂಗ್ರಹವನ್ನು ಪುನೀತ್ ಹೊಂದಿದ್ದರು. ಎಲ್ಲ ಕಾರುಗಳು ಕೂಡ 30 ರಿಂದ 40 ಲಕ್ಷದ ರೇಂಜ್ನಲ್ಲಿವೆ. ಇವುಗಳೊಂದಿಗೆ 80 ರಿಂದ 90 ಲಕ್ಷ ಮೌಲ್ಯದ ವೋಲ್ವೋ ಎಕ್ಷ್ಸಿ90 ಆಡಿ ಕ್ಯೂ7 ಕಾರು ಸಹ ಇತ್ತು. ರೇಂಜ್ ರೋವರ್, ವೋಗ್, ನಿಶಾನ್ ಜಿಟಿಆರ್ ಸಂಗ್ರಹವು ಇದೆ.
ಇನ್ನು ಅಂತಾರಾಷ್ಟ್ರೀಯ ಮಹಿಳಾ ದಿನದಂದು ಪುನೀತ್ ತಮ್ಮ ಮಡದಿ ಅಶ್ವಿನಿ ಅವರಿಗೆ 4 ಕೋಟಿ ರೂ. ಮೌಲ್ಯದ ಎಸ್ಯುವಿ ಕಾರು ಉಡುಗೊರೆ ನೀಡಿದ್ದಾರೆ. ಕೇವಲ ಕಾರು ಮಾತ್ರವಲ್ಲದೆ, ಪುನೀತ್ಗೆ ಬೈಕ್ ಕ್ರೇಜ್ ಕೂಡ ಇತ್ತು. 3 ಲಕ್ಷ ರೂ. ಬೆಲೆ ಬಾಳುವ ಬಿಎಂಡಬ್ಲ್ಯೂ ಜಿ310 ಹಾಗೂ 13 ಲಕ್ಷ ರೂ. ಮೌಲ್ಯದ ಇಂಡಿಯನ್ ಸ್ಕೌಟ್ ಬೈಕ್ ಹೊಂದಿದ್ದರು.
ಅಪ್ಪುಗಾಗಿ ಚಿತ್ರರಂಗದಿಂದ ‘ಪುನೀತ ನಮನ’: ಎಲ್ಲಿ-ಹೇಗೆ ನಡೆಯುತ್ತೆ, ಯಾರ್ಯಾರು ಭಾಗಿ?; ಇಲ್ಲಿದೆ ವಿವರ..
ಅಪ್ಪು ಫೋಟೋಗಳಿಗೆ ಡಿಮಾಂಡ್: ‘ಜೊತೆಗಿರದ ಜೀವ ಎಂದಿಗಿಂತ ಜೀವಂತ’ ಕ್ಯಾಪ್ಷನ್ಗೆ ಬೇಡಿಕೆ ಹೆಚ್ಚಾಗಿದೆ…
ಏನೇ ನಡೆದಿದ್ರೂ ಅವನೊಬ್ಬನಿಗೆ ಮಾತ್ರ ಗೊತ್ತಿರುತ್ತದೆ! ಪುನೀತ್ ಸಾವಿನ ಅನುಮಾನದ ಬಗ್ಗೆ ಶಿವಣ್ಣ ಪ್ರತಿಕ್ರಿಯೆ