ಬೆಂಗಳೂರು: ಬಿಗ್ಬಾಸ್ ಸೀಸನ್ 8ರಲ್ಲಿ ಈ ವಾರ ನೀರಿಗೊಂದು ಎಲ್ಲೆ ಎಲ್ಲಿದೆ ಟಾಸ್ಕ್ ಕೊಡಲಾಗಿತ್ತು. ಎರಡು ತಂಡ ಮಾಡಲಾಗಿದ್ದು, ಒಂದು ತಂಡದಿಂದ ದಿವ್ಯಾ ಸುರೇಶ್ ಹಾಗೂ ಇನ್ನೊಂದು ತಂಡದ ಪ್ರತಿನಿಧಿಯಾಗಿ ವೈಷ್ಣವಿ ಸ್ವಿಮ್ಮಿಂಗ್ ಫೂಲ್ನಲ್ಲಿಟ್ಟಿದ್ದ ಬಾಕ್ಸ್ ಮೇಲೆ ಕುಳಿತಿದ್ದರು. ಹೇಗಾದರೂ ಆಟ ಮುಗಿಸಿಬೇಕೆಂಬ ಕಾರಣಕ್ಕೆ ವೈಷ್ಣವಿಯನ್ನು ಬೀಳಿಸಲು ಶಂಕರ್ ಅಶ್ವಥ್ ಸ್ವಿಮ್ಮಿಂಗ್ ಫೂಲ್ಗೆ ಹಾರಿದ್ದು, ಮನೆ ಮಂದಿಗೆ ಅಸಮಾಧಾನವಾಗುವಂತಾಗಿದೆ.
ಸುಮಾರು 24 ಗಂಟೆಗಳ ಕಾಲ ವೈಷ್ಣವಿ ಮತ್ತು ದಿವ್ಯಾ ಸುರೇಶ್ ಊಟ, ತಿಂಡಿ, ನಿದ್ರೆ ಬಿಟ್ಟು ಬಾಕ್ಸ್ ಮೇಲೆ ಕುಳಿತಿದ್ದರು. ಎರಡೂ ತಂಡಗಳು ಅದೆಷ್ಟೇ ಪ್ರಯತ್ನ ಪಟ್ಟರೂ ಅವರನ್ನು ಕೆಳಗಿಳಿಸಲು ಸಾಧ್ಯವಾಗಿರಲಿಲ್ಲ. ಅವರ ಕಷ್ಟ ನೋಡಲಾಗದೆ ಹೇಗಾದರೂ ಮಾಡಿ ಆಟ ಮುಗಿಸಬೇಕೆಂದು ಶಂಕರ್ ಅವರನ್ನು ಕೇಳಿಕೊಂಡರು. ಆದರೆ ಆಟವನ್ನು ಬಿಡಲು ಸ್ಪರ್ಧಾಳುಗಳು ಸಿದ್ಧವಿರಲಿಲ್ಲ. ಶುಭ ಮತ್ತು ನಿಧಿ ಸೇರಿಕೊಂಡು ದುಪ್ಪಟ್ಟದಿಂದ ದಿವ್ಯಾ ಸುರೇಶನನ್ನು ಬೀಳಿಸಬೇಕೆಂದು ಹೊರಟಿದ್ದಾಗ ತಕ್ಷಣ ಶಂಕರ್ ಅವರು ಸ್ವಿಮ್ಮಿಂಗ್ ಫೂಲ್ಗೆ ಹಾರಿದ್ದಾರೆ. ಅಲ್ಲಿ ಕುಳಿತಿದ್ದ ವೈಷ್ಣವಿಯನ್ನು ತಳ್ಳಿದ್ದಾರೆ. ಅದರಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೂ ವೈಷ್ಣವಿಗೆ ದೊಡ್ಡ ಮಟ್ಟದ ಪೆಟ್ಟಾಗುತ್ತಿತ್ತು ಎಂದು ಆಕೆಯ ತಂಡದ ಸದಸ್ಯರು ಆರೋಪಿಸಿದ್ದಾರೆ.
ನೀರಿಗೆ ಬೀಳದೆಯೇ ಸ್ಪರ್ಧಾಳುವನ್ನು ಬೀಳಿಸಬೇಕೆಂಬ ನಿಯಮವಿತ್ತು. ಆದರೆ ಅದರಲ್ಲಿ ಶಂಕರ್ ಅವರು ವಿಫಲವಾದ ಹಿನ್ನೆಲೆಯಲ್ಲಿ ವೈಷ್ಣವಿ ಅವರ ತಂಡವನ್ನೇ ಜಯಶಾಲಿಗಳೆಂದು ಘೋಷಿಸಲಾಗಿದೆ. (ಏಜೆನ್ಸೀಸ್)