More

    ಕರೊನಾ ಸೋಂಕಿನಿಂದ ಭಾರತದಲ್ಲಿ 99 ಜನ ಚೇತರಿಕೆ, ಆತಂಕಪಡಬೇಕಿಲ್ಲ ಎಂದ ಕೇಂದ್ರ ಸರ್ಕಾರ

    ನವದೆಹಲಿ: ಭಾರತದಲ್ಲಿ ಕರೊನಾ ವೈರಸ್​ ಸೋಂಕು ಅಪಾಯಕಾರಿಮಟ್ಟ ತಲುಪಿಲ್ಲ. ಈ ಬಗ್ಗೆ ಎಚ್ಚರಿಕೆ ವಹಿಸಿದರೆ ಸೋಂಕು ತಡೆಗಟ್ಟುವುದು ಕಷ್ಟವಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದಶಿರ್ ಲವ ಅಗರ್​ವಾಲ್​ ಹೇಳಿದ್ದಾರೆ.
    ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಳೆದ 24 ಗಂಟೆಗಳಲ್ಲಿ ಕರೊನಾ ಸೋಂಕಿನಿಂದ ನಾಲ್ವರು ಮೃತಪಟ್ಟಿದ್ದಾರೆ. ಹೊಸದಾಗಿ 92 ಜನರಲ್ಲಿ ಸೋಂಕು ಪತ್ತೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಭಾರತದಲ್ಲಿ 1 ಸಾವಿರ ಜನರು ಸೋಂಕಿತರಾಗಲು 12 ದಿನಗಳ ಬೇಕಾಯಿತು. ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಸೋಂಕಿನ ಹರಡುವಿಕೆ ತುಂಬಾ ನಿಧಾನವಾಗಿದೆ. ಹಾಗಾಗಿ, ಇದನ್ನು ಸುಲಭದಲ್ಲಿ ನಿಯಂತ್ರಿಸಲು ಸಾಧ್ಯವಿದೆ. ಹಾಗೆಂದು ಮೈಮರೆಯುವಂತಿಲ್ಲ. ಸೋಂಕು ಹರಡದಂತೆ ತಡೆಯಲು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವುದು ಅಗತ್ಯ ಎಂದು ಹೇಳಿದ್ದಾರೆ.

    ಸೋಂಕು ಪತ್ತೆ ಹಚ್ಚಲು ರಾಷ್ಟ್ರಾದ್ಯಂತ 115 ಸರ್ಕಾರಿ ಮತ್ತು 47 ಖಾಸಗಿ ಪ್ರಯೋಗಾಲಯಗಳು ಕಾರ್ಯನಿರ್ವಹಿಸುತ್ತಿವೆ. ಸರ್ಕಾರಿ ಪ್ರಯೋಗಾಲಯಗಳಲ್ಲಿ ಭಾನುವಾರ ಒಂದೇ ದಿನ 3,501 ಮಾದರಿಗಳನ್ನು ಪರಿಶೀಲಿಸಲಾಗಿದೆ. ಖಾಸಗಿ ಪ್ರಯೋಗಾಲಯದಲ್ಲಿ ಒಟ್ಟು 1,334 ಮಾದರಿಗಳನ್ನು ಪರೀಸಲಾಗಿದೆ. ಇವುಗಳಲ್ಲಿ 99 ಜನರಲ್ಲಿ ಸೋಂಕು ಇರುವುದು ಖಚಿತಪಟ್ಟಿದೆ ಎಂದು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts