More

    ಇಟಲಿಯಲ್ಲಿ ಕರೊನಾದಿಂದ ಮೃತರಾದ ಶೇ. 99 ರೋಗಿಗಳಲ್ಲಿ ಮೊದಲೇ ಕಾಯಿಲೆ ಇತ್ತು: ನೂತನ ಸಂಶೋಧನೆ

    ರೋಮ್​: ಮಾರಕ ಕರೊನಾ ವೈರಸ್​ ಪ್ರಸ್ತುತ ಜಗತ್ತಿನಾದ್ಯಂತ ಎಲ್ಲರನ್ನು ಭಯಭೀತಗೊಳಿಸಿದೆ. ಸಾವಿನ ಸಂಖ್ಯೆಯಲ್ಲಿ ಚೀನಾವನ್ನೇ ಇಟಲಿ ಮೀರಿಸಿದೆ. ಇಲ್ಲಿ ಸೋಂಕಿನಿಂದ ಮೃತಪಟ್ಟ ಶೇ. 99 ರಷ್ಟು ರೋಗಿಗಳು ಮೊದಲೇ ಕಾಯಿಲೆಗಳನ್ನು ಹೊಂದಿದ್ದರು ಎಂದು ಹೊಸ ಸಂಶೋಧನೆಯೊಂದು ಬಹಿರಂಗಪಡಿಸಿದೆ.

    355 ಮೃತರನ್ನು ಪರೀಕ್ಷಿಸಿದಾಗ ಅದರಲ್ಲಿ ಮೂವರು ಸಂತ್ರಸ್ತರು (ಶೇ. 0.8) ಕರೊನಾ ಸೋಂಕಿಗೆ ಒಳಗಾಗುವ ಮುನ್ನವೇ ಅವರಿಗಿದ್ದ ಕಾಯಿಲೆಗಳ ಬಗ್ಗೆ ಸ್ಪಷ್ಟವಾಗಿತ್ತು ಎಂದು ತಿಳಿದುಬಂದಿದೆ. 355ರಲ್ಲಿ ಅರ್ಧಕರ್ಧ ಮಂದಿ ಅಂದರೆ ಶೇ. 48.5 ಮಂದಿಗೆ ಕರೊನಾ ಚಿಕಿತ್ಸೆಗೆ ಒಳಗಾಗುವ ಮುನ್ನವೇ ಮೂರು ಹಾಗೂ ಅದಕ್ಕಿಂತ ಹೆಚ್ಚಿನ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ಸಂಶೋಧನೆ ತಿಳಿಸಿದೆ.

    ಇಟಲಿಯ ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಹಿಂದಿನ ಸಂಶೋಧನೆಗಳಿಗೆ ಅನುಗುಣವಾಗಿ ಈಗಾಗಲೇ ಇನ್ನಿತರ ಕಾಯಿಲೆಗಳಿಂದ ಬಳಲುತ್ತಿರುವವರು ಕರೊನಾ ವೈರಸ್​ ಸೋಂಕಿನಿಂದ ಸಾಯುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಿದ್ದಾರೆ.

    ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆ ಮತ್ತು ಮಧುಮೇಹದಂತಹ ಕಾಯಿಲೆಗಳು ಇಟಲಿಯಲ್ಲಿ ಸಾಮಾನ್ಯವಾಗಿದೆ. ಕರೊನಾ ವೈರಸ್​ನಿಂದ ಮೃತಪಟ್ಟ ಶೇ. 76.1 ರೋಗಿಗಳಲ್ಲಿ ಕೆಲವರಲ್ಲಿ ಅಧಿಕ ರಕ್ತದೊತ್ತಡ ಇತ್ತೆಂದು ಅಧ್ಯಯನ ತಿಳಿಸಿದೆ.

    ಶೇ. 35.5 ಮಧುಮೇಹ ಹೊಂದಿದ್ದರೆ, ಶೇ. 33.0 ರಷ್ಟು ಜನರು ರಕ್ತಕೊರತೆಯ ಹೃದಯ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ಸಂಶೋಧನೆ ಹೇಳಿದೆ.

    ಸದ್ಯ ಇಟಲಿಯಲ್ಲಿ 3405 ಮಂದಿ ಸೋಂಕಿಗೆ ಬಲಿಯಾಗಿದ್ದು, 41 ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದೆ. (ಏಜೆನ್ಸೀಸ್​)

    ಮಾ.22ರಂದು ಬೆಳಗ್ಗೆ 7ರಿಂದ ರಾತ್ರಿ 9ರವರೆಗೆ ದೇಶದಲ್ಲಿ ‘ಜನತಾ ಕರ್ಫ್ಯೂ’; ಪ್ರತಿಯೊಬ್ಬರೂ ಪಾಲಿಸಿ, ಮನೆಯಿಂದ ಹೊರಬರಬೇಡಿ ಎಂದು ಮನವಿ ಮಾಡಿದ ಪ್ರಧಾನಿ

    ಏರುತ್ತಲೇ ಇದೆ ಕರೊನಾ ಸೋಂಕಿತರ ಸಂಖ್ಯೆ; ವೈರಸ್​ ಪಸರಿಸುವುದನ್ನು ತಡೆಯಲು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಹೆಚ್ಚುವರಿ ಸಲಹೆಗಳು ಹೀಗಿವೆ….

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts