More

    ಲೋಕಸಭಾ ಚುನಾವಣೆಗೆ 95 ಲಕ್ಷ ಖರ್ಚಿನ ಮಿತಿ

    ಕಾರವಾರ: ಜಿಲ್ಲೆಯಲ್ಲಿ ಮುಕ್ತ, ಪಾರದರ್ಶಕ ಮತ್ತು ನ್ಯಾಯ ಸಮ್ಮತ ಲೋಕಸಭಾ ಚುನಾವಣೆ ನಡೆಸಲು ಅಽಕಾರಿಗಳು ಜವಾಬ್ದಾರಿ ಅರಿತು ಸನ್ನದ್ಧರಾಗಿ, ಚುನಾವಣಾ ಆಯೋಗ ಸೂಚಿಸುವ ಎಲ್ಲ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಿ ಎಂದು ಜಿಲ್ಲಾಽಕಾರಿ ಗಂಗೂಬಾಯಿ ಮಾನಕರ್ ಸೂಚಿಸಿದರು.
    ಲೋಕಸಭಾ ಚುನಾಣೆಗೆ ಸಂಬಂಧಿಸಿದಂತೆ ಈಗಾಗಲೇ ಸಹಾಯಕ ಚುನಾವಣಾಕಾರಿಗಳು, ಮಾದರಿ ನೀತಿ ಸಂಹಿತೆ, ಸೆಕ್ಟರ್ ಅಕಾರಿಗಳ ತಂಡ, ಫ್ಲಯಿಂಗ್‌ ಸ್ಕ್ವಾಡ್‌ ತಂಡ, ವಿಡಿಯೋ ವೀಕ್ಷಣಾ ತಂಡ, ಎಂಸಿಎಂಸಿ ತಂಡ, ಲೆಕ್ಕಪರಿಶೀಲನಾ ತಂಡ, ದೂರು ನಿರ್ವಹಣಾ ತಂಡ, ನಗದು ವಶ ಪರಿಶೀಲಾ ತಂಡ, ಸಹಾಯಕ ವೆಚ್ಚ ವೀಕ್ಷಕ ತಂಡ ಸೇರಿದಂತೆ ಹಲವು ತಂಡಗಳನ್ನು ರಚಿಸಲಾಗಿದೆ. ಕರ್ತವ್ಯಕ್ಕೆ ನಿಯೋಜನೆಯಾಗಿರುವ ಅದಿಕಾರಿ, ಸಿಬ್ಬಂದಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.
    ಲೋಕಸಭೆ ಚುನಾವಣೆಗೆ ಪ್ರತಿ ಅಭ್ಯರ್ಥಿಗೆ 95 ಲಕ್ಷ ರೂ.ಗರಿಷ್ಠ ವೆಚ್ಚ ಮಾಡುವ ಮಿತಿ ಇದೆ. ಈಗಾಗಲೇ ಆಯೋಗ ನಿಗದಿಪಡಿಸಿರುವ ವಸ್ತು ಮತ್ತು ಸೇವೆಗಳ ವೆಚ್ಚದ ವಿವರಗಳೊಂದಿಗೆ ಅಭ್ಯರ್ಥಿಗಳ ಖರ್ಚುವೆಚ್ಚಗಳನ್ನು ನಿಯಮಿತವಾಗಿ ಪರಿಶೀಲಿಸಬೇಕು. ಸಂಜಾರಿ ಜಾಗೃತ ದಳದ ಅಧಿಕಾರಿಗಳು ದೂರುಗಳನ್ನು ಸ್ಥಳಕ್ಕೆ ತೆರಳಿ ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು. ಪ್ರತಿಯೊಂದು ಘಟನೆಯ ವಿಡಿಯೋ ಚಿತ್ರೀಕರಣ ಮಾಡಿಕೊಳ್ಳಬೇಕು ಎಂದರು.
    ಚುನಾವಣಾ ಕರ್ತವ್ಯ ನಿರ್ವಹಣೆ ವೇಳೆಯಲ್ಲಿ ಯಾವುದೇ ಗೊಂದಲಗಳಿಗೆ ಅಸ್ಪದ ನೀಡಬೇಡಿ. ಯಾವುದೇ ಗೊಂದಲಗಳಿದ್ದಲ್ಲಿ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ಅವುಗಳನ್ನು ಬಗೆಹರಿಸಿಕೊಳ್ಳಿ. ತರಬೇತಿಯ ಅವಽಯಲ್ಲಿ ಸಮಸ್ಯೆ ಮತ್ತು ಗೊಂದಲಗಳನ್ನು ಬಗೆಹರಿಸಿಕೊಳ್ಳಿ. ಯಾವುದೇ ಒತ್ತಡಗಳಿಗೆ ಒಳಗಾಗದೇ ,ಚುನಾವಣಾ ಆಯೋಗವು ತಮಗೆ ನೀಡಿರುವ ಅಽಕಾರಗಳನ್ನು ಚಲಾಯಿಸಿ ಎಂದರು.
    ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ್, ಸಹಾಯಕ ಚುನಾವಣಾಧಿಕಾರಿಗಳಾದ ಅಜ್ಜಪ್ಪ ಸೊಲಗದ, ಸ್ಟೆಲ್ಲಾ ವರ್ಗಿಸ್, ಜಿಪಂ ಮುಖ್ಯ ಲೆಕ್ಕಾಧಿಕಾರಿ ಆನಂದ್, ಜಿಲ್ಲಾ ತರಬೇತಿ ನೋಡೆಲ್ ಅಧಿಕಾರಿ ಸೋಮಶೇಖರ್ ಮೇಸ್ತ ವೇದಿಕೆಯಲ್ಲಿದ್ದರು. ಮಾಸ್ಟರ್ ಟ್ರೇನರ್‌ ದಿನೇಶ್ ಶೇಟ್ ತರಬೇತಿ ನೀಡಿದರು.

    ಇದನ್ನೂ ಓದಿ: ಅಂಕೋಲಾ ಬಳಿ ಬಸ್‌ ಪಲ್ಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts