More

    ರೈಲು ಓಡಾಟಕ್ಕೆ ಪ್ರಾಮಾಣಿಕ ಪ್ರಯತ್ನ

    ಗಜೇಂದ್ರಗಡ: ಪಟ್ಟಣ ಸೇರಿದಂತೆ ಸುತ್ತಲಿನ ಜನರ ಆಶಯದಂತೆ ಈ ಭಾಗದಲ್ಲಿ ರೈಲು ಓಡಾಟಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.

    ಗದಗ-ವಾಡಿ-ಗಜೇಂದ್ರಗಡ ರೈಲ್ವೆ ಹೋರಾಟ ಸಮಿತಿ ಸದಸ್ಯರೊಂದಿಗೆ ಪಟ್ಟಣದ ಕುಷ್ಟಗಿ ರಸ್ತೆಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್​ನಲ್ಲಿ ಮಂಗಳವಾರ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.

    ‘ಗದಗ-ವಾಡಿ-ಗಜೇಂದ್ರಗಡ ರೈಲ್ವೆ ಹೋರಾಟ ಸಮಿತಿಯೊಂದಿಗೆ ಶೀಘ್ರವೇ ರೈಲ್ವೆ ಸಚಿವರನ್ನು ಭೇಟಿ ಮಾಡಿ ಯೋಜನೆ ಕುರಿತು ರ್ಚಚಿಸೋಣ. ಎರಡು ತಂಡಗಳಾಗಿ ಹೋರಾಟ ನಡೆಸುವುದು ಸೂಕ್ತವಲ್ಲ’ ಎಂದರು.

    ಕರೊನಾ ಹಿನ್ನೆಲೆಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಸಾಕಷ್ಟು ಹಿನ್ನಡೆಯಾಗಿದೆ. ಹೀಗಾಗಿ ನೆರೆಯ ತಾಲೂಕು ಕೇಂದ್ರದಲ್ಲಿನ ಯೋಜನೆ ರದ್ದುಗೊಳಿಸುವುದು ಸಾಧ್ಯವಾಗದ ಮಾತು. ಮುಂದಿನ ದಿನಗಳಲ್ಲಿ ಆದ್ಯತೆಯ ಮೇರೆಗೆ ನನ್ನ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತದೆ ಎಂದರು.

    ಗಣೇಶಸಿಂಗ್ ಬ್ಯಾಳಿ ಮಾತನಾಡಿ, ‘ಗದಗ ವಾಡಿ ರೈಲು ಮಾರ್ಗವು ಕೊಟುಮಚಗಿ, ನರೇಗಲ್, ಗಜೇಂದ್ರಗಡ, ಹನುಮಸಾಗರ ಹಾಗೂ ಇಲಕಲ್ ಮಾರ್ಗವಾಗಿ ವಾಡಿ ತಲುಪಬೇಕಿತ್ತು. ಆದರೆ, ಇಂದು ಯೋಜನೆಯ ಫೈಲ್​ಗಳು ಮಾಯವಾಗಿರುವುದು ವಿಪರ್ಯಾಸ. ಪರಿಣಾಮ ನಕ್ಷೆಯಲ್ಲಿಲ್ಲದ ನೆರೆಯ ತಾಲೂಕು ಕೇಂದ್ರದಲ್ಲಿ ಗದಗ ವಾಡಿ ರೈಲ್ವೆ ಈಗಾಗಲೇ ಓಡಾಟಕ್ಕೆ ಸಿದ್ಥತೆಯಲ್ಲಿದೆ’ ಎಂದರು.

    ಹೋರಾಟ ಸಮಿತಿಯ ಅಧ್ಯಕ್ಷ ಅಶೋಕ ಬಾಗಮಾರ, ಬಸವರಾಜ ವಕ್ಕಲಕುಂಟಿ ಹಾಗೂ ಎಂ.ಎಸ್.ಹಡಪದ ಮಾತನಾಡಿದರು. ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಾಸಕ ಕಳಕಪ್ಪ ಬಂಡಿ, ಪುರಸಭೆ ಸದಸ್ಯರಾದ ರೂಪ್ಲೇಶ ರಾಠೋಡ, ಸುಭಾಸ ಮ್ಯಾಗೇರಿ, ಯಮನೂರ ತಿರಕೋಜಿ, ರಾಜು ಸಾಂಗ್ಲೀಕರ, ಯು.ಆರ್. ಚನ್ನಮ್ಮನವರ ಹಾಗೂ ಎಚ್.ಎಸ್.ಸೋಂಪುರ, ಅಶೋಕ ವನ್ನಾಲ, ಶರಣಪ್ಪ ರೇವಡಿ, ಡಾ.ರಾಜೇಂದ್ರ ಗಚ್ಚಿನಮಠ, ಬಸವರಾಜ ವಂಕಲಕುಂಟಿ, ಸಿದ್ದಣ್ಣ ಚೋಳಿನ, ಶಂಕರ ಸವಣೂರ, ಪ್ರಭು ಚವಡಿ, ದತ್ತೂಸಾ ಬಾಕಳೆ, ರವಿ ಶಿಂಗ್ರಿ, ಮೋಹನ ಕನಕೇರಿ, ರೇಣುಕಯ್ಯ ಅಂಗಡಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts