More

    ಬೀಗ ಹಾಕಿದ್ದ ಮನೆಗೆ ಕನ್ನ ಹಾಕಿದ ಖದೀಮರು… ಮೊಮ್ಮಗನ ಓದಿಗಾಗಿ ಇಟ್ಟ 90 ಲಕ್ಷ ರೂ. ಕದ್ದೊಯ್ದರು

    ಬೆಂಗಳೂರು : ನಗರದಲ್ಲಿ ಕೋವಿಡ್​ ಕರ್ಫ್ಯೂ ವಿಧಿಸಿರುವ ಕಾರಣ ಪರಸ್ಥಳದ ಮಗಳ ಮನೆಯಲ್ಲೇ ಉಳಿದುಕೊಂಡ ನಿವೃತ್ತ ಅಧಿಕಾರಿಯ ಮನೆ ಬೀಗ ಒಡೆದು 90 ಲಕ್ಷ ರೂ.ಗಳನ್ನು ಕಳ್ಳರು ದೋಚಿದ್ದಾರೆ. ಮೊಮ್ಮಗನ ಉನ್ನತ ವಿದ್ಯಾಭ್ಯಾಸಕ್ಕೆಂದು ಹಣ ಕೂಡಿಟ್ಟಿದ್ದ ಹಿರಿಯ ನಾಗರೀಕ ಮನನೊಂದು ಪೊಲೀಸರ ಮೊರೆಹೋಗಿದ್ದಾರೆ.

    ಬೆಂಗಳೂರಿನ ಬಗಲಗುಂಟೆ ಬಳಿಯ ಎಂಎಚ್​ಆರ್​ ಲೇಔಟ್​ನಲ್ಲಿ ನೆಲೆಸಿರುವ ನಿವೃತ್ತ ಅಧಿಕಾರಿಯೊಬ್ಬರು, ತಮ್ಮ ಎಂಬಿಬಿಎಸ್​ ಮುಗಿಸಿದ್ದ ಮೊಮ್ಮಗನಿಗೆ ಸ್ನಾತ್ತಕೋತ್ತರ ಪದವಿ ಮಾಡಿಸಲು 90 ಲಕ್ಷ ರೂ. ಕೂಡಿಟ್ಟಿದ್ದರು. ತಮ್ಮ ಮೊಮ್ಮಗನ ಜೊತೆಯಲ್ಲಿ ಏಪ್ರಿಲ್​ 23 ರಂದು ಚಿಂತಾಮಣಿಯಲ್ಲಿನ ಮಗಳ ಮನೆಗೆ ಹೋಗಿದ್ದರು. ಕೋವಿಡ್​ ಕರ್ಫ್ಯೂ ಕಾರಣದಿಂದಾಗಿ ಅಲ್ಲಿಯೇ ಉಳಿದುಕೊಂಡಿದ್ದರು ಎನ್ನಲಾಗಿದೆ.

    ಇದನ್ನೂ ಓದಿ: ಆಕ್ಸಿಜನ್ ಕಾಳದಂಧೆ ಹಿಂದೆ ಖ್ಯಾತ ಬಿಸಿನೆಸ್​ಮನ್ ! ಆರಂಭವಾಗಿದೆ ಹುಡುಕಾಟ

    ಮೇ 4 ರಂದು ಪಕ್ಕದ ಮನೆಯವರು ಅವರಿಗೆ ಕರೆ ಮಾಡಿ ಮುಖ್ಯ ದ್ವಾರ ತೆಗೆದಿರುವುದಾಗಿ ವಿಷಯ ಮುಟ್ಟಿಸಿದ್ದಾರೆ. ಚಿಂತಾಮಣಿಯಿಂದ ನಿವೃತ್ತ ಅಧಿಕಾರಿಯು ವಾಪಸ್​ ಬಂದು ನೋಡಿದಾಗ ಮೊಮ್ಮಗನ ವ್ಯಾಸಂಗಕ್ಕಾಗಿ ಸಂಗ್ರಹಿಸಿದ್ದ 90 ಲಕ್ಷ ರೂ. ಕಳವಾಗಿರುವುದು ಬೆಳಕಿಗೆ ಬಂದಿದೆ.

    ಮನನೊಂದ ನಿವೃತ್ತ ಅಧಿಕಾರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಬಗಲಗುಂಟೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸುತ್ತಮುತ್ತಲ ಸಿಸಿ ಕ್ಯಾಮರಾ ಮತ್ತು ಮೊಬೈಲ್​ ಸಿಗ್ನಲ್​ಗಳ ಪರಿಶೀಲನೆ ನಡೆಸಿದ್ದು, ಆರೋಪಿಗಳ ಬಂಧನಕ್ಕೆ ಬಲೆಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಉಚಿತವಾಗಿ ಲಸಿಕೆ ಒದಗಿಸಿ ಎಂದು ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ ದೀದಿ ಸರ್ಕಾರ

    ಕರೊನಾದಿಂದ ಚೇತರಿಸಿಕೊಂಡ ಮೇಲೆ ಟೂತ್​ಬ್ರಶ್​ ಬದಲಿಸಿ : ತಜ್ಞರ ಸಲಹೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts