More

    ಉತ್ತಮ ಸೇವೆಯಿಂದ ಸಾವಿನ ನಂತರವೂ ಮನ್ನಣೆ

    ಡಿವೈಎಸ್ಪಿ ರವಿ ಹೇಳಿಕೆ

    ದೊಡ್ಡಬಳ್ಳಾಪುರದಲ್ಲಿ ಹುತಾತ್ಮ ದಿ.ಜಗದೀಶ್ ಪುಣ್ಯಸ್ಮರಣೆ


    ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
    ಅಧಿಕಾರ ಇದ್ದಾಗ ಬಡವರ ಪರ ಮಾಡುವ ಕೆಲಸವೇ ಅತಿ ಮುಖ್ಯ. ಅಂತಹ ಕಾರ್ಯವನ್ನು ಸಾವಿನ ನಂತರವೂ ಸಮಾಜ ಸ್ಮರಿಸುತ್ತದೆ ಎಂದು ದೊಡ್ಡಬಳ್ಳಾಪುರ ಉಪವಿಭಾಗದ ಡಿವೈಎಸ್ಪಿ ರವಿ ಪಿ. ಹೇಳಿದರು.
    ನಗರದ ಪಿಎಸ್‌ಐ ಜಗದೀಶ್ ವೃತ್ತದಲ್ಲಿ ಹಮ್ಮಿಕೊಂಡಿದ್ದ ದಿ.ಜಗದೀಶ್ ಅವರ 8ನೇ ಪುಣ್ಯಸ್ಮರಣೆಯಲ್ಲಿ ಮಾತನಾಡಿದರು.
    ಪೊಲೀಸ್ ಇಲಾಖೆ ಕುರಿತು ಈ ಭಾಗದ ಸಾರ್ವಜನಿಕರಲ್ಲಿ ಒಳ್ಳೆಯ ಅಭಿಪ್ರಾಯವಿದೆ. ನನ್ನ 25 ವರ್ಷಗಳ ಸೇವಾ ಅವಧಿಯಲ್ಲಿ ಆದ ಅನುಭವಗಳಿಗಿಂತ ದೊಡ್ಡಬಳ್ಳಾಪುರದ ಈ 2 ತಿಂಗಳ ಅನುಭವ ಸಂಪೂರ್ಣ ವ್ಯತಿರಿಕ್ತವಾಗಿದೆ. ಒಬ್ಬ ದಕ್ಷ ಪೊಲೀಸ್ ಅಧಿಕಾರಿಯ ಸಾವಿನ ಬಳಿಕವೂ 8 ವರ್ಷಗಳಿಂದ ಅವರ ಸೇವೆ ಸ್ಮರಿಸುತ್ತಾ ಘಟನೆ ಜೀವಂತವಾಗಿಟ್ಟಿರುವುದು ಹೆಮ್ಮೆಯ ವಿಷಯ ಎಂದರು.
    ಪಿಎಸ್‌ಐ ಜಗದೀಶ್ ವೃತ್ತವನ್ನು ನಿರ್ಮಾಣ ಮಾಡಿ, ಜಗದೀಶ್ ಅವರ ಪ್ರತಿಮೆ ಸ್ಥಾಪನೆಗೆ ನಗರಸಭೆ ಅಧಿಕಾರಿಗಳು ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.
    ನೆಲಮಂಗಲ ಡಿವೈಎಸ್ಪಿ ಜಗದೀಶ ಮಾತನಾಡಿ, ಪಿಎಸ್‌ಐ ಜಗದೀಶ್ ಹಾಗೂ ನಾನು ಜತೆಯಲ್ಲೇ ತರಬೇತಿ ಪಡೆದು, ಕೆಲಸ ಮಾಡಿದವರು. ಜಗದೀಶ ಅವರನ್ನು ಕಳೆದುಕೊಂಡಿದ್ದು ಇಲಾಖೆಗೆ ತುಂಬಲಾರದ ನಷ್ಟ ಎಂದರು.
    ಕರವೇ ಪ್ರಧಾನ ಕಾರ್ಯದರ್ಶಿ ರಾಜಘಟ್ಟ ರವಿ ಮಾತನಾಡಿ, ವರ್ಷದಿಂದ ಪಿಎಸ್‌ಐ ಜಗದೀಶ್ ಫೌಂಡೇಷನ್ ಟ್ರಸ್ಟ್ ಮಾಡಿಕೊಂಡು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ತೀರ್ಮಾನಿಸಲಾಗಿದೆ. ಲೋಕಸೇವಾ ಆಯೋಗದ ಪರೀಕ್ಷೆ ಆಕಾಂಕ್ಷಿಗಳಿಗೆ ಅಗತ್ಯ ತರಬೇತಿ ನೀಡುವ ಆಲೋಚನೆ ಇದೆ ಎಂದರು.
    ದಿ.ಜಗದೀಶ್ ತಂದೆ ಶ್ರೀನಿವಾಸಯ್ಯ, ತಾಯಿ ಕಮಲಮ್ಮ, ಪತ್ನಿ ರಮ್ಯಾ, ಮಕ್ಕಳಾದ ಚಿನ್ಮಯಿ, ಶುಭಾಷಿಣಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts