ಉದ್ಯೋಗ ಕೊಡಿಸುವುದಾಗಿ ಯುವಕರಿಗೆ 89 ಲಕ್ಷ ರೂ. ವಂಚನೆ

shimogga rural police station
ಶಿವಮೊಗ್ಗ ಗ್ರಾಮಾಂತರ ಠಾಣೆ
Published on

ಶಿವಮೊಗ್ಗ: ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹರಿಗೆಯ ಯುವಕ ಮತ್ತು ಆತನ ಸ್ನೇಹಿತರಿಗೆ ವ್ಯಕ್ತಿಯೊಬ್ಬ ಬರೋಬ್ಬರಿ 89 ಲಕ್ಷ ರೂ. ವಂಚಿಸಿದ್ದಾನೆ.

ಶಿವಮೊಗ್ಗದ ಹರಿಗೆಯ ಯುವಕನೊಬ್ಬನಿಗೆ ಬೆಂಗಳೂರಿನಲ್ಲಿರುವ ಸ್ನೇಹಿತರೊಬ್ಬರ ಮೂಲಕ ಒಡಿಶಾ ಮೂಲದ ಸೂರ್ಯಂಶ್ ಅಲಿಯಾಸ್ ಕಾಲಿರಾತ್ ಎಂಬಾತನ ಪರಿಚಯವಾಗಿತ್ತು. ಆತ ತನ್ನದೇ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿದ್ದನು. ಆ ವಿಚಾರವನ್ನು ರಾಕೇಶ್ ಶಿವಮೊಗ್ಗದಲ್ಲಿರುವ ತನ್ನ ಸ್ನೇಹಿತರಿಗೆ ತಿಳಿಸಿದ್ದ. ಯುವಕ ತನ್ನ ಹಲವು ಸ್ನೇಹಿತರ ಬಯೋಡೇಟಾಗಳನ್ನು ಸೂರ್ಯಂಶ್‌ಗೆ ಕಳುಹಿಸಿದ್ದ. ಆದರೆ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಕೊಡಿಸಲು ತಲಾ 1.60 ಲಕ್ಷ ರೂ. ನೀಡಬೇಕು. ಇದಕ್ಕೆ ಪ್ರತಿಯಾಗಿ ಕಂಪನಿಯಿಂದ ಲ್ಯಾಪ್‌ಟಾಪ್ ಒದಗಿಸಲಾಗುತ್ತದೆ ಎಂದು ಸೂರ್ಯಂಶ್ ನಂಬಿಸಿದ್ದ. ಹರಿಗೆಯ ಯುವಕ ವಿವಿಧ ಬ್ಯಾಂಕ್ ಖಾತೆಗಳಿಂದ ಸೂರ್ಯಂಶ್ ಸೂಚಿಸಿದ ಬ್ಯಾಂಕ್ ಖಾತೆಗೆ ಇದುವರೆಗೆ ಒಟ್ಟಾರೆ 89 ಲಕ್ಷ ರೂ. ಕಳುಹಿಸಿದ್ದು ಇಲ್ಲಿವರೆಗೆ ಉದ್ಯೋಗವು ಸಿಕ್ಕಿಲ್ಲ, ಲ್ಯಾಪ್‌ಟಾಪ್ ಕೂಡ ಕೊಡಿಸಿಲ್ಲ. ಮೊಬೈಲ್ ಸಂಪರ್ಕಕ್ಕೆ ಸಿಗುತ್ತಿಲ್ಲವೆಂದು ದೂರಿ ಯುವಕ ಶಿವಮೊಗ್ಗ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net