More

    80 ವರ್ಷ ಮೇಲ್ಪಟ್ಟವರು ವಿಮಾನದಲ್ಲಿ ಸಂಚರಿಸುವಂತಿಲ್ಲ!

    ಮುಂಬೈ: ರಾಜಧಾನಿ ದೆಹಲಿಯಿಂದ 15 ಸ್ಥಳಗಳಿಗೆ ಮಂಗಳವಾರದಿಂದ ರೈಲು ಸಂಚಾರ ಪುನರಾರಂಭಿಸಿರುವ ಕೇಂದ್ರ ಸರ್ಕಾರ ಶೀಘ್ರದಲ್ಲೇ ದೇಶಿಯ ವಿಮಾನ ಸಂಚಾರ ಪುನರಾರಂಭಿಸುವ ಸುಳಿವು ಬಿಟ್ಟುಕೊಟ್ಟಿದೆ. ಮೇ 17ರ ನಂತರದಲ್ಲಿ ವಿಮಾನ ಸಂಚಾರ ಆರಂಭವಾಗಬಹುದು ಎಂದು ಹೇಳಲಾಗುತ್ತಿದ್ದರೂ, ಅದಕ್ಕೂ ಮುನ್ನವೇ ಸಂಚಾರ ಆರಂಭವಾಗುವ ಸಾಧ್ಯತೆ ದಟ್ಟವಾಗಿದೆ.

    ಕೋವಿಡ್​ 19 ಸೋಂಕು ದೇಶದಲ್ಲಿ ಹೆಚ್ಚಾಗುತ್ತಿರುವಂತೆ ಮಾರ್ಚ್​ 25ರಿಂದ ದೇಶಿಯ ಹಾಗೂ ಅಂತರಾಷ್ಟ್ರೀಯ ವಿಮಾನ ಸಂಚಾರವನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿತ್ತು.

    ಇದನ್ನೂ ಓದಿ: ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​ ಚೇತರಿಕೆ

    ವಿಮಾನ ಸಂಚಾರ ಮರುಆರಂಭಕ್ಕೆ ಸ್ಟಾಂಡರ್ಡ್​ ಆಪರೇಟಿಂಗ್​ ಪ್ರೊಸಿಜರ್​ (ಎಸ್​ಒಪಿ) ಅನ್ನು ರೂಪಿಸುತ್ತಿರುವ ಸರ್ಕಾರ, 80 ವರ್ಷ ಮೇಲ್ಪಟ್ಟವರಿಗೆ ವಿಮಾನ ಸಂಚಾರ ನಿರ್ಬಂಧಿಸಲು ನಿರ್ಧರಿಸಿದೆ. ಅಲ್ಲದೆ, ಪ್ರಯಾಣಿಕರು ತಮ್ಮೊಂದಿಗೆ ಕ್ಯಾಬಿನ್​ನಲ್ಲಿ ವೈಯಕ್ತಿಕ ಸಾಮಾನುಗಳನ್ನು ಕೊಂಡೊಯ್ಯುವುದಕ್ಕೂ ನಿರ್ಬಂಧ ವಿಧಿಸಲಾಗುತ್ತಿದೆ.

    ಸೋಮವಾರ ನಡೆದ ನಾಗರಿಕ ವಿಮಾನಯಾನ ಸಚಿವಾಲಯದ ಅಧಿಕಾರಿಗಳು, ವಿಮಾನಯಾನ ಸಂಸ್ಥೆಗಳು ಮತ್ತು ವಿಮಾನನಿಲ್ದಾಣ ನಿರ್ವಾಹಕರ ಸಭೆಯಲ್ಲಿ ಈ ವಿಷಯಗಳನ್ನು ಪ್ರಸ್ತಾಪಿಸಲಾಗಿದೆ. ಆದರೆ, ದೈಹಿಕ ಅಂತರ ಕಾಯ್ದುಕೊಳ್ಳಲು ಮಧ್ಯದ ಸೀಟುಗಳನ್ನು ಭರ್ತಿ ಮಾಡದಿರುವ ನಿರ್ಧಾರವನ್ನು ಕೈಬಿಡಲಾಗಿದೆ. ಅಲ್ಲದೆ, ಟರ್ಮಿನಲ್​ ಗೇಟ್​ಗಳಲ್ಲಿ ಪ್ರಯಾಣಿಕರ ದಟ್ಟಣೆ ತಡೆಗಟ್ಟುವ ಉದ್ದೇಶದಿಂದ ಗುರುತಿನಚೀಟಿ ಪರಿಶೀಲನೆಯನ್ನೂ ಕೈಬಿಡಲು ನಿರ್ಧರಿಸಲಾಗಿದೆ ಎನ್ನಲಾಗುತ್ತಿದೆ.

    ಇದನ್ನೂ ಓದಿ: ಎಟಿಎಂ ಒಳಗೆ ಹಾವಿದೆ… ಜೋಕೆ!

    ಮನೆಯಲ್ಲೇ ವೆಬ್​ ಚೆಕ್​ಇನ್​: ಮನೆಯಲ್ಲೇ ವೆಬ್​ ಚೆಕ್​ಇನ್​ ಪೂರ್ಣಗೊಳಿಸಿದ ನಂತರದಲ್ಲಿ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಬರಬಹುದಾಗಿದೆ. ಪ್ರಯಾಣಿಕರು ಎರಡು ಗಂಟೆ ಮೊದಲೇ ನಿಲ್ದಾಣಕ್ಕೆ ಬರಬೇಕು. ಮುಂದಿನ ಆರು ಗಂಟೆಗಳಲ್ಲಿ ಹೊರಡಲಿರುವ ವಿಮಾನಗಳಲ್ಲಿ ಪ್ರಯಾಣಿಸುವವರಿಗೆ ಮಾತ್ರವೇ ನಿಲ್ದಾಣಕ್ಕೆ ಪ್ರವೇಶ ನೀಡಲಾಗುತ್ತದೆ.

    ಪ್ರತಿ ಪ್ರಯಾಣಿಕರು ತಮ್ಮೊಂದಿಗೆ 20 ಕೆಜಿಗಿಂತಲೂ ಕಡಿಮೆ ಭಾರದ ಲಗ್ಗೇಜ್​ ಅನ್ನು ಕೊಂಡೊಯ್ಯಬಹುದಾಗಿದೆ. 80 ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಾದವರಿಗೆ ವಿಮಾನದಲ್ಲಿ ಪ್ರಯಾಣಿಸಲು ಅವಕಾಶ ನಿರಾಕರಿಸಲಾಗಿದೆ. ಒಂದು ವೇಳೆ ವಯಸ್ಸಿನ ಬಗ್ಗೆ ತಪ್ಪು ಮಾಹಿತಿ ನೀಡಿದ್ದರೆ ಅಥವಾ ಜ್ವರ ಇದ್ದರೆ, ಅಂಥವರಿಗೆ ಯಾವುದೇ ದಂಡ ವಸೂಲಿ ಮಾಡದೆ, ಬೇರೊಂದು ದಿನಾಂಕದಲ್ಲಿ ಪ್ರಯಾಣಿಸಲು ಅವಕಾಶ ಮಾಡಿಕೊಡಲಾಗುತ್ತದೆ.

    ಆರೋಗ್ಯ ಸೇತು ಆ್ಯಪ್​ ಕಡ್ಡಾಯ: ವಿಮಾನದಲ್ಲಿ ಸಂಚರಿಸಲು ಬಯಸುವವರು ಕಡ್ಡಾಯವಾಗಿ ಆರೋಗ್ಯ ಸೇತು ಆ್ಯಪ್​ ಅನ್ನು ಡೌನ್​ಲೋಡ್​ ಮಾಡಿಕೊಂಡಿರಬೇಕು. ಹಾಗೂ ಯಾವುದೇ ಸೋಂಕಿನಿಂದ ಬಳಲುತ್ತಿಲ್ಲ (ಗ್ರೀನ್​ ಸ್ಟೇಟಸ್​) ಎಂಬುದು ಖಚಿತವಾದವರಿಗೆ ಮಾತ್ರವೇ ನಿಲ್ದಾಣ ಪ್ರವೇಶಿಸಲು ಅವಕಾಶ ಮಾಡಿಕೊಡಲಾಗುತ್ತದೆ.

    ಇದನ್ನೂ ಓದಿ: ಗುಜರಾತ್​ನಲ್ಲಿ ಬಿಜೆಪಿಗೆ ಭಾರಿ ಶಾಕ್​; ಸಚಿವನ ಆಯ್ಕೆಯನ್ನೇ ಅಸಿಂಧುಗೊಳಿಸಿದ ಹೈಕೋರ್ಟ್​

    3 ಗಂಟೆ ಮೊದಲು ಓಪನ್​: ಪ್ರಯಾಣಿಕರ ಚೆಕ್​ ಇನ್​ ಕೌಂಟರ್​ಗಳನ್ನು ಮೂರು ಗಂಟೆ ಮೊದಲೇ ತೆರೆಯುವಂತೆ ವಿಮಾನಯಾನ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ. ವಿಮಾನ ಹೊರಡುವ 60-75 ನಿಮಿಷ ಮೊದಲೇ ಚೆಕ್​ ಇನ್​ ಕೌಂಟರ್​ಗಳನ್ನು ಬಂದ್​ ಮಾಡುವುದು ಕಡ್ಡಾಯವಾಗಿದೆ. ವಿಮಾನ ಹೊರಡುವ ಒಂದು ಗಂಟೆ ಮೊದಲೇ ವಿಮಾನವನ್ನು ಹತ್ತಲು ಅವಕಾಶ ಮಾಡಿಕೊಡಲಾಗುತ್ತದೆ. ಹೊರಡಲು 20 ನಿಮಿಷ ಇರುವಾಗಲೇ ವಿಮಾನದ ಪ್ರವೇಶದ್ವಾರಗಳನ್ನು ಬಂದ್​ ಮಾಡಲಾಗುತ್ತದೆ.

    ಡೋರ್​ ಫ್ರೇಮ್​ ಮೆಟಲ್​ ಡಿಟೆಕ್ಟರ್​ ಬೀಪ್​ ಮಾಡಿದರೆ ಮಾತ್ರವೇ ಪ್ರಯಾಣಿಕರನ್ನು ಸಂಪೂರ್ಣವಾಗಿ ಪರಿಶೀಲಿಸಲು ಅವಕಾಶ ಮಾಡಿಕೊಡಲಾಗಿದೆ. ಪ್ರಾಥಮಿಕ ಹಂತದಲ್ಲಿ ಪ್ರಯಾಣಿಕರ ಬೋರ್ಡಿಂಗ್​ ಪಾಸ್​ ಮೇಲೆ ಸ್ಟಾಂಪ್​ ಹಾಕದಂತೆ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್​ಎಫ್​) ಸಿಬ್ಬಂದಿಗೆ ಸೂಚಿಸಲಾಗಿದೆ.

    ಇದನ್ನೂ ಓದಿ: ಜಪ್ತಿ ಮಾಡಲಾಗಿದ್ದ ವಾಹನಗಳ ಮಾಲೀಕರಿಂದ 5 ಕೋಟಿ ರೂ. ದಂಡ ವಸೂಲಿ

    ವಿಮಾನವನ್ನು ಹತ್ತುವಾಗ ಪ್ರಯಾಣಿಕರ ದೈಹಿಕ ತಾಪಮಾನವನ್ನು ಕಡ್ಡಾಯವಾಗಿ ಪರಿಶೀಲಿಸುವಂತೆ ವಿಮಾನಯಾನ ಸಂಸ್ಥೆಗಳಿಗೆ ಸೂಚಿಸಲಾಗಿದೆ.

    ವಿಮಾನದಲ್ಲಿ ಪ್ರಯಾಣಿಕರಿಗೆ ಆಹಾರ ನೀಡಲಾಗುವುದಿಲ್ಲ. ಗ್ಯಾಲೆಯಲ್ಲಿ ಕುಡಿಯುವ ನೀರಿನ ಕಪ್​ಗಳು ಮತ್ತು ಬಾಟಲ್​ಗಳನ್ನು ಇರಿಸಲಾಗಿರುತ್ತದೆ.

    ಒಂದು ವೇಳೆ ವಿಮಾನ ಹಾರಾಟ ಆರಂಭಿಸಿದ ನಂತರದಲ್ಲಿ ಯಾರಾದರೂ ಅಸ್ವಸ್ಥರಾದರೆ ಅವರನ್ನು ಪ್ರತ್ಯೇಕವಾಗಿರಿಸುವ ಸಲುವಾಗಿ ವಿಮಾನದ ಕೊನೆಯ ಸೀಟುಗಳನ್ನು ಭರ್ತಿ ಮಾಡದೆ ಹಾಗೆ ಬಿಡಬೇಕು ಎಂದು ಸೂಚಿಸಲಾಗಿದೆ. ಇಂಥ ಪ್ರಕರಣಗಳನ್ನು ನಿರ್ವಹಿಸುವ ವಿಮಾನದ ಸಿಬ್ಬಂದಿ ವೈಯಕ್ತಿಕ ರಕ್ಷಾ ಕವಚ (ಪಿಪಿಇ) ಧರಿಸಿರುವುದು ಕಡ್ಡಾಯವಾಗಿದೆ.

    ಏರ್​ಪೋರ್ಟ್​​ಗೆ ಬಂದಿಳಿಯುತ್ತಿದ್ದಂತೆ ನೆಲದ ಮೇಲೆ ಮಂಡಿಯೂರಿ ಕುಳಿತುಬಿಟ್ಟರು ಇವರು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts