More

    ಮೊದಲ ದಿನ 8 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು

    ಕೊಳ್ಳೇಗಾಲ: ಸೋಮವಾರದಿಂದ ಪ್ರಾರಂಭವಾದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕೊಳ್ಳೇಗಾಲ ಬ್ಲಾಕ್‌ನ 8 ಪರೀಕ್ಷಾ ಕೇಂದ್ರದಲ್ಲಿ 2039 ವಿದ್ಯಾರ್ಥಿಗಳ ಪೈಕಿ 8 ವಿದ್ಯಾರ್ಥಿಗಳು ಗೈರಾಗಿದ್ದರು.

    ಕೊಳ್ಳೇಗಾಲ ಬ್ಲಾಕ್‌ನಲ್ಲಿ ತೆರೆಯಲಾಗಿದ್ದ 8 ಪರೀಕ್ಷಾ ಕೇಂದ್ರಗಳಲ್ಲಿ ಪಟ್ಟಣದಲ್ಲಿರುವ ವಾಸವಿ ವಿದ್ಯಾಕೇಂದ್ರ, ಎಂ.ಜಿ.ಎಸ್.ವಿ ಕಾಲೇಜು, ಸಂತ ಫ್ರಾೃನ್ಸಿಸ್ ಅಸ್ಸಿಸ್ಸಿ ಶಾಲೆ, ಎಸ್.ವಿ.ಕೆ.ಕಾಲೇಜು, ಗ್ರಾಮಾಂತರ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಕಾಮಗೆರೆಯ ಸಂತ ಕ್ಷೇವಿಯರ್ ಶಾಲೆ, ಪ್ರಕಾಶ್ ಪಾಳ್ಯದ ಡಾನ್ ಬಾಸ್ಕೋ, ಸತ್ತೇಗಾಲದ ಸರ್ಕಾರಿ ಪ್ರೌಢಶಾಲೆ ಹಾಗೂ ಟಗರಪುರದ ಜ್ಞಾನ ಭಾರತಿ ಶಾಲೆಯಲ್ಲಿ ಪರೀಕ್ಷೆ ನಡೆಯಿತು.

    ನಕಲು ಮುಕ್ತ ಹಾಗೂ ವಿದ್ಯಾರ್ಥಿ ಸ್ನೇಹಿ ಪರೀಕ್ಷೆ ನಡೆಸಲು ವಿಶೇಷವಾಗಿ ಸಿಸಿ ಟಿವಿ ಕಣ್ಗಾವಲಿನಲ್ಲಿ ಪರೀಕ್ಷೆ ನಡೆಸಲಾಗಿತ್ತು. ಕೊಳ್ಳೇಗಾಲ ಬ್ಲಾಕ್‌ನ 2039 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಲ್ಲಿ 2031 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts