More

    8 ತಿಂಗಳ ಮಗುವಿನ ಪ್ರಾಣ ಉಳಿಸಿದ ಕೆಎಲ್‌ಇ ವೈದ್ಯರು

    ಬೆಳಗಾವಿ: ‘ಟ್ರಂಕಸ್ ಅರ್ಟರಿಯೋಸಿಸ್’ ಎಂಬ ತೀವ್ರತರಹದ ಹೃದಯ ಕಾಯಿಲೆಯಿಂದ ಬಳಲುತ್ತಿದ್ದ 8 ತಿಂಗಳ ಮಗುವಿಗೆ ಶಸಚಿಕಿತ್ಸೆ ನಡೆಸುವಲ್ಲಿ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಹೃದಯ ಶಸಚಿಕಿತ್ಸಕ ಡಾ.ಪ್ರವೀಣ ತಂಬ್ರಳ್ಳಿಮಠ ಹಾಗೂ ತಂಡ ಯಶಸ್ವಿಯಾಗಿದೆ.

    ತೀವ್ರ ಉಸಿರಾಟ, ಕೆಮ್ಮು ಹಾಗೂ ಶರೀರ ಬೆಳವಣಿಗೆ ತೊಂದರೆಯಿಂದ ಬಳಲುತ್ತಿದ್ದ ಮಗುವನ್ನು ಸಮಗ್ರವಾಗಿ ತಪಾಸಿಸಿದಾಗ, ಮಗು ಹುಟ್ಟಿನಿಂದಲೇ ‘ಟ್ರಂಕಸ್ ಅರ್ಟರಿಯೋಸಿಸ್’ ಕಾಯಿಲೆಯಿಂದ ಬಳಲುತ್ತಿರುವುದು ದೃಢಪಟ್ಟಿತು. ತುರ್ತಾಗಿ ಶಸಚಿಕಿತ್ಸೆ ನಡೆಸಿದ ತಂಡ ಮಗುವನ್ನು ಪ್ರಾಣಾಪಾಯದಿಂದ ಪಾರು ಮಾಡಿದೆ.

    ‘ಟ್ರಂಕಸ್ ಅರ್ಟರಿಯೋಸಿಸ್’ ಎಂಬ ಹೃದಯ ಸಂಬಂಧಿ ಕಾಯಿಲೆ ಜನಿಸುವ ಪ್ರತಿ 15 ಸಾವಿರ ಮಕ್ಕಳಲ್ಲಿ ಒಂದು ಮಗುವಿಗೆ ಕಂಡುಬರುತ್ತದೆ. ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದ ಕೆಎಲ್‌ಇ ವೈದ್ಯರ ತಂಡ ವಿಜಯ ಕಂಡಿದೆ. ಡಾ.ಶಂಕರಗೌಡ ಪಾಟೀಲ, ಡಾ.ಅಭಿಜಿತ ಶಿತೋಳೆ, ಡಾ.ಅಭಿಷೇಕ ಪ್ರಭು, ಡಾ.ನಿಧಿ ಶಸಚಿಕಿತ್ಸೆಗೆ ಸಾಥ್ ನೀಡಿದ್ದರು.

    ಸವದತ್ತಿ ತಾಲೂಕಿನ ಗ್ರಾಮವೊಂದರ ಈ ಮಗುವಿನ ಪಾಲಕರು ವೈದ್ಯರಿಗೆ ಧನ್ಯವಾದ ಅರ್ಪಿಸಿದ್ದಾರೆ. ಯಶಸ್ವಿ ಶಸಚಿಕಿತ್ಸೆ ನೆರವೇರಿಸಿದ ವೈದ್ಯರ ತಂಡವನ್ನು ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ವೈದ್ಯಕೀಯ ನಿರ್ದೇಶಕ ಡಾ.ಎಂ.ವಿ. ಜಾಲಿ ಅಭಿನಂದಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts