More

    8 ಲಕ್ಷ ರೂ. ಉಳಿತಾಯ ಬಜೆಟ್

    ಶಿಗ್ಗಾಂವಿ: ಪಟ್ಟಣದ ಪುರಸಭೆಯ 2021-22ನೇ ಸಾಲಿನ 17.12 ಕೋಟಿ ರೂ. ಬಜೆಟ್​ನಲ್ಲಿ 8 ಲಕ್ಷ ರೂ. ಉಳಿತಾಯ ಬಜೆಟ್ ಅನ್ನು ಅಧ್ಯಕ್ಷ ಶ್ರೀಕಾಂತ ಬುಳಕ್ಕನವರ ಗುರುವಾರ ಮಂಡಿಸಿದರು.

    ಪಟ್ಟಣದ ಪುರಸಭೆಯ ಸಭಾಭವನದಲ್ಲಿ ಆಯೋಜಿಸಿದ್ದ ಬಜೆಟ್ ಸಭೆಯಲ್ಲಿ ಉಳಿತಾಯ ಬಜೆಟ್ ಮಂಡಿಸಿ ಮಾತನಾಡಿದ ಅವರು, ಎಸ್​ಎಫ್​ಸಿ ಅನುದಾನ 1 ಕೋಟಿ ರೂ., 15ನೇ ಹಣಕಾಸಿನಲ್ಲಿ 2.5 ಕೋಟಿ, ವಿಶೇಷ ಅನುದಾನ 2 ಕೋಟಿ, ಲೈಸನ್ಸ್ ಫೀಯಿಂದ 10 ಲಕ್ಷ, ಸಂತೆ ಶುಲ್ಕದಿಂದ 8 ಲಕ್ಷ, ನಲ್ಮ ಅನುದಾನ 25 ಲಕ್ಷ, ಘನತ್ಯಾಜ್ಯ ವಿಲೇವಾರಿ ಅನುದಾನ 1 ಕೋಟಿ ಹೀಗೆ ವಿವಿಧ ಮೂಲಗಳಿಂದ 17.12 ಕೋಟಿ ಆದಾಯವನ್ನು ನಿರೀಕ್ಷಿಸಲಾಗಿದೆ.

    ಕಟ್ಟಡ ನಿರ್ವಣಕ್ಕೆ 20 ಲಕ್ಷ, ವಾಹನ ಖರೀದಿಗೆ 10 ಲಕ್ಷ, ಕಚೇರಿ ಉಪಕರಣಕ್ಕೆ 25 ಲಕ್ಷ, ರಸ್ತೆ ನಿರ್ವಣಕ್ಕೆ 1.70 ಕೋಟಿ, ಚರಂಡಿ ನಿರ್ವಣಕ್ಕೆ 1.20 ಕೋಟಿ ಸೇರಿ 22 ವಿವಿಧ ಕಾರ್ಯಗಳಿಗೆ 17 ಕೋಟಿ ರೂ.ಗಳ ಖರ್ಚು ಬರಲಿದೆ. ಒಟ್ಟಾರೆ 8.65 ಲಕ್ಷ ರೂ.ಗಳ ಉಳಿತಾಯ ಬಜೆಟ್ ಇದಾಗಿದೆ ಎಂದರು.

    ಸಭೆಯಲ್ಲಿ ಉಪಾಧ್ಯಕ್ಷ ಮಂಜುನಾಥ ಬ್ಯಾಹಟ್ಟಿ, ಸದಸ್ಯರಾದ ರಮೇಶ ವನಹಳ್ಳಿ, ಸಿದ್ದಾರ್ಥಗೌಡ ಪಾಟೀಲ, ಸುಭಾಸ ಚವ್ಹಾಣ, ಪರಶುರಾಮ ಸೊನ್ನದ, ದಯಾನಂದ ಅಕ್ಕಿ, ಗೌಸಖಾನ್ ಮುನ್ಸಿ, ವಸಂತಾ ಬಾಗೂರ, ರೂಪಾ ಬನ್ನಿಕೊಪ್ಪ, ಶಾಂತಾಬಾಯಿ ಸುಬೇದಾರ, ಸಂಗೀತಾ ವಾಲ್ಮೀಕಿ, ಜ್ಯೋತಿ ನಡೂರ, ರೇಖಾ ಕಂಕಣವಾಡ, ಅನುರಾಧಾ ಮಾಳವದೆ, ಮೈನುನಸಾ ಲಕ್ಷೆ್ಮೕಶ್ವರ, ಶೇಖವ್ವ ವಡ್ಡರ, ಮುಸ್ತಾಕಅಹ್ಮದ್ ತಹಸೀಲ್ದಾರ್, ನಜೀರನಬಾನು ತಿಮ್ಮಾಪುರ, ಜಾಫರಖಾನ್ ಪಠಾಣ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts