More

    ದೇಶದಲ್ಲಿ 796 ಹೊಸ ಕರೊನಾ ಪ್ರಕರಣಗಳು ಪತ್ತೆ, ಮೃತರ ಸಂಖ್ಯೆ 308ಕ್ಕೆ ಏರಿಕೆ

    ನವದೆಹಲಿ: ಕಳೆದ 24 ತಾಸುಗಳಲ್ಲಿ ಭಾರತದಲ್ಲಿ 796 ಹೊಸ ಪ್ರಕರಣಗಳು ದಾಖಲಾಗಿದ್ದು, 35 ಜನರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ಮಾಹಿತಿ ನೀಡಿದೆ.

    ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 9,1,52 ಕ್ಕೆ ತಲುಪಿದೆ. ಈವರೆಗೆ 308 ಜನರು ಮೃತಪಟ್ಟಿದ್ದಾರೆ. 857 ಮಂದಿ ಗುಣಮುಖರಾಗಿದ್ದಾರೆ. ನಿನ್ನೆಯವರೆಗೆ ಒಟ್ಟು 2 ಲಕ್ಷಕ್ಕೂ ಅಧಿಕ ಜನರ ರಕ್ತ ಮತ್ತು ಗಂಟಲು ದ್ರವದ ಪರೀಕ್ಷೆ ಮಾಡಲಾಗಿದೆ. ಪ್ರಸ್ತುತ ಲಭ್ಯವಿರುವ ಟೆಸ್ಟಿಂಗ್​ ಕಿಟ್​ಗಳಿಂದ ಪರೀಕ್ಷೆ ಮುಂದುವರಿಯಲಿದೆ. ಈ ನಡುವೆ, ದೇಶದಲ್ಲಿ ಇನ್ನೂ ಆರು ವಾರಗಳಿಗೆ ಅಗತ್ಯವಾಗಿರುವಷ್ಟು ಟೆಸ್ಟಿಂಗ್​ ಕಿಟ್​ಗಳನ್ನು ದಾಸ್ತಾನು ಮಾಡಲಾಗಿದೆ ಎಂದು ಐಸಿಎಂಆರ್​ ಸ್ಪಷ್ಟಪಡಿಸಿದೆ.

    ಕಳೆದ ಒಂದು ವಾರದಲ್ಲಿ ಒಂದು ಪಾಸಿಟಿವ್​ ಪ್ರಕರಣ ದಾಖಲಾಗದ ಜಿಲ್ಲೆಗಳ ಪಟ್ಟಿಯಲ್ಲಿ ಉಡುಪಿ ಹಾಗೂ ಕೊಡಗು ಜಿಲ್ಲೆಗಳು ಸ್ಥಾನ ಪಡೆದಿವೆ. ದೇಶದ ಒಟ್ಟು 15 ರಾಜ್ಯಗಳ 25 ಜಿಲ್ಲೆಗಳು ಈ ಪಟ್ಟಿಯಲ್ಲಿವೆ ಎಂದು ಸಚಿವಾಲಯ ಮಾಹಿತಿ ನೀಡಿದೆ. ಜತೆಗೆ, ಕರೊನಾ ಸೋಂಕು ತಡೆಗೆ ಕರ್ನಾಟಕ ರೂಪಿಸಿರುವ ಆ್ಯಪ್​ ಬಗ್ಗೆ ಸಚಿವಾಲಯದ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಮುಂಚೂಣಿ ಪಡೆಯಲ್ಲಿದ್ದು, ಕರೊನಾ ಸೋಂಕಿತರಿಗೆ ಚಿಕಿತ್ಸೆ ನಿಡುತ್ತಿರುವ ಸಿಬ್ಬಂದಿಯ ಸುರಕ್ಷತೆಗಾಗಿ ನೀಡಲಾಗುವ ಪರ್ಸನಲ್​ ಪ್ರೊಟೆಕ್ಷನ್​ ಎಕ್ವಿಪ್​ಮೆಂಟ್​ಗಳನ್ನು (ಪಿಪಿಇ) ದೇಶದ 39 ಉತ್ಪಾದಕರು ತಯಾರಿಸುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

    ಕೇರಳ ಕ್ರಮಕ್ಕೆ ಶ್ಲಾಘನೆ: ಕರೊನಾ ನಿಯಂತ್ರಿಸುವಲ್ಲಿ ಕೇರಳ ಶ್ರಮವಹಿಸುತ್ತಿದ್ದು, ಹೊಸ ಪ್ರಕರಣಗಳ ಸಂಖ್ಯೆ ಅಲ್ಲಿ ಇಳಿಮುಖವಾಗುತ್ತಿದೆ. ಜತೆಗೆ, ಚೇತರಿಕೆ ಕಾಣುತ್ತಿರುವವ ಸಂಖ್ಯೆಯಲ್ಲೂ ಗಣನೀಯ ಏರಿಕೆ ಕಂಡು ಬರುತ್ತಿದೆ ಎಂದು ಕೇಂದ್ರ ಮೆಚ್ಚುಗೆ ವ್ಯಕ್ತಪಡಿಸಿದೆ.
    ರೈತರ ಖಾತೆಗಳಿಗೆ13,855 ಕೋಟಿರೂ.: ಒಟ್ಟಾರೆ 6.93 ರೈತರ ಖಾತೆಗಳಿಗೆ 13,855 ಕೋಟಿ ರೂ. ರೂ.ಗಳನ್ನು ಪಾವತಿ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

    ಕರೊನಾಗೆ ತತ್ತರಿಸಿರುವ ಸ್ಪೇನ್​ನಲ್ಲಿ ಕೈಗಾರಿಕೆಗಳ ಕಾರ್ಯಾರಂಭ, ಉದ್ಯೋಗಕ್ಕೆ ತೆರಳಲು ಅನುಮತಿ, ಮೆಟ್ರೋ ಸಂಚಾರ ಶುರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts