More

    ಬಿಬಿಎಂಪಿ ಕಾಲೇಜುಗಳಲ್ಲಿ ಶೇ.78 ಫಲಿತಾಂಶ

    ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಕಾಲೇಜುಗಳಲ್ಲಿ 2ನೇ ಪಿಯುಸಿ ಪರೀಕ್ಷೆಯಲ್ಲಿ ಶೇ.78 ಫಲಿತಾಂಶ ದಾಖಲಾಗಿದೆ.

    ಪಾಲಿಕೆಯ ಶಿಕ್ಷಣ ವಿಭಾಗದಡಿ 18 ಪದವಿಪೂರ್ವ ಕಾಲೇಜುಗಳಿವೆ. 2023-24ನೇ ಸಾಲಿನಲ್ಲಿ ಒಟ್ಟು 2,427 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 1,889 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ (ಶೇ.78). ಹಿಂದಿನ ಸಾಲಿನಲ್ಲಿ ಶೇ.63.18 ಪ್ರಮಾಣದಷ್ಟು ಫಲಿತಾಂಶ ಬಂದಿದ್ದು, ಈ ಬಾರಿ ಶೇ.15 ಅಧಿಕ ವಿದ್ಯಾರ್ಥಿಗಳು ಪಾಸಾಗಿದ್ದಾರೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

    ಭೈರವೇಶ್ವರನಗರ ಪದವಿಪೂರ್ವ ಕಾಲೇಜು ಅತ್ಯಧಿಕ ಶೇ.94.96 ಫಲಿತಾಂಶ ದಾಖಲಿಸಿದೆ. ಕಸ್ತೂರಿಬಾನಗರ ಕಾಲೇಜಿನಲ್ಲಿ ಶೇ.88.10 ಹಾಗೂ ಕಾವೇರಿಪುರ ಕಾಲೇಜಿನಲ್ಲಿ ಶೇ.87.69 ಫಲಿತಾಂಶ ಬಂದಿದೆ.

    ಈ ಬಾರಿ ಒಟ್ಟು 227 ವಿದ್ಯಾರ್ಥಿಗಳು ಶೇ.85ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಕ್ಲೀವ್‌ಲ್ಯಾಂಡ್ ಟೌನ್ ಕಾಲೇಜಿನಲ್ಲಿ 62 ವಿದ್ಯಾರ್ಥಿಗಳು, ಕಸ್ತೂರಿಬಾನಗರ ಕಾಲೇಜಿನಲ್ಲಿ 36, ಭೈರವೇಶ್ವರನಗರ ಕಾಲೇಜಿನಲ್ಲಿ 29, ಶ್ರೀರಾಮಪುರ ಕಾಲೇಜಿನಲ್ಲಿ 25 ವಿದ್ಯಾರ್ಥಿಗಳು ಶೇ.85ಕ್ಕಿಂತ ಹೆಚ್ಚು ಅಂಕ ಪಡೆದು ಪಾಲಿಕೆಗೆ ಕೀರ್ತಿ ತಂದಿರುತ್ತಾರೆ ಎಂದು ಬಿಬಿಎಂಪಿ ಶಿಕ್ಷಣ ವಿಭಾಗದ ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋಟ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts