More

    ಮಂಗನ ಕಾಯಿಲೆಗೆ ಸಿದ್ದಾಪುರದ‌ ವ್ಯಕ್ತಿ ಬಲಿ

    ವಿಜಯವಾಣಿ ಸುದ್ದಿಜಾಲ ಕಾರವಾರ/ಸಿದ್ದಾಪುರ
    ಮಂಗನ ಕಾಯಿಲೆಯಿಂದ ಸಿದ್ದಾಪುರದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
    ಇಟಗಿ ಸಮೀಪದ ಮಳಗುಳಿಯ ಭಾಸ್ಕರ ಗಣಪತಿ ಹೆಗಡೆ (64)ಮೃತರು.
    ಫೆ. ,10 ರಂದು ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ಸ್ಥಳೀಯ ವಂದಾನೆ ಹಾಗೂ ಸಿದ್ದಾಪುರದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರು. ಆದರೂ ಕಡಿಮೆಯಾಗದಾಗ ಮೂರು ದಿನಗಳ ಹಿಂದೆ
    ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ನಂಜಪ್ಪ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿಯೇ ಅವರಿಗೆ ಮಂಗನ ಖಾಯಿಲೆ ಇರುವುದು ಖಚಿತವಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲಿಗೆ ಒಯ್ಯುವಾಗ ಆಗುಂಬೆ ಹತ್ತಿರ ಶುಕ್ರವಾರ ರಾತ್ರಿ ಮ್ರತಪಟ್ಟಿದ್ದಾರೆ ಎಂದು ಮಂಗನ ಖಾಯಿಲೆ ವಿಶೇಷ ವೈದ್ಯಾಧಿಕಾರಿ ಸತೀಶ ಶೇಟ್ ಖಚಿತಪಡಿಸಿದ್ದಾರೆ.
    ಭಾಸ್ಕರ ಹೆಗಡೆ ಮಂಗನಕಾಯಿಲೆ ಮುನ್ನೆಚ್ಚರಿಕೆ ಒಂದು ಲಸಿಕೆ ಪಡೆದಿದ್ದರು.‌ಆದರೆ, ಎದರಡನೇ ಲಸಿಕೆ ಪಡೆಯದ ಕಾರಣ ತೊಂದರೆ ಉಂಟಾಯಿತು ಎಂಬುದು ಆರೋಗ್ಯ ಇಲಾಖೆ ಅಧಿಕಾರಿಗಳ ಅಭಿಪ್ರಾಯ. ಸಿದ್ದಾಪುರದಲ್ಲಿ ಇನ್ನೊಬ್ಬ ಮಹಿಳೆಗೆ ಮಂಗನ ಕಾಯಿಲೆ ಇರುವುದು ಖಚಿತವಾಗಿದ್ದು ಆಕೆಗೆ ಚಿಕಿತ್ಸೆ ನೀಡಲಾಗುತ್ತಿದೆ.
    ಇಟಗಿ ಭಾಗದಲ್ಲಿ ಇದುವರೆಗೆ 40 ಕ್ಕೂ ಅಧಿಕ ಮಂಗಗಳು ಮೃತಪಟ್ಟಿವೆ. ಒಂದು‌ ಮಂಗಲ್ಲಿ ಕಾಯಿಲೆ ಇರುವುದು ಖಚಿತವಾಗಿದೆ. ಕಳದ ವರ್ಷ ಸಿದ್ದಾಪುರ ತಾಲೂಕು ಒಂದರಲ್ಲೇ 62 ಮಂಗನಕಾಯಿಲೆ ಪ್ರಕರಣಗಳು ಪತ್ತೆಯಾಗಿದ್ದವು. ಇದರಿಂದ 2019 ರ ಆಗಸ್ಟ್‌ ‌ನಿಂದಲೇ ಈ ಭಾಗದಲ್ಲಿ 18 ಸಾವಿರ ಜನರಿಗೆ ಲಸಿಕೆ ಹಾಕಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts