More

    760 ಕೋಟಿ ಬೆಳೆ ಸಾಲ ಮಂಜೂರು: ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹನುಮಂತಯ್ಯ ಮಾಹಿತಿ ಸೂಲಿಬೆಲೆಯಲ್ಲಿ ಕೃಷಿಕರಿಗೆ ಸಾಲ ವಿತರಣೆ

    ವಿಜಯವಾಣಿ ಸುದ್ದಿಜಾಲ ಸೂಲಿಬೆಲೆ
    ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ ಜಿಲ್ಲೆಗಳ ಸಹಕಾರ ಕ್ಷೇತ್ರದ ಬಲವರ್ಧನೆಗೆ ಡಿಸಿಸಿ ಕೇಂದ್ರ ಬ್ಯಾಂಕ್‌ನಿಂದ 760 ಕೋಟಿ ರೂ. ಬೆಳೆ ಸಾಲ ನೀಡಲಾಗಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹನುಮಂತಯ್ಯ ತಿಳಿಸಿದರು.
    ಸೂಲಿಬೆಲೆಯ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬೆಳೆ ಸಾಲ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ಹೊಸಕೋಟೆ ತಾಲೂಕಿನ 7 ಸಹಕಾರ ಸಂಘಗಳಿಗೆ 4.96 ಕೋಟಿ ರೂ. ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ಮಂಜೂರಾಗಿದ್ದು, ಸೂಲಿಬೆಲೆ ಬ್ಯಾಂಕಿಗೆ 46.76 ಲಕ್ಷ ರೂ., ಹೊಸಕೋಟೆ ಟೌನ್ 87.76 ಲಕ್ಷ ರೂ., ಜಡಿಗೇನಹಳ್ಳಿ ಬ್ಯಾಂಕಿಗೆ 41.95 ಲಕ್ಷ ರೂ., ನೆಲವಾಗಿಲು 99.90 ಲಕ್ಷ ರೂ., ಗಣಗಲೂರು 46.55 ಲಕ್ಷ ರೂ., ಶಿವನಾಪುರಕ್ಕೆ 49.97 ಲಕ್ಷ ರೂ. ಹಾಗೂ ಶಿವನಾಪುರ ಎಂಟಿಎಲ್‌ಗೆ 1.23 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು, ಸುಮಾರು 269 ಫಲಾನುಭವಿಗಳಿಗೆ ವಿತರಣೆ ಮಾಡಲಾಗಿದೆ ಎಂದರು.


    ಪಶುಪಾಲನೆ ಪ್ರೋತ್ಸಾಹಕ್ಕಾಗಿ 2 ಹಸುಕೊಳ್ಳಲು 1.20 ಲಕ್ಷ ರೂ. ಸಾಲವನ್ನು ಶೇ.3 ರ ಬಡ್ಡಿದರದಲ್ಲಿ ನೀಡಲಾಗುತ್ತದೆ. ರೈತರು ಯಶಸ್ವಿನಿ ವಿಮೆ ಯೋಜನೆಯನ್ನು ಎಲ್ಲರೂ ಪಡೆಯಬೇಕು ಎಂದ ಅವರು, ಪ್ರಸ್ತುತ ಡಿಸಿಸಿ ಬ್ಯಾಂಕ್ 7.74 ಲಕ್ಷ ರೂ. ಲಾಭಾಂಶ ಪಡೆದುಕೊಂಡಿದ್ದು, ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ಕೇಂದ್ರ ಬ್ಯಾಂಕಿನ ಕಟ್ಟಡ ನಿರ್ಮಾಣ ಮಾಡಲಾಗಿದ್ದು, ಶೀಘ್ರದಲ್ಲಿಯೇ ಉದ್ಘಾಟಿಸಲಾಗುವುದು ಎಂದರು.
    ಬಮುಲ್ ನಿರ್ದೇಶಕ ಸಿ.ಮಂಜುನಾಥ್ ಮಾತನಾಡಿ, ಸೂಲಿಬೆಲೆ ಸಹಕಾರ ಬ್ಯಾಂಕ್ ನೂತನ ಕಟ್ಟಡವನ್ನು ಸುಮಾರು 1.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದು, ಸಂಘ ಲಾಭದಲ್ಲಿದ್ದು, ಸಾಲ ವಸೂಲಿ ಮತ್ತು ವಿತರಣೆಯಲ್ಲೂ ಮುಂಚೂಣಿಯಲ್ಲಿದ್ದು, ಪ್ರಸಕ್ತ ಸಾಲಿನ ಅತ್ಯುತ್ತಮ ಸಂಘ ಎಂಬ ಪ್ರಶಸ್ತಿಯೂ ಪಡೆದುಕೊಂಡಿದೆ ಎಂದರು.
    ಶಾಸಕ ಶರತ್ ಬಚ್ಚೇಗೌಡ ಮಾತನಾಡಿ ಸಹಕಾರ ಸಂಘ ಸಂಸ್ಥೆಗಳನ್ನು ರಿಸರ್ವ ಬ್ಯಾಂಕ್ ಇಂಡಿಯದೊಡನೆ ಲಿಂಕ್ ಮಾಡುತ್ತಿರುವುದು ರೈತಾಪಿ ವರ್ಗಕ್ಕೆ ತೊಂದರೆಯಾಗುವ ಲಕ್ಷಣಗಳು ಗೋಚರವಾಗಿದ್ದು ಈ ಬಗ್ಗೆ ಪರಾಮರ್ಶೆ ಮಾಡಬೇಕಾಗಿದೆ, ಗುಜರಾತಿನ ಅಮೂಲ್ ಮತ್ತು ಕರ್ನಾಟಕ ನಂದಿನಿ ವಿಲೀನವು ಸಹ ಸರಿಯಲ್ಲ ಎಂದರು.
    ಬ್ಯಾಂಕ್ ಮಾಜಿ ಅಧ್ಯಕ್ಷರಾದ ಬಿ.ಎನ್.ಗೋಪಾಲಗೌಡ, ಗೋಪಾಲಪ್ಪ, ಡಿಜಿಎಂ ಚಂದ್ರಶೇಖರ್, ಬ್ಯಾಂಕಿನ ಸಿಇಒ ಎ.ಎಂ.ಶ್ರೀನಿವಾಸಮೂರ್ತಿ, ಮೇಲ್ವಿಚಾರಕ ಎಸ್.ಕೆ.ವಸಂತಕುಮಾರ್, ಲೆಕ್ಕಿಗ ಜಿ.ಎಂ.ನಾಗೇಶ್, ಜಗದೀಶ್, ನಿರ್ದೇಶಕರಾದ ತಮ್ಮೇಗೌಡ, ನಾರಾಯಣಪ್ಪ, ಪಿಳ್ಳೇಗೌಡ,ನಾರಾಯಣಸ್ವಾಮಿ, ಮುನಿರಾಜು, ನಂಜಮ್ಮ, ವಿಜಯಲಕ್ಷ್ಮೀ, ಗ್ರಾಪಂ ಅಧ್ಯಕ್ಷೆ ನಸ್ರೀನ್‌ತಾಜ್ ಅಲ್ತ್ಾ, ಉಪಾಧ್ಯಕ್ಷ ಶಿವರುದ್ರಪ್ಪ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts