More

    70 ಲಕ್ಷ ವೆಚ್ಚದಲ್ಲಿ 90 ಹಂಪ್ಸ್

    ಸಂತೋಷ ವೈದ್ಯ ಹುಬ್ಬಳ್ಳಿ

    ಇಂಡಿಯನ್ ರೋಡ್ ಕಾಂಗ್ರೆಸ್ (ಐಆರ್​ಸಿ) ಸೂಚಿಸಿರುವ ಮಾನದಂಡದಂತೆ ಹುಬ್ಬಳ್ಳಿ ಯಲ್ಲಿ ವೈಜ್ಞಾನಿಕ ಹಂಪ್ಸ್ ನಿರ್ಮಾಣ ಕಾಮಗಾರಿ ವಾರದಲ್ಲಿ ಆರಂಭಗೊಳ್ಳಲಿದೆ. ಮೊದಲ ಹಂತದಲ್ಲಿ 90 ಹಂಪ್ಸ್ ನಿರ್ವಣವಾಗಲಿವೆ.ಮಹಾನಗರ ಪಾಲಿಕೆಯ ಹುಬ್ಬಳ್ಳಿ ಉತ್ತರ ವಿಭಾಗ ವ್ಯಾಪ್ತಿಯಲ್ಲಿ 49.5 ಲಕ್ಷ ರೂ. ವೆಚ್ಚದಲ್ಲಿ 50 ಹಂಪ್​ಗಳು ಹಾಗೂ ದಕ್ಷಿಣ ವಿಭಾಗ ವ್ಯಾಪ್ತಿಯಲ್ಲಿ 21 ಲಕ್ಷ ರೂ. ವೆಚ್ಚದಲ್ಲಿ 40 ಹಂಪ್​ಗಳು ಬರಲಿವೆ. ವಾಲಿ (ಉತ್ತರ ವಿಭಾಗ) ಹಾಗೂ ರವಿ ತಾಳಿಕೋಟೆ (ದಕ್ಷಿಣ ವಿಭಾಗ) ಎಂಬುವವರು ಗುತ್ತಿಗೆ ಪಡೆದಿದ್ದಾರೆ. ಧಾರವಾಡದಲ್ಲಿ ವೈಜ್ಞಾನಿಕ ಹಂಪ್ಸ್ ನಿರ್ವಣಕ್ಕೆ ಈವರೆಗೂ ಟೆಂಡರ್ ಕರೆದಿಲ್ಲ. 60 ಲಕ್ಷ ರೂ. ವೆಚ್ಚದಲ್ಲಿ 136 ಹಂಪ್ಸ್ ನಿರ್ವಣಕ್ಕೆ ಅಂದಾಜಿಸಲಾಗಿತ್ತು.

    ಹುಬ್ಬಳ್ಳಿಯಲ್ಲಿ ಯಾವ ರಸ್ತೆಯಲ್ಲಿ ಎಲ್ಲಿ ಹಂಪ್ಸ್ ಹಾಕಬೇಕು ಎಂಬುದನ್ನು ಪಾಲಿಕೆ ಅಧಿಕಾರಿಗಳು ಪೊಲೀಸ್ ಅಧಿಕಾರಿಗಳೊಂದಿಗೆ ರ್ಚಚಿಸಿ ನಿರ್ಣಯ ಕೈಗೊಳ್ಳಲಿದ್ದಾರೆ. ಸಂಚಾರ ನಿಯಮಗಳನ್ನು ಅನುಷ್ಠಾನಕ್ಕೆ ತರುವುದು ಪೊಲೀಸ್ ಇಲಾಖೆಯ ಕೆಲಸ. ಕಾಮಗಾರಿ ವೇಳೆ ಪ್ರತಿ ಹಂಪ್ ಬಗ್ಗೆ ಪಾಲಿಕೆ ಅಧಿಕಾರಿಗಳು ಪೊಲೀಸರೊಂದಿಗೆ ರ್ಚಚಿಸಲಿದ್ದಾರೆ.

    ವೈಜ್ಞಾನಿಕ ಹಂಪ್ಸ್ ಹೇಗೆ?: ಸದ್ಯ ಅವಳಿ ನಗರದಲ್ಲಿ ಹುಡುಕಿದರೂ ಒಂದೇ ಒಂದು ವೈಜ್ಞಾನಿಕ ಹಂಪ್ಸ್ ಸಿಗುವುದಿಲ್ಲ. ವಾಹನಗಳ ವೇಗ ನಿಯಂತ್ರಣಕ್ಕೆ ರಸ್ತೆಯ ಮೇಲೆ ಅಡ್ಡ ಪಟ್ಟಿ ಇಟ್ಟಂತೆ ಕಾಣುವ ರೋಡ್ ಹಂಪ್ಸ್​ಗಳೇ ಇಲ್ಲಿ ಕಾಣಸಿಗುತ್ತದೆ. ಇದರಿಂದ ಎಷ್ಟೋ ಜನ ವಾಹನ ಸವಾರರು ಅಪಘಾತಕ್ಕೀಡಾಗಿ ಗಾಯಗೊಂಡವರಿದ್ದಾರೆ. ಜತೆಗೆ ಅವೈಜ್ಞಾನಿಕ ಹಂಪ್ಸ್ ವಾಹನಗಳಿಗೂ ಹಾನಿಕಾರಕ.
    ಹಾಗಾದರೆ, ವೈಜ್ಞಾನಿಕ ಹಂಪ್ಸ್ ಹೇಗಿರುತ್ತವೆ? ಹಂಪ್ ಹೀಗೆಯೇ ಇರಬೇಕೆಂದು ಇಂಡಿಯನ್ ರೋಡ್ ಕಾಂಗ್ರೆಸ್ ನಿರ್ದಿಷ್ಟ ಮಾರ್ಗಸೂಚಿ ಇದೆ. ಅದರಂತೆ ಹುಬ್ಬಳ್ಳಿಯಲ್ಲಿ ಹಂಪ್ಸ್ ನಿರ್ವಣವಾಗಲಿವೆ. ಹಂಪ್ಸ್ ಅಗಲ ರಸ್ತೆಯ ಅಗಲದಷ್ಟು ಇರಲಿದೆ. ಉದ್ದ 3 ಮೀಟರ್ ಇರಲಿದೆ. ಮಧ್ಯದಲ್ಲಿ 10 ಸೆಂಟಿ ಮೀಟರ್ ಎತ್ತರವಾಗಿ ಎಡ ಬಲಕ್ಕೆ ಇಳಿಜಾರಾಗಿ ತಲಾ 1.5 ಮೀಟರ್​ವರೆಗೆ ಹಂಪ್ ವಿಸ್ತರಿಸಿಕೊಳ್ಳಲಿದೆ. ಇದರಿಂದ ವಾಹನಗಳ ಇಂಜಿನ್, ಬಿಡಿ ಭಾಗಗಳಿಗೆ ಧಕ್ಕೆ ಆಗಲಾರದು. ವಾಹನಗಳ ವೇಗವು ನಿಯಂತ್ರಣಕ್ಕೆ ಬರಲಿದೆ ಎಂದು ಹೇಳಲಾಗಿದೆ.

    ‘ಅವಳಿ ನಗರದಲ್ಲಿನ ರಸ್ತೆ ಉಬ್ಬುಗಳು ಅವೈಜ್ಞಾನಿಕವಾಗಿದ್ದು, ವಾಹನಗಳಿಗೆ ಹಾಗೂ ಸವಾರರಿಗೆ ತೊಂದರೆದಾಯಕವಾಗಿದೆ. ವೈಜ್ಞಾನಿಕವಾಗಿ ಹಂಪ್ಸ್ ನಿರ್ವಿುಸುವಂತೆ ಪಾಲಿಕೆಗೆ ನಿರ್ದೇಶನ ನೀಡಬೇಕು’ ಎಂದು 2016ರಲ್ಲಿ ಸ್ಥಳೀಯರಾದ ಡಾ. ಕೆ.ಎಚ್. ಜಿತೂರಿ ಎಂಬುವರು ಹುಬ್ಬಳ್ಳಿ 3ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ನ್ಯಾಯಾಲಯವು 2017ರಲ್ಲಿ ಅವಳಿ ನಗರದಲ್ಲಿನ ಅವೈಜ್ಞಾನಿಕ ಹಂಪ್ಸ್ ತೆರೆವುಗೊಳಿಸುವಂತೆ ಹಾಗೂ ವೈಜ್ಞಾನಿಕವಾಗಿ ಹಂಪ್ಸ್ ಹಾಕುವಂತೆ ಆದೇಶ ನೀಡಿತ್ತು. ತೀರ್ಪಿನ ಬಳಿಕ ಹು-ಧಾ ಮಹಾನಗರ ಪಾಲಿಕೆ ಜೆಸಿಬಿ ಬಳಸಿ 192 ಅವೈಜ್ಞಾನಿಕ ಹಂಪ್​ಗಳನ್ನು ಕಿತ್ತು ಹಾಕಿತ್ತು. ಆದರೆ, ವೈಜ್ಞಾನಿಕ ಹಂಪ್ಸ್ ನಿರ್ವಣಕ್ಕೆ ಇದೀಗ ಕಾಲ ಕೂಡಿ ಬಂದಿದೆ.

    ಹುಬ್ಬಳ್ಳಿಯಲ್ಲಿ ವೈಜ್ಞಾನಿಕ ವಾಗಿ ಹಂಪ್ಸ್ ನಿರ್ವಣಕ್ಕೆ ಟೆಂಡರ್ ಕರೆದು ಗುತ್ತಿಗೆದಾರರನ್ನು ಅಂತಿಮಗೊಳಿಸಲಾಗಿದೆ. ಬ್ಯಾಂಕ್ ಗ್ಯಾರಂಟಿ ನೀಡಿದ ಬಳಿಕ ಗುತ್ತಿಗೆದಾರರಿಗೆ ಕಾಮಗಾರಿ ಕೈಗೊಳ್ಳಲು ಕಾರ್ಯಾದೇಶ ನೀಡಲಾಗುವುದು. ಕಾರಣಾಂತರದಿಂದ ಧಾರವಾಡದಲ್ಲಿ ಟೆಂಡರ್ ಕರೆದಿಲ್ಲ.
    | ಇ. ತಿಮ್ಮಪ್ಪ ಹುಧಾಮಪಾ ಅಧೀಕ್ಷಕ ಇಂಜಿನಿಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts