More

    ಒಂದೇ ಕುಟುಂಬದ ಐವರು ಮಕ್ಕಳು ಮೃತ್ಯು, ಇಬ್ಬರ ಸ್ಥಿತಿ ಚಿಂತಾಜನಕ: ದುರಂತ ಘಟನೆ ನಡೆದಿದ್ದು ಹೇಗೆ?

    ಉತ್ತರ ಪ್ರದೇಶ: ಮನೆಯಲ್ಲಿ ಮಲಗಿದ್ದ ಒಂದೇ ಕುಟುಂಬದ ಐವರು ಮಕ್ಕಳು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ನಡೆದಿದೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ವರದಿಯಾಗಿದೆ.

    ಇದನ್ನೂ ಓದಿ:ತರಕಾರಿ ಗಾಡಿಯಲ್ಲೇ ಮಗುವಿಗೆ ಜನ್ಮಕೊಟ್ಟ ಮಹಿಳೆ: ಅಂಗಲಾಚಿದ್ರೂ ನೆರವಿಗೆ ಬಾರದ ವೈದ್ಯರು, ಪತಿ ಕಣ್ಣೀರು

    ಮನೆಯೊಳಗೆ ಕಲ್ಲಿದ್ದಿಲನ್ನು ಸುಟ್ಟಿದ್ದರು, ಅದರ ಹೊಗೆ ದಟ್ಟವಾಗಿ ತುಂಬಿತ್ತು, ಆಮ್ಲಜನಕ ಕೊರತೆಯಿಂದ ಸಾವು ಸಂಭವಿಸಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

    ಸೋಮವಾರ ರಾತ್ರಿ ಕುಟುಂಬದ ಏಳು ಮಂದಿ ಒಂದೇ ಮನೆಯಲ್ಲಿ ಮಲಗಿದ್ದರು. ಮಂಗಳವಾರ ಸಂಜೆಯಾದರೂ ಬಾಗಿಲು ತೆರೆಯದೇ ಇದ್ದಾಗ ಅಕ್ಕಪಕ್ಕದ ಮನೆಯವರಿಗೆ ಅನುಮಾನ ಬಂದಿತ್ತು. ಬಾಗಿಲು ಮುರಿದು ಮನೆಗೆ ನುಗ್ಗಿದ್ದಾರೆ. ರಹೀಜುದ್ದೀನ್ ಎಂಬುವರಿಗೆ ಸೇರಿದ ಮನೆಯಾಗಿದ್ದು, ಅವರ ಮೂವರು ಮಕ್ಕಳು ಮತ್ತು ಅವರ ಸಂಬಂಧಿಕರ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಪತ್ನಿ ಹಾಗೂ ಸಹೋದರನ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿಸಿದ್ದಾರೆ.

    ಎಸ್ಪಿ ಕುನ್ವರ್ ಅನುಪಮ್ ಸಿಂಗ್ ಸೇರಿದಂತೆ ಭಾರೀ ಪೊಲೀಸ್ ಪಡೆ ಮತ್ತು ಆಡಳಿತ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ವಿಷಯದ ಬಗ್ಗೆ ಮಾಹಿತಿ ಪಡೆದುಕೊಂಡು ತನಿಖೆ ಆರಂಭಿಸಿದರು.

    ಇಂಗಾಲದ ಡೈಆಕ್ಸೈಡ್, ಕಾರ್ಬನ್ ಮಾನಾಕ್ಸೈಡ್, ಹಾನಿಕಾರಕ ಅನಿಲಗಳು ಕೊಠಡಿಯಲ್ಲಿರುವಾಗ ಕೋಣೆಯ ಬಾಗಿಲು ಮುಚ್ಚಿದರೆ ಅದು ಉಸಿರುಗಟ್ಟುವಕೆಗೆ ಕಾರಣವಾಗಬಹುದು, ದೀರ್ಘಕಾಲ ಅದನ್ನು ಉಸಿರಾಡುವುದರಿಂದ ಸಾವು ಸಂಭವಿಸಬಹುದು ವೈದ್ಯರು ತಿಳಿಸಿದ್ದಾರೆ.

    ಸ್ಯಾಂಡಲ್‌ವುಡ್‌ನಲ್ಲಿ ಶ್ವೇತಗೀತೆ; ಭಿನ್ನ, ವಿಭಿನ್ನ ಪಾತ್ರಗಳಲ್ಲಿ ಮಿಂಚುತ್ತಿರುವ ಮಂಗಳೂರು ಹುಡುಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts