More

    ನಕಲಿ ಕ್ಯಾನ್ಸರ್ ಔಷಧಿ ತಯಾರಿಸಿ ಮಾರಾಟ ಮಾಡುತ್ತಿದ್ದವರ ಬಂಧನ: ಗ್ಯಾಂಗ್​ನ ಆದಾಯ ಕೇಳಿದ್ರೆ ಬೆರಗಾಗ್ತೀರ!

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಕಲಿ ಡ್ರಗ್ಸ್ ದಂಧೆಯನ್ನು ಪೊಲೀಸರು ಭೇದಿಸಿದ್ದಾರೆ. ನಕಲಿ ಕ್ಯಾನ್ಸರ್ ಔಷಧಗಳನ್ನು ತಯಾರಿಸಿ ಸರಬರಾಜು ಮಾಡುತ್ತಿದ್ದ ಏಳು ಮಂದಿಯನ್ನು ಬಂಧಿಸಲಾಗಿದೆ.

    ಇದನ್ನೂ ಓದಿ: ಅಹಮ್ಮದ್​ನಗರವನ್ನು ಅಹಲ್ಯಾ ನಗರ ಎಂದು ಮರು ನಾಮಕರಣದ ಮಹಾರಾಷ್ಟ್ರ ಸರ್ಕಾರ!

    ಇಬ್ಬರು ಆರೋಪಿಗಳನ್ನು ದೆಹಲಿಯ ಪ್ರಮುಖ ಆಸ್ಪತ್ರೆಯ ಉದ್ಯೋಗಿಗಳು ಎಂದು ಗುರುತಿಸಲಾಗಿದೆ. ಕಳೆದ ಎರಡು ವರ್ಷಗಳಿಂದ ಡ್ರಗ್ಸ್ ದಂಧೆ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ತಂಡದಿಂದ ಒಟ್ಟು ಒಂಬತ್ತು ಕ್ಯಾನ್ಸರ್ ಔಷಧಿಗಳು, 4 ಕೋಟಿ ರೂಪಾಯಿ ಮತ್ತು ನಗದು ವಶಪಡಿಸಿಕೊಳ್ಳಲಾಗಿದೆ.

    ನಕಲಿ ಕ್ಯಾನ್ಸರ್ ಔಷಧಿಗಳ ತಯಾರಿಕೆ ಮತ್ತು ಪೂರೈಕೆಯಲ್ಲಿ ತೊಡಗಿರುವ ದಂಧೆಯ ಬಗ್ಗೆ ಅಪರಾಧ ವಿಭಾಗಕ್ಕೆ ಮಾಹಿತಿ ಬಂದ ನಂತರ ಈ ಸಂಬಂಧ ಇವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಬಳಿಕ ಆರೋಪಿಗಳ ಪತ್ತೆಗೆ ತಂಡ ರಚಿಸಿಸಲಾಗಿತ್ತು.

    ಈ ತಂಡ ಬರೋಬ್ಬರಿ 100 ಮೌಲ್ಯದ ಆ್ಯಂಟಿ ಫಂಗಲ್ ಔಷಧಿಯನ್ನು ಖಾಲಿ ಬಾಟಲಿಗಳಲ್ಲಿ ತುಂಬಿ ‘ಜೀವರಕ್ಷಕ’ ಕ್ಯಾನ್ಸರ್ ಔಷಧಿ ಎಂದು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ಚೀನಾ, ಅಮೆರಿಕದಂತಹ ದೇಶಗಳಿಗೆ ರಫ್ತು ಮಾಡಲಾಗುತ್ತಿತ್ತು ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ.

    ಈ ನಕಲಿ ಔಷಧಗಳನ್ನು ಗುರುಗ್ರಾಮ್‌ನ ಎರಡು ಪ್ಲಾಟ್‌ಗಳಲ್ಲಿ ತಯಾರಿಸಿರುವುದು ತನಿಖೆಯಿಂದ ತಿಳಿದುಬಂದಿದೆ. ಪೊಲೀಸರು ಹೀಟ್ ಗನ್, ಹೆಚ್ಚಿನ ಸಂಖ್ಯೆಯ ಖಾಲಿ ಪೈಲ್‌ಗಳು, 800 ಕ್ಕೂ ಹೆಚ್ಚು ಪ್ಯಾಕೇಜ್ ಬಾಕ್ಸ್‌ಗಳು ಮತ್ತು ಇತರ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ.
    ವಿಪಿಲ್ ಜೈನ್ ಈ ಗ್ಯಾಂಗ್ ನ ಪ್ರಮುಖ ಸೂತ್ರಧಾರ. ನೀರಜ್ ಚೌಹಾಣ್ ಮತ್ತು ಇತರ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಆಸ್ಪತ್ರೆಗಳಿಂದ ಖಾಲಿ ಬಾಟಲಿಗಳನ್ನು ತಂದು ಈ ನಕಲಿ ಔಷಧ ತುಂಬಿಸಿ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅವರ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

    ಇನ್ನು ಪೇಟಿಎಂ ಫಾಸ್​ಟ್ಯಾಗ್ ಸ್ಥಗಿತ! ಮುಂದೆ ಏನು ಮಾಡಬೇಕು, ಇಲ್ಲಿದೆ ನೋಡಿ ಮಾಹಿತಿ ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts