More

    ಧಾರವಾಡ ಲೋಕಸಭೆ ಚುನಾವಣೆ; 6,742 ಪ್ರಚಾರ ಸಾಮಗ್ರಿಗಳ ತೆರವು

    ಧಾರವಾಡ: ಲೋಕಸಭೆ ಚುನಾವಣೆ ಘೋಷಣೆಯಾದ ಮಾ. ೧೬ರಿಂದ ಮಾದರಿ ನೀತಿ ಸಂಹಿತೆ ಜಾರಿಯಾಗಿದೆ. ಅಂದಿನಿAದ ಈವರೆಗೆ ಸರ್ಕಾರಿ, ಸಾರ್ವಜನಿಕ ಸ್ಥಳಗಳು ಮತ್ತು ಖಾಸಗಿ ಒಡೆತನದ ಕಟ್ಟಡಗಳ ಮೇಲೆ ಅಳವಡಿಸಿದ್ದ ಪ್ರಚಾರ ಹಾಗೂ ಮತದಾರರ ಮೇಲೆ ಪ್ರಭಾವ ಬೀರುವಂಥ ಸುಮಾರು ೬,೭೪೨ ಪ್ರಚಾರ ಸಾಮಗ್ರಿಗಳನ್ನು ತೆರವುಗೊಳಿಸಲಾಗಿದೆ ಎಂದು ಜಿಲ್ಲಾ ಚುನಾವಣಾಽಕಾರಿ ಹಾಗೂ ಜಿಲ್ಲಾಽಕಾರಿ ದಿವ್ಯ ಪ್ರಭು ತಿಳಿಸಿದ್ದಾರೆ.
    ಪ್ರಕಟಣೆ ನೀಡಿರುವ ಅವರು, ನೀತಿ ಸಂಹಿತೆ ಜಾರಿಯಾದ ಕ್ಷಣದಿಂದ ಎಲ್ಲ ನಗರ, ಪಟ್ಟಣ ಮತ್ತು ಮಹಾನಗರ ಹಾಗೂ ಗ್ರಾಮಗಳಲ್ಲಿ ಪ್ರಚಾರ ಸಾಮಗ್ರಿಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಮಾದರಿ ನೀತಿ ಸಂಹಿತೆ ತಂಡದ ಸದಸ್ಯರು ಜಿಲ್ಲೆಯ ಪ್ರತಿ ಸ್ಥಳಗಳನ್ನು ಪರಿಶೀಲಿಸುತ್ತಿದ್ದಾರೆ. ಸ್ಥಳಿಯ ಹಾಗೂ ಗ್ರಾಮಮಟ್ಟದಲ್ಲಿ ಪರಿಶೀಲಿಸಿ, ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
    ಸರ್ಕಾರಿ ಸ್ಥಳಗಳಲ್ಲಿ ಪ್ರಕಟಿಸಿದ್ದ ೬೩೪ ಗೋಡೆಬರಹಗಳು, ೬೨೩ ಪೋಸ್ಟರ್‌ಗಳು, ೩೯೩ ಬ್ಯಾನರ್‌ಗಳು ಹಾಗೂ ೪೫೧ ಇತರೆ ಸೇರಿ ೨,೧೦೧ ಪ್ರಚಾರ ಸಾಮಗ್ರಿಗಳನ್ನು ತೆರವುಗೊಳಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿದ್ದ ೩೬೨ ಗೋಡೆಬರಹಗಳು, ೭೪೫ ಪೋಸ್ಟರ್‌ಗಳು, ೩೯೧ ಬ್ಯಾನರ್‌ಗಳು ಹಾಗೂ ೪೪೬ ಇತರೆ ಸೇರಿ ೧,೯೪೪ ಪ್ರಚಾರ ಸಾಮಗ್ರಿಗಳನ್ನು ತೆರವುಗೊಳಿಸಲಾಗಿದೆ.
    ಖಾಸಗಿ ಮಾಲೀಕತ್ವದ ಸ್ಥಳಗಳಲ್ಲಿದ್ದ ೧,೧೫೮ ಗೋಡೆಬರಹಗಳು, ೬೫೮ ಪೋಸ್ಟರ್‌ಗಳು , ೫೭೭ ಬ್ಯಾನರ್‌ಗಳು ಮತ್ತು ೩೦೪ ಇತರೆ ಸೇರಿ ೨,೬೯೭ ಪ್ರಚಾರ ಸಾಮಗ್ರಿಗಳನ್ನು ತೆರವುಗೊಳಿಸಲಾಗಿದೆ.
    ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ಸಂಬAಽಸಿದ ಪ್ರಚಾರ ಸಾಮಗ್ರಿಗಳನ್ನು ಪ್ರಚುರಪಡಿಸುವ ಮೊದಲು ಜಿಲ್ಲಾ ಎಂಸಿಎAಸಿ ಸಮಿತಿ ಅನುಮತಿ ಪಡೆದುಕೊಳ್ಳಬೇಕು. ತಪ್ಪಿದರೆ ನಿಯಮಾನುಸಾರ ತಕ್ಷಣ ಕ್ರಮ ಜರುಗಿಸಲಾಗುವುದು ಎಂದು ದಿವ್ಯ ಪ್ರಭು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts