More

    ಕಸ ಬೇರ್ಪಡಿಸಿ ಕೊಡದಿದ್ದರೆ ನಲ್ಲಿ, ಯುಜಿಡಿ ಸಂಪರ್ಕ ಕಡಿತಗೊಳಿಸಲು ನಗರಸಭೆ ಚಿಂತನೆ

    ಚಿಕ್ಕಮಗಳೂರು: ಮನೆಗಳಲ್ಲಿ ಸಂಗ್ರಹವಾಗುವ ತ್ಯಾಜ್ಯದಲ್ಲಿ ಹಸಿ-ಒಣ ಕಸ ಬೇರ್ಪಡಿಸಿ ಕಸದ ಗಾಡಿಗೆ ನೀಡದಿದ್ದರೆ ಅಂತಹ ಮನೆಗಳ ಮೂಲ ಸೌಕರ್ಯಕ್ಕೆ ಕತ್ತರಿ ಹಾಕಲು ನಗರಸಭೆ ಸಜ್ಜಾಗಿದೆ. ಬುಧವಾರ ಮತ್ತು ಶನಿವಾರ ಒಣ ಕಸ, ಉಳಿದ ದಿನಗಳಲ್ಲಿ ಹಸಿ ಕಸ ಸಂಗ್ರಹ ಮಾಡಲು ತಯಾರಿ ನಡೆಸುತ್ತಿದೆ.

    ನಿತ್ಯ ಒಂದು ಮನೆಯಲ್ಲಿ ಸರಾಸರಿ ಎರಡು ಕೆಜಿ ಕಸ ಉತ್ಪಾದನೆಯಾದರೆ ನಗರದಲ್ಲಿ ಪ್ರತಿನಿತ್ಯ 62 ಟನ್ ಕಸ ಉತ್ಪಾದನೆಯಾಗುತ್ತದೆ. ಇದರಿಂದ ಕಸವನ್ನು ಮೂಲದಲ್ಲೇ ಬೇರ್ಪಡಿಸುವುದು ಪ್ರತಿ ನಾಗರಿಕನ ಜವಾಬ್ದಾರಿ. ಈ ಸಂಬಂಧ ಘನತ್ಯಾಜ್ಯ ವಸ್ತು ನಿರ್ವಹಣೆ ಕಾನೂನು 2000ನೇ ಇಸವಿಯಿಂದಲೇ ಜಾರಿಯಲ್ಲಿದೆ.

    ಮನೆಗಳಲ್ಲಿ ಉತ್ಪಾದನೆಯಾಗುವ 2 ಕೆಜಿ ಕಸ ಬೇರ್ಪಡಿಸಲಾಗದಿದ್ದರೆ 62 ಟನ್ ಕಸ ಬೇರ್ಪಡಿಸಲು ಬಹಳ ಕಷ್ಟವಾಗುತ್ತದೆ. ಅಷ್ಟು ಸಂಪನ್ಮೂಲ ಮತ್ತು ಸಿಬ್ಬಂದಿ ನಗರಸಭೆಯಲ್ಲಿ ಇಲ್ಲ ಎಂಬುದು ಅಧಿಕಾರಿಗಳ ಅಭಿಪ್ರಾಯ.

    ಸಾರ್ವಜನಿಕರು ನೀಡುವ ತೆರಿಗೆ ಹಣದಲ್ಲಿ ಘನತ್ಯಾಜ್ಯ ಸಂಸ್ಕರಣೆ ಮಾಡಲಾಗುತ್ತಿದ್ದು ಜನರು ಮನೆಯಲ್ಲೇ ಹಸಿ ಮತ್ತು ಒಣ ಕಸ ಬೇರ್ಪಡಿಸಿ ಕೊಡುವುದರಿಂದ ಸಂಸ್ಕರಣಾ ವೆಚ್ಚ ತಗ್ಗಿಸಲು ಸಹಕಾರಿಯಾಗುತ್ತದೆ. ಹೀಗಾಗಿ ನಗರದಲ್ಲಿ ಕಸ ಬೇರ್ಪಡಿಸಲು ನಗರಸಭೆಯಿಂದ ಪ್ರತಿ ಬಡಾವಣೆಯಲ್ಲೂ ಅರಿವು ಮೂಡಿಸಲಾಗುತ್ತಿದೆ. ಈಗಾಗಲೇ ಜಯನಗರದಲ್ಲಿ ಕಸ ವಿಂಗಡಣೆ ಮಾಡದವರಿಗೆ ದಂಡ ವಿಧಿಸಲಾಗಿದ್ದು ನಾಗರಿಕರು ಎಚ್ಚೆತ್ತುಕೊಳ್ಳದಿದ್ದಲ್ಲಿ ದಂಡದ ಜತೆ ಮನೆಯ ನೀರಿನ ಸಂಪರ್ಕ ಹಾಗೂ ಒಳಚರಂಡಿ ಸಂಪರ್ಕ ಕಡಿತಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಪೌರಾಯುಕ್ತ ಚಂದ್ರಶೇಖರ್ ಎಚ್ಚರಿಕೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts