More

    ಫಲಕಗಳಲ್ಲಿ ಶೇ. 60 ಕನ್ನಡ ಭಾಷೆ ಕಡ್ಡಾಯ

    ಧಾರವಾಡ: ಅಂಗಡಿ, ಬ್ಯಾಂಕ್, ವಾಣಿಜ್ಯ ಸಂಕೀರ್ಣಗಳ ಫಲಕಗಳಲ್ಲಿ ಮೇಲಿನ ಅರ್ಧ ಭಾಗವು ಶೇ. ೬೦ರಷ್ಟು ಕಡ್ಡಾಯವಾಗಿ ಕನ್ನಡ ಭಾಷೆಯಲ್ಲಿರಬೇಕು ಎಂದು ಜಿಲ್ಲಾಽಕಾರಿ ದಿವ್ಯ ಪ್ರಭು ಹೇಳಿದರು.
    ತಮ್ಮ ಕಚೇರಿ ಸಭಾಂಗಣದಲ್ಲಿ ಕನ್ನಡ ಅಽಕೃತ ಭಾಷೆಯ ಅನುಷ್ಠಾನ ಸಂಬAಧ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
    ವಾಣಿಜ್ಯ, ಕೈಗಾರಿಕೆ ಮತ್ತು ವ್ಯವಹಾರ ಉದ್ಯಮಗಳು, ಟ್ರಸ್ಟ್ಗಳು, ಸಮಾಲೋಚನ ಕೇಂದ್ರಗಳು, ಪ್ರಯೋಗಾಲಯಗಳು, ಮನೋರಂಜನಾ ಕೇಂದ್ರಗಳು ಮತ್ತು ಹೋಟೆಲ್‌ಗಳ ನಾಮಫಲಕದಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಶೇ. ೬೦ರಷ್ಟು ಪ್ರದರ್ಶಿಸಬೇಕು. ನಿಯಮ ಪಾಲಿಸದಿದ್ದರೆ ಮೊದಲು ೫,೦೦೦ ರೂಪಾಯಿ ದಂಡ, ೨ನೇ ಬಾರಿ ೧೦,೦೦೦ ರೂ. ದಂಡ, ನಂತರ ೨೦,೦೦೦ ರೂ. ದಂಡ ವಿಽಸಿ ಪರವಾನಗಿ ರದ್ದುಗೊಳಿಸಲಾಗುವುದು ಎಂದರು.
    ರಾಜ್ಯ ಮತ್ತು ಕೇಂದ್ರ ಸರ್ಕಾರದ ಒಡೆತನದ ಕೈಗಾರಿಕಾ ಸಂಸ್ಥೆ, ಸಾರ್ವಜನಿಕ ವಲಯ, ಉದ್ಯಮ, ಬ್ಯಾಂಕ್ ಮತ್ತು ಖಾಸಗಿ ಕೈಗಾರಿಕೆಗಳಲ್ಲಿ ಕನ್ನಡ ಭಾಷೆ ಬಳಕೆ ಕಡ್ಡಾಯ. ಫಲಕ, ಜಾಹಿರಾತು, ರಸೀದಿ, ಬಿಲ್ ಹಾಗೂ ನೋಟಿಸ್‌ಗಳು ಕಡ್ಡಾಯವಾಗಿ ಕನ್ನಡ ಭಾಷೆಯಲ್ಲಿರಬೇಕು ಎಂದರು.
    ಬ್ಯಾAಕ್ ಮತ್ತು ಇತರ ಹಣಕಾಸು ಸಂಸ್ಥೆಗಳ ಉದ್ಯೋಗಿ ಸಾರ್ವಜನಿಕರೊಂದಿಗೆ ಸಂಪರ್ಕ ಹಾಗೂ ಪತ್ರ ವ್ಯವಹಾರವನ್ನು ಕನ್ನಡದಲ್ಲೇ ನಿರ್ವಹಿಸಬೇಕು. ರಸ್ತೆಗಳು ಮತ್ತು ಬಡಾವಣೆ ಪ್ರದೇಶಗಳ ಹೆಸರು, ಫಲಕಗಳು ಕನ್ನಡದಲ್ಲಿರಬೇಕು ಎಂದರು.
    ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಹಾಗೂ ವಿವಿಧ ಇಲಾಖೆಗಳ ಅಽಕಾರಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts