More

    ಕ್ಷೌರದಂಗಡಿಗೆ ತೆರಳಿದ್ದ ಆರು ಜನರಲ್ಲಿ ಕರೊನಾ ಸೋಂಕು, ಇಡೀ ಗ್ರಾಮವೇ ಸೀಲ್​ ಡೌನ್​, ಆದರೆ ಕ್ಷೌರಿಕನಿಗೇನಾಯ್ತು?

    ಭೋಪಾಲ್​: ಲಾಕ್​ಡೌನ್​ ಇದ್ದರೂ ಹಲವು ವಿನಾಯ್ತಿಗಳನ್ನು ನೀಡಲಾಗಿದೆ. ಆದರೆ, ಕ್ಷೌರದಂಗಡಿ, ಸಲೂನ್​ಗಳನ್ನು ತೆರೆಯುವಂತಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟವಾಗಿ ಹೇಳಿದೆ. ಗ್ರಾಮೀಣ ಪ್ರದೇಶಗಳಲ್ಲಿ ಲಾಕ್​ಡೌನ್​ ನಿಯಮಗಳು ಕಟ್ಟುನಿಟ್ಟಾಗಿ ಪಾಲನೆಯಾಗೋದು ಕಷ್ಟಸಾಧ್ಯವೇ ಸರಿ.

    ಮಧ್ಯಪ್ರದೇಶದ ಖರಗೋನ್​ ಜಿಲ್ಲೆಯ ಬಡಗಾಂವ್​ ಎಂಬ ಹಳ್ಳಿಯಲ್ಲಿ ಆರು ಜನರಿಗೆ ಸೋಂಕು ತಗುಲಿದೆ. ಇವರೆಲ್ಲರಿಗೆ ಸೋಂಕು ಹರಡಿದ್ದು, ಗ್ರಾಮದಲ್ಲಿದ್ದ ಕ್ಷೌರದಂಗಡಿಯಿಂದಾಗಿ. ಇವರೆಲ್ಲರಿಗೂ ಒಂದೇ ಬಟ್ಟೆ ಹಾಗೂ ಸಾಮಗ್ರಿಗಳನ್ನು ಬಳಸಿ ಕ್ಷೌರಿಕ ಹೇರ್​ಕಟ್​ ಮಾಡಿದ್ದ. ಹೀಗಾಗಿ ಸದ್ಯ ಇಡೀ ಗ್ರಾಮವನ್ನೇ ಸೀಲ್​ ಡೌನ್​ ಮಾಡಲಾಗಿದೆ.

    ಇಂದೋರ್​ನ ಹೋಟೆಲೊಂದರಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಇತ್ತೀಚೆಗೆ ಗ್ರಾಮಕ್ಕೆ ಹಿಂದಿರುಗಿದ್ದ. ಆತ ಏಪ್ರಿಲ್​ 5ರಂದು ಹಳ್ಳಿಯಲ್ಲಿದ್ದ ಕ್ಷೌರದಂಗಡಿಗೆ ತೆರಳಿ ಹೇರ್​ಕಟ್ ಮಾಡಿಸಿಕೊಂಡಿದ್ದ. ಬಳಿಕ ಆತನಿಗೆ ಸೋಂಕು ಇರುವುದು ಖಚಿತವಾಗಿತ್ತು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ. ದಿವ್ಯೇಶ್​ ವರ್ಮಾ ಮಾಹಿತಿ ನೀಡಿದ್ದಾರೆ.

    ಈತನ ಪ್ರಾಥಮಿಕ ಸೋಂಕಿತರ ಪಟ್ಟಿ ಮಾಡುತ್ತಿದ್ದಾಗ ಆತ ಕ್ಷೌರ ಮಾಡಿಸಿಕೊಂಡಿದ್ದು ಬೆಳಕಿಗೆ ಬಂದಿದೆ. ಅದೇ ದಿನ ಒಟ್ಟು 12 ಜನರು ಕ್ಷೌರ ಮಾಡಿಸಿಕೊಂಡಿದ್ದರು. ಅವರನ್ನು ಪರೀಕ್ಷೆಗೊಳಪಡಿಸಿದಾಗ 6 ಜನರು ಸೋಂಕಿಗೆ ಒಳಗಾಗಿರುವುದು ಪತ್ತೆಯಾಗಿದೆ.

    ಆದರೆ, ಅಚ್ಚರಿಯ ಸಂಗತಿ ಎಂದರೆ ಕ್ಷೌರಿಕನಲ್ಲಿ ಸೋಂಕು ಪತ್ತೆಯಾಗಿಲ್ಲ. ಆತನ ರಕ್ತ ಹಾಗೂ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಯಲ್ಲಿ ನೆಗೆಟಿವ್​ ಎಂದು ವರದಿ ಬಂದಿದೆ.

    ತನ್ನೂರಿಗೆ ತೆರಳಲು ಅತನಿಗೆ ಇದನ್ನು ಬಿಟ್ಟರೆ ಬೇರಾವ ದಾರಿಯೂ ಇರಲಿಲ್ಲ, ಇದಕ್ಕಾಗಿ ವೆಚ್ಚವಾಗಿದ್ದೆಷ್ಟು ಗೊತ್ತೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts