More

    6 ಐಪಿಎಸ್ ಅಧಿಕಾರಿಗಳ ವರ್ಗಾವಣೆ‌: ತಿಂಗಳು ತುಂಬುವ ಮುನ್ನವೇ 2 ಬಾರಿ ಆರ್​.ಚೇತನ್​ ವರ್ಗಾವಣೆ

    ಬೆಂಗಳೂರು: ರಾಜ್ಯ ಗುಪ್ತಚರ ಇಲಾಖೆಯ ಬೆಂಗಳೂರು ಎಸ್​ಪಿ ಆರ್​.ಚೇತನ್​ ಸೇರಿ 6 ಐಪಿಎಸ್​ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.

    ಡೈರೆಕ್ಟರ್ ಆಫ್ ಸಿವಿಲ್ ರೈಟ್ಸ್ ಎನ್ಫೋರ್ಸ್​ಮೆಂಟ್​ನ ಡಿಐಜಿ ಆಗಿ ವೈ.ಎಸ್. ರವಿಕುಮಾರ್, ಮೈಸೂರು ವಿಭಾಗದ ಕರ್ನಾಟಕ ಪೊಲೀಸ್ ಅಕಾಡೆಮಿಯ ಡೈರೆಕ್ಟರ್ ಆಗಿ ದಿವ್ಯಾ ವಿ. ಗೋಪಿನಾಥ್, ಹಾವೇರಿ ಇಂಟೆಲಿಜೆನ್ಸ್​ ಎಸ್​ಪಿ ಆಗಿ ಹನುಮಂತರಾಯ, ಕೋಲಾರ ಎಸ್​ಪಿ ಆಗಿ ನಾರಾಯಣ ಎಂ., ಹಾವೇರಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಯಾಗಿ ಡಾ. ಶಿವಕುಮಾರ್, ಕಲಬುರಗಿ ನಗರ ಪೊಲೀಸ್​ ಆಯುಕ್ತರನ್ನಾಗಿ ಚೇತನ್ ಆರ್. ಅವರನ್ನು ನಿಯೋಜಿಸಿ ವರ್ಗಾವಣೆ ಮಾಡಲಾಗಿದೆ.

    ಈ ಹಿಂದೆ ಮೈಸೂರು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಆಗಿದ್ದ ಆರ್​.ಚೇತನ್​ ಅವರನ್ನ ರಾಜ್ಯ ಗುಪ್ತಚರ ಇಲಾಖೆಗೆ ಕಳೆದ ಡಿಸೆಂಬರ್​ 21ರಂದು ವರ್ಗಾವಣೆ ಮಾಡಲಾಗಿತ್ತು. ತಿಂಗಳು ತುಂಬುವ ಮೊದಲೇ ಇಲ್ಲಿಂದ ಕಲಬುರಗಿಗೆ ವರ್ಗಾವಣೆ ಮಾಡಲಾಗಿದೆ. ಕಲಬುರಗಿ ನಗರ ಪೊಲೀಸ್ ಆಯುಕ್ತರಾಗಿದ್ದ ಡಾ. ವೈ.ಎಸ್. ರವಿಕುಮಾರ್​ ಅವರನ್ನ ಡೈರೆಕ್ಟರ್ ಆಫ್ ಸಿವಿಲ್ ರೈಟ್ಸ್ ಎನ್ಫೋರ್ಸ್​ಮೆಂಟ್​ನ ಡಿಐಜಿ ಆಗಿ ವರ್ಗಾವಣೆ ಮಾಡಲಾಗಿದೆ.

    ಖಾಲಿ ಬಾಟಲಿ ಕೊಟ್ಟರೆ ಹಣ ವಾಪಸ್​! ಡಿಪಾಸಿಟ್​ ಇಟ್ಟು ನೀರಿನ ಬಾಟಲಿ ಪಡೆಯಬೇಕು, ಶಿವಗಂಗೆ ಬೆಟ್ಟದಲ್ಲಿ ನೂತನ ಪ್ರಯೋಗ

    ಖಾಲಿ ಬಾಟಲಿ ಕೊಟ್ಟರೆ ಹಣ ವಾಪಸ್​! ಡಿಪಾಸಿಟ್​ ಇಟ್ಟು ನೀರಿನ ಬಾಟಲಿ ಪಡೆಯಬೇಕು, ಶಿವಗಂಗೆ ಬೆಟ್ಟದಲ್ಲಿ ನೂತನ ಪ್ರಯೋಗ

    ಜನಾರ್ದನ ರೆಡ್ಡಿ ಆಸ್ತಿ ಜಪ್ತಿಗೆ ರಾಜ್ಯ ಸರ್ಕಾರ ಅಸ್ತು! ಪಕ್ಷ ಸ್ಥಾಪನೆ ಬೆನ್ನಲ್ಲೇ ರೆಡ್ಡಿಗೆ ಬಿಗ್​ ಶಾಕ್​

    ಮೈಸೂರು ಎಸ್​ಪಿ ಸೇರಿ ಐವರು ಐಪಿಎಸ್​ ಅಧಿಕಾರಿಗಳ ವರ್ಗಾವಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts