More

    6 ತಿಂಗಳಿಂದ ಜನೌಷಧ ಕೇಂದ್ರ ಬಂದ್

    ಮಂಜುನಾಥ ಶಿವಕ್ಕನವರ ಕುಂದಗೋಳ

    ತಾಲೂಕು ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿನ ಪ್ರಧಾನಮಂತ್ರಿ ಭಾರತೀಯ ಜನೌಷಧ ಕೇಂದ್ರ ಆರು ತಿಂಗಳಿಂದ ಬಾಗಿಲು ಮುಚ್ಚಿದೆ. ಇದರಿಂದ ರೋಗಿಗಳು ಪರದಾಡುವಂತಾಗಿದೆ.

    ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ವಿವಿಧ ಹಳ್ಳಿಗಳು, ಪಟ್ಟಣಗಳಿಂದ ಸಾವಿರಾರು ರೋಗಿಗಳು ಬರುತ್ತಾರೆ. ಈಗಾಗಲೇ ಜನರು ಕರೊನಾ ವೈರಸ್​ನಿಂದ ತತ್ತರಿಸಿ ಹೋಗಿದ್ದಾರೆ. ಆಸ್ಪತ್ರೆಗೆ ಹೋದರೆ ನಾನಾ ಪರೀಕ್ಷೆಗಳನ್ನು ಮಾಡುತ್ತಿರುವುದು ಒಂದೆಡೆ. ಇನ್ನೊಂದೆಡೆ ಜನೌಷಧ ಕೇಂದ್ರ ಸ್ಥಗಿತದಿಂದ ಬಡವರು ಹೆಚ್ಚು ಹಣ ತೆತ್ತು ಔಷಧ ಖರೀದಿಸುವಂತಾಗಿದೆ. ಜನೌಷಧ ಕೇಂದ್ರ ಸ್ಥಗಿತವಾಗಿದ್ದರ ಕುರಿತು ವಿಜಯವಾಣಿ ಜೂ. 15ರಂದು ಸುದ್ದಿ ಪ್ರಕಟಿಸಿತ್ತು. ಅದನ್ನು ಓದಿದ ಕೇಂದ್ರ ಮಾಜಿ ಸಚಿವ ದಿ. ಅನಂತ ಕುಮಾರ ಅವರ ಪತ್ನಿ ತೇಜಸ್ವಿನಿ ಅವರು ಧಾರವಾಡ ಡಿಎಚ್​ಒ ಅವರಿಗೆ ದೂರವಾಣಿ ಕರೆ ಮಾಡಿ ಜನೌಷಧ ಕೇಂದ್ರ ತೆರೆಯುವಂತೆ ವಿನಂತಿಸಿದ್ದರು. ಆಗ ಎಚ್ಚೆತ್ತ ಅಧಿಕಾರಿಗಳು ಕೇವಲ 15 ದಿನಗಳು ಕೇಂದ್ರದ ಬಾಗಿಲು ತೆರೆದರು. ಆನಂತರ ಬಾಗಿಲು ಮುಚ್ಚಿದ್ದು, ಇನ್ನೂವರೆಗೆ ಆರಂಭವಾಗಿಲ್ಲ.

    ಎಂಎಸ್​ಐಎಲ್ ಗಮನಕ್ಕೆ ತಂದಿದ್ದೇವೆ: ಜನೌಷಧ ಕೇಂದ್ರ ತೆರೆಯಲು ನಮ್ಮ ಇಲಾಖೆ ಸ್ಥಳದಲ್ಲಿ ಅವಕಾಶ ಮಾಡಿಕೊಡಲಾಗಿದೆ. ಅದರ ನಿರ್ವಹಣೆಯನ್ನು Mಖಐಔ (ಮೈಸೂರ್ ಸೇಲ್ಸ್ ಇಂಟರ್​ನ್ಯಾಶನಲ್ ಲಿಮಿಟೆಡ್) ಅವರಿಗೆ ಕೊಟ್ಟಿದ್ದು, ಈ ವಿಷಯವನ್ನು ಗಮನಕ್ಕೆ ತಂದಿದ್ದೇವೆ ಎಂದು ಹೇಳಿದ ಆರೋಗ್ಯ ಇಲಾಖೆ ತಾಲೂಕು ಅಧಿಕಾರಿ ಡಾ. ಭಾಗೀರಥಿ ಅವರು ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದರು.

    ಸರ್ಕಾರ ಯೋಜನೆಗಳನ್ನು ಜಾರಿಗೆ ತಂದರೆ ಆಗುವುದಿಲ್ಲ. ಅವು ಯಾವ ರೀತಿ ಕೆಲಸ ನಿರ್ವಹಿಸುತ್ತಿವೆ ಎಂಬ ಬಗ್ಗೆ ನಿಗಾ ವಹಿಸಬೇಕು. ಇಲ್ಲದಿದ್ದರೆ ಯೋಜನೆ ಬಡವರಿಗೆ ಮುಟ್ಟುವುದಿಲ್ಲ ಎಂಬುದಕ್ಕೆ ಇಲ್ಲಿನ ಜನೌಷಧ ಕೇಂದ್ರ ಬಂದಾಗಿರುವುದೇ ಸಾಕ್ಷಿ.

    | ಮುತ್ತಣ್ಣ ಶಿವಳ್ಳಿ ಕಾಂಗ್ರೆಸ್ ಕಿಸಾನ್ ಧಾರವಾಡ ಜಿಲ್ಲಾಧ್ಯಕ್ಷ

    ಕೆಲಸ ನಿರ್ವಹಿಸು ತ್ತಿರುವ ಸಿಬ್ಬಂದಿಯು ಆರೋಗ್ಯ ಸರಿ ಇಲ್ಲದ್ದರಿಂದ ಬಿಟ್ಟಿದ್ದರು. ಯಾರು ಬೇಕಾದವರಿಗೆ ಕೆಲಸ ನೀಡಲಾಗುವುದಿಲ್ಲ. ಫಾರ್ಮಸಿ ಕೋರ್ಸ್ ಮುಗಿಸಿದವ ರನ್ನು ನೇಮಿಸಬೇಕು. ಶೀಘ್ರದಲ್ಲಿ ಸಿಬ್ಬಂದಿ ನೇಮಿಸಲಾಗುವುದು.

    | ಕೃಷ್ಣಮೂರ್ತಿ ಎಂಎಸ್​ಐಎಲ್ ಹುಬ್ಬಳ್ಳಿ ಮ್ಯಾನೇಜರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts