More

    ಸದ್ಯಕ್ಕಿಲ್ಲ 5 ಮತ್ತು 8ನೇ ತರಗತಿ ಪರೀಕ್ಷೆ; ಮುಂದೂಡುವುದಾಗಿ ಹೇಳಿದ ಸರ್ಕಾರ

    ಬೆಂಗಳೂರು: ರಾಜ್ಯದ ಐದು ಮತ್ತು 8ನೇ ತರಗತಿ ಪರೀಕ್ಷೆ ಸದ್ಯಕ್ಕೆ ನಡೆಯುವುದಿಲ್ಲ. ಪರೀಕ್ಷೆ ನಡೆಸುವ ವಿಚಾರವಾಗಿ ಇಂದು ನಡೆದ ಕಾನೂನಾತ್ಮಕ ಬೆಳವಣಿಗೆಯಿಂದಾಗಿ ಪರೀಕ್ಷೆ ನಡೆಸುವುದಕ್ಕೆ ತಡೆ ಮುಂದುವರಿದಿದೆ. ಮತ್ತೊಂದೆಡೆ ಇದೇ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಮುಂದೂಡುವುದಾಗಿಯೂ ಸರ್ಕಾರ ಹೇಳಿದೆ.

    ಇದನ್ನೂ ಓದಿ: 5 ಮತ್ತು 8ನೇ ತರಗತಿಗಳಿಗೆ ಪಬ್ಲಿಕ್​ ಪರೀಕ್ಷೆ ರದ್ದು: ಹೈಕೋರ್ಟ್ ಮಹತ್ವದ ಆದೇಶ​

    ಐದು ಮತ್ತು ಎಂಟನೇ ತರಗತಿ ಪರೀಕ್ಷೆಯನ್ನು ರದ್ದು ಮಾಡಿ ನಿನ್ನೆ ಏಕಸದಸ್ಯ ಪೀಠ ಆದೇಶ ನೀಡಿತ್ತು. ಆದರೆ ಅದನ್ನು ಪ್ರಶ್ನಿಸಿ ಸರ್ಕಾರ ವಿಭಾಗೀಯ ಪೀಠಕ್ಕೆ ಅರ್ಜಿ ಸಲ್ಲಿಸಿತ್ತು. ಇಲ್ಲಿ ನಡೆದ ವಿಚಾರಣೆ ಬಳಿಕ ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡದ ವಿಭಾಗೀಯ ಪೀಠ ಅರ್ಜಿ ವಿಚಾರಣೆಯನ್ನು ಮಾ. 14ಕ್ಕೆ ಮುಂದೂಡಿದೆ.

    ಇದನ್ನೂ ಓದಿ: ಮೇಡಮ್​ಗೆ ಕೇಸರಿ ಶಾಲು ಹಾಕಿಲ್ವಾ? ಎಂದು ಸುಮಲತಾ ಕಾಲೆಳೆದ ಪ್ರತಾಪ್​ಸಿಂಹ

    ನ್ಯಾ.ನರೇಂದರ್ ಮತ್ತು ನ್ಯಾ.ಅಶೋಕ್ ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠದಲ್ಲಿ ನಡೆದ ವಿಚಾರಣೆಯಲ್ಲಿ, ಮುಂದಿನ ವಿಚಾರಣೆ ತನಕ ಏಕಸದಸ್ಯ ಪೀಠದ ಆದೇಶ ಮುಂದುವರಿಕೆ ಎಂದು ತಿಳಿಸಲಾಗಿದೆ. ಮಾ. 14ರಂದು 5, 8ನೇ ತರಗತಿ ಪರೀಕ್ಷೆ ವಿಚಾರವಾಗಿ ಹೈಕೋರ್ಟ್​ ನಿರ್ಧರಿಸಲಿದೆ. ಈ ನಡುವೆ ಪರೀಕ್ಷೆ ಮುಂದೂಡುವುದಾಗಿ ಸರ್ಕಾರ ಹೇಳಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts