More

    5500 ಕೋಟಿ ರೂ. ಸಾಲ ನೀಡುವ ಗುರಿ

    ಕಾರವಾರ: ಮುಂಬರುವ ಆರ್ಥಿಕ ವರ್ಷದಲ್ಲಿ ಜಿಲ್ಲೆಯ ವಿವಿಧ ವಲಯಗಳಿಗೆ 5,464.01 ಕೋಟಿ ರೂ. ಸಾಲ ವಿತರಿಸುವ ಗುರಿ ನಿಗದಿ ಮಾಡಲಾಗಿದೆ.

    2020-21ನೇ ಸಾಲಿನ ಸಂಭವನೀಯ ವಾರ್ಷಿಕ ಸಾಲ ಯೋಜನೆಯ ವಿವರಗಳನ್ನು ಜಿಪಂ ಸಿಇಒ ಎಂ. ರೋಶನ್ ಶುಕ್ರವಾರ ಜಿಪಂ ಸಭಾಭವನದಲ್ಲಿ ನಡೆದ ಬ್ಯಾಂಕರ್​ಗಳ ಸಭೆಯಲ್ಲಿ ಬಿಡುಗಡೆ ಮಾಡಿದರು.

    ಯೋಜನೆಯ ಬಹು ಪಾಲನ್ನು ಕೃಷಿ ಹಾಗೂ ಕೃಷಿ ಸಂಬಂಧಿತ ಕ್ಷೇತ್ರಗಳ ಅಭಿವೃದ್ಧಿ ಮೀಸಲಿರಿಸಲಾಗಿದೆ. ಈ ಬಾರಿ ಎಂಟು ಆದ್ಯತಾ ವಲಯಗಳನ್ನು ಗುರುತಿಸಲಾಗಿದ್ದು, 2019-20ನೇ ವರ್ಷಕಿಂತ ಶೇ.8.77 ರಷ್ಟು ಹೆಚ್ಚುವರಿ ಸಾಲ ನೀಡುವ ಸಂಕಲ್ಪ ಮಾಡಲಾಗಿದೆ. ಬೆಳೆ ಅಭಿವೃದ್ಧಿ, ನಿರ್ವಹಣೆ ಮತ್ತು ಮಾರುಕಟ್ಟೆ ಹಾಗೂ ಕೃಷಿ ಸಂಬಂಧಿತ ಕಾರ್ಯಗಳಿಗೆ 1,996.08 ಕೋಟಿ ರೂ., ಕೃಷಿ ಕ್ಷೇತ್ರದಲ್ಲಿ ಮೂಲಸೌಲಭ್ಯ ಅಭಿವೃದ್ಧಿಗೆ 206.45 ಕೋಟಿ, ಹಾಗೂ ಕೃಷಿ ಪೂರಕ ಸಂಬಂಧಿತ ಚಟುವಟಿಕೆಗಳಿಗೆ 446.66 ಕೋಟಿ, ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ 1,702.54 ಕೋಟಿ ರೂ., ರಫ್ತು ಉದ್ಯಮಕ್ಕೆ 25.50 ಕೋಟಿ ರೂ., ಶೈಕ್ಷಣಿಕ ಸಾಲ 210 ಕೋಟಿ ರೂ., ವಸತಿಗಾಗಿ 724. 71 ಕೋಟಿ ರೂ., ನವೀಕರಿಸಬಹುದಾದ ಇಂಧನಕ್ಕಾಗಿ 29.6 ಕೋಟಿ ರೂ., ಸಾಮಾಜಿಕ ಮೂಲಸೌಲಭ್ಯಕ್ಕಾಗಿ 123 ಕೋಟಿ ರೂ. ನಂತೆ ಸಾಲ ನೀಡಲು ಅಂದಾಜಿಸಲಾಗಿದೆ.

    ಬೆಂಗಳೂರು ಆರ್​ಬಿಐ ಎಜಿಎಂ ಪಿ.ಕೆ. ಪಟ್ನಾಯಕ್, ನಬಾರ್ಡ್ ಜಿಲ್ಲಾ ಸಂಯೋಜಕ ರೆಜ್ಜಿಸ್ ಇಮ್ಯಾನುಯಲ್ ಕೆ.ಎಸ್., ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಪಿ.ಎಂ. ಪಿಂಜಾರ, ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಸುಬ್ರಾಯ ಭಟ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts