More

    ಮನೆಯೊಳಗೇ ಇತ್ತು 500 ವರ್ಷಗಳ ಹಿಂದಿನ ಬಾವಿ! ಬಾವಿಯೊಳಗಿಂತ ಬಂತು ಅದ್ಭುತ ವಸ್ತುಗಳು!

    ಲಂಡನ್: ಹಳೆ ಕಾಲದ ಮನೆಗಳೊಳಗೆ ವಿಚಿತ್ರ ಎನಿಸುವ ವಸ್ತುಗಳು ಇರುವುದು ಸಾಮಾನ್ಯ. ಆದರೆ ಇಂಗ್ಲೆಂಡ್​ನ ಒಂದು ಮನೆಯೊಳಗೆ ವಿಶೇಷವೆನಿಸುವ ಬಾವಿಯೇ ಪತ್ತೆಯಾಗಿದೆ. ಆ ಬಾವಿಯನ್ನು ಸರಿಯಾಗಿ ಪರಿಶೀಲಿಸಿದಾಗ ಹಲವು ವಿಶೇಷ ವಸ್ತುಗಳೂ ಸಿಕ್ಕಿವೆಯಂತೆ.

    ಇಂಗ್ಲೆಂಡ್‌ನ ಪ್ಲೈಮೌತ್‌ನಲ್ಲಿ ವಾಸಿಸುವ 70 ವರ್ಷದ ಕಾಲಿನ್ ಸ್ಟಿಯರ್ ಎನ್ನುವವರ ಮನೆಯಲ್ಲಿ ಬಾವಿ ಪತ್ತೆಯಾಗಿದೆ. ಆ ಮನೆಯನ್ನು 1895ರಲ್ಲಿ ನಿರ್ಮಿಸಲಾಗಿದ್ದು, 1988ರಿಂದ ಆತ ಅಲ್ಲಿ ವಾಸವಿದ್ದಾನಂತೆ. ಒಮ್ಮೆ ಮನೆಯ ಒಳಾಂಗಣವನ್ನು ಬದಲಾಯಿಸುವ ನಿಟ್ಟಿನಲ್ಲಿ ಆತ ಬದಲಾವಣೆ ಮಾಡುತ್ತಿದ್ದಾಗ ಒಂದು ಕಿಟಿಕಿಯ ಬಳಿ ನೆಲ ಟೊಳ್ಳಾಗಿರುವಂತೆ ಸದ್ದು ಮಾಡಿತಂತೆ. ಅದಾದ ಮೇಲೆ ಅಲ್ಲಿ ಸರಿಯಾಗಿ ಪರಿಶೀಲಿಸಿದಾಗ ಅಲ್ಲೊಂದು ಬಾವಿ ಇರುವುದು ಪತ್ತೆಯಾಗಿದೆ.

    ಬಾವಿಯ ಮೊದಲು ಐದು ಅಡಿ ಕೆಳಗೆ ಪರಿಶೀಲಿಸಿದಾಗ ಅಲ್ಲೊಂದು ಹಳೆಯ ಖಡ್ಗ ಪತ್ತೆಯಾಗಿದೆ. ಇನ್ನೂ ಸ್ವಲ್ಪ ಕೆಳಗಿಳಿದಾಗ 1725ರ ನಾಣ್ಯವೊಂದು ಹಾಗೂ ಇನ್ನೂ ಕೆಳಗಿಳಿದಾಗ ಉಂಗುರವೊಂದು ಸಿಕ್ಕಿದೆ. 17 ಅಡಿಗಳ ಕೆಳಗೆ ನೀರು ಪತ್ತೆಯಾಗಿದೆ. ನೀರನ್ನು ವೈದ್ಯಕೀಯ ಪರೀಕ್ಷೆಗೆ ಕೊಟ್ಟಿದ್ದು, ಒಂದು ವೇಳೆ ನೀರು ಆರೋಗ್ಯಕರವಾಗಿದ್ದರೆ ಅದನ್ನು ಮಾರಾಟ ಮಾಡುವುದಾಗಿ ಕಾಲಿನ್ ಹೇಳಿದ್ದಾನೆ. ಈ ಪ್ರದೇಶದ ಹಳೆಯ ನಕ್ಷೆಗಳನ್ನೂ ಪರಿಶೀಲಿಸಿದ್ದೇವೆ. ಈ ಬಾವಿ ಸುಮಾರು 500 ವರ್ಷ ಹಿಂದಿನದು ಎನ್ನಲಾಗಿದೆ. ಇದನ್ನು ಪ್ರಾಣಿಗಳಿಗೆ ನೀರು ಕುಡಿಯುವುದಕ್ಕೆ ಅಥವಾ ಮೂರ್ನಾಲ್ಕು ಕುಟುಂಬಗಳಿಗೆ ನೀರು ಪೂರೈಕೆಗೆ ಬಳಸಿರಬಹುದು ಎಂದು ಆತ ಹೇಳಿದ್ದಾನೆ. (ಏಜೆನ್ಸೀಸ್)

    ಹೆರಿಗೆಯಾದ ಅಕ್ಕನನ್ನು ನೋಡಲು ಹೋದ ತಂಗಿಯನ್ನೇ ರೇಪ್ ಮಾಡಿದ ಭಾವ!

    11 ವಯಸ್ಸಿಗೇ ಮಗುವಿಗೆ ಜನ್ಮವಿತ್ತ ಬಾಲಕಿ! ಇದು ಹೇಗಾಗಿದ್ದು ಎಂದು ತಲೆ ಕೆಡಿಸಿಕೊಂಡಿರುವ ಕುಟುಂಬ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts