ಲಿಂಗಸುಗೂರು : ನೆನೆಗುದಿಗೆ ಬಿದ್ದಿದ್ದ ಪಟ್ಟಣದ ಬಸ್ ನಿಲ್ದಾಣ ವೃತ್ತದಿಂದ ಅಂಚೆ ಕಚೇರಿವರಿಗೆ ಅಗಲೀಕರಣ ಕಾರ್ಯಕ್ಕೆ ಪುರಸಭೆ ಸಿಬ್ಬಂದಿಗಳು ಮುಂದಾಗಿದ್ದಾರೆ.
ಇದನ್ನೂ ಓದಿ: 150 ಅಡಿ ಟವರ್ ಏರಿದ ಯುವಕ: ಕೆಳಗಿಳಿಸಲು ರಾತ್ರಿಯಿಡೀ ಕಾದು ಕುಳಿತ ಅಧಿಕಾರಿಗಳು, ಮುಂದೆ ಆಗಿದ್ದಿಷ್ಟು..
ರಸ್ತೆ ಅಗಲೀಕರಣ ಹಾಗೂ ಚರಂಡಿ ನಿರ್ಮಾಣದ ಕಾಮಗಾರಿಗೆ ಕೋಟಿ ರೂ ಅನುದಾನ ಬಿಡುಗಡೆಯಾಗಿತ್ತು. ಲೋಕೋಪಯೋಗಿ ನಿಯಮದ ಪ್ರಕಾರ 50 ಅಡಿವರಿಗೆ ಅಗಲೀಕರಣ ಮಾಡಬೇಕು. ಆದರೆ ಪುರಸಭೆ ಆಡಳಿತ ಹಾಗೂ ಈ ಹಿಂದಿನ ಶಾಸಕರು 50 ಅಡಿ ಬದಲು 45 ಅಡಿ ಅಗಲೀಕರಣ ಮಾಡಬೇಕೆ ಎಂಬ ಗೊಂದಲದಿಂದ ಕಾಮಗಾರಿ ನೆನೆಗುದಿಗೆ ಹಾಕಲಾಗಿತ್ತು.
ಇದರಿಂದ ಸಾರ್ವಜನಿಕರು ಪುರಸಭೆ ಆಡಳಿತಕ್ಕೆ ಹಿಡಿಶಾಪ ಹಾಕುತ್ತಿದ್ದರು. ಮಳೆ ಬಂದಾಗ ಬಸ್ ನಿಲ್ದಾಣ ಎದುರು ನೀರು ಸರಾಗವಾಗಿ ಹರಿದು ಹೋಗದೇ ರಸ್ತೆಯಲ್ಲಿ ನೀರು ನಿಂತು ಸಾರ್ವಜನಿಕರು ತೊಂದರೆ ಎದುರಿಸುವಂತಾಗಿತ್ತು. ರಸ್ತೆ ಇಕ್ಕಟ್ಟಾಗಿರುವುದರಿಂದ ಸುಗಮ ಸಂಚಾರಕ್ಕಾಗಿ ವಾಹನ ಸವಾರರು ಪರದಾಟ ಕೇಳತಿರದು.
ಶಾಸಕರ ಖಡಕ್ ಸೂಚನೆ :
ಶಾಸಕ ಮಾನಪ್ಪ ವಜ್ಜಲ್ ಪುರಸಭೆಯಲ್ಲಿ ಅಧಿಕಾರಿಗಳ ಸಭೆ ನಡೆಸಿ ನಿಯಮದ ಪ್ರಕಾರ 50 ಅಡಿ ರಸ್ತೆ ಅಗಲೀಕರಣ ಮಾಡಬೇಕು. ಯಾವುದೇ ಒತ್ತಡ ಹಾಗೂ ಮುಲಾಜಿಗೆ ಒಳಗಾಗದೇ ಪಟ್ಟಣದ ಸೌಂದರೀಕರಣಕ್ಕಾಗಿ ಅಗಲೀಕರಣ ಮಾಡಲೇಬೇಕು
ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದರಿಂದ ಪುರಸಭೆ ಸಿಬ್ಬಂದಿಗಳು, ಲೋಕೋಪಯೋಗಿ ಕಿರಿಯ ಅಭಿಯಂತರು ಕಳೆದ ಒಂದು ವಾರದಿಂದ ಧ್ವನಿ ವರ್ದಕದ ಮೂಲಕ ಸ್ವಯಂ ಪ್ರೇರಿತವಾಗಿ ಅಂಗಡಿಗಳನ್ನು ತೆರವುಗೊಳಿಸಬೇಕು ಎಂದು ಸೂಚನೆ ನೀಡಲಾಗಿದೆ.
ಶನಿವಾರ ಸಹ ಬಸ್ ನಿಲ್ದಾಣ ವೃತ್ತದಿಂದ ಜೆಸ್ಕಾಂ ಕಚೇರಿವರಿಗೆ ಬಿದಿ ಬದಿ ವ್ಯಾಪಾರಿಗಳಿಗೆ ಮೌಖಿಕವಾಗಿ ಸೂಚನೆ ನೀಡಿ ಒಂದು ವೇಳೆ ಅಂಗಡಿಗಳನ್ನು ತೆರವುಗೊಳಸದಿದ್ದಾರೆ ರವಿವಾರ ಜೆಸಿಬಿ ಮೂಲಕ ತೆರವುಗೊಳಿಸಲಾಗುವುದು ಎಂದು ಸೂಚನೆ ನೀಡಿದ್ದಾರೆ.