More

    ಬಗೆದಷ್ಟೂ ಬಯಲಾಗ್ತಿದೆ ಬಂಧಿತ ಉಗ್ರರ ಮಾಸ್ಟರ್ ಮೈಂಡ್ ಜುನೈದ್ ಪಾಪ ಕೃತ್ಯಗಳು

    ಬೆಂಗಳೂರು: ರಾಜ್ಯದಲ್ಲಿ ಭಾರೀ ವಿಧ್ವಂಸಕ ಕೃತ್ಯವೆಸಗಲು ಸಂಚು ರೂಪಿಸುತ್ತಿದ್ದ ಐವರು ಶಂಕಿತ ಉಗ್ರರ ಹೆಡೆಮುರಿ ಕಟ್ಟುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬೆಂಗಳೂರು ಮೂಲದ ಬಂಧಿತ ಉಗ್ರರಾದ ಸುಹೈಲ್, ಉಮರ್, ತಬ್ರೇಜ್, ಮುದಾಸಿರ್, ಫೈಜಲ್‍ರಬ್ಬಾನಿ ಎಲ್‍ಇಟಿ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದರು ಎಂದು ಗುರುತಿಸಲಾಗಿದೆ.

    ಬಂಧಿತ ಉಗ್ರರ ಮಾಸ್ಟರ್ ಮೈಂಡ್ ಎನ್ನಲಾದ ಪ್ರಮುಖ ಉಗ್ರ ಜುನೈದ್ ತಲೆಮರೆಸಿಕೊಂಡಿದ್ದು, ಈತನ ಪತ್ತೆಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ್ ಸುದ್ದಿಗೋಷ್ಠಿಯಲ್ಲಿಂದು ಮಾಹಿತಿ ನೀಡಿದರು.

    ಇದನ್ನೂ ಓದಿ:ಐಟಿ ಉದ್ಯೋಗಿಗಳನ್ನು ವಜಾಗೊಳಿಸಿದ ನಂತರ ಎದುರಾಗುತ್ತಿದೆ ಮತ್ತೊಂದು ದೊಡ್ಡ ಹೊಡೆತ! 

    ಉಗ್ರ ಜುನೈದ್ ಹಿಸ್ಟರಿ
    ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಪ್ರಮುಖ ಆರೋಪಿ ಉಗ್ರ ಜುನೈದ್ ಹಿಸ್ಟರಿ ಈಗ ಬಗೆದಷ್ಟು ಬಯಲಾಗಿದೆ. ಜುನೈದ್ & ಟೀ೦ 2017 ರಲ್ಲಿ ಕೊಲೆ ಮಾಡಿ ಜೈಲಿಗೆ ಹೋಗಿದ್ದರು. ಅಷ್ಟೇ ಅಲ್ಲ, 21 ವರ್ಷದ ನೂರ್ ಅಹ್ಮದ್‌ನನ್ನು ಕಿಡ್ನಾಪ್ ಮಾಡಿ ಕೊಲೆ ಮಾಡಿದ್ದರು. ಆಗ ಜುನೈದ್, ಸುಹೈಲ್, ಮುದಾಸಿರ್ ಸೇರಿ 21 ಜನ ಅರೆಸ್ಟ್ ಆಗಿದ್ದರು. ಜೈಲಿಗೆ ಹೋಗಿದ್ದ ಜುನೈದ್ ಡೇಂಜರಸ್‌ ಟೀಂ ಸಮೇತ ಹೊರ ಬಂದಿದ್ದ.

    ಇದನ್ನೂ ಓದಿ: ಬೇಬಿ ಪೌಡರ್​​​ನಿಂದ ಕ್ಯಾನ್ಸರ್: ಕಂಪನಿಗೆ ಬರೋಬ್ಬರಿ $18.8 ಮಿಲಿಯನ್ ದಂಡ ವಿಧಿಸಿದ ನ್ಯಾಯಾಧೀಶರು! 

    ಜೈಲಿನಲ್ಲಿ ಉಗ್ರರ ಜೊತೆ ಸಂಪರ್ಕ
    ಜೈಲಿನಲ್ಲಿ ಉಗ್ರರ ಜೊತೆ ಕಾಂಟ್ಯಾಕ್ಟ್ ಬೆಳೆಸಿಕೊಂಡಿದ್ದ ಜುನೈದ್, ತನ್ನ ಟೀಂ ಸಮೇತ ಉಗ್ರ ಸಂಘಟನೆಗೆ ಕೆಲಸ ಮಾಡುತ್ತೇವೆಂದು ಸಂಪರ್ಕ ಬೆಳೆಸಿಕೊಂಡಿದ್ದ. ಬಳಿಕ ಉಗ್ರ ಸಂಘಟನೆಯೊಂದರ ಹ್ಯಾಂಡ್ಲರ್ಸ್​​​ನ ಕಾಂಟ್ಯಾಕ್ಟ್ ಮಾಡಿದ್ದಾನೆ. ಅಲ್ಲಿಂದ ಬಾಂಬ್ ಬ್ಲಾಸ್ಟಿಂಗ್ ಸೇರಿ ಹಲವು ಕೃತ್ಯಗಳ ಬಗ್ಗೆ ಟ್ರೇನಿಂಗ್ ತೆಗೆದುಕೊಳ್ಳಲಾಗಿದೆ. ಸದ್ಯ ಎಸ್ಕೆಪ್ ಆಗಿರುವ ಜುನೈದ್‌ಗಾಗಿ ಸಿಸಿಬಿಯಿಂದ ಹುಡುಕಾಟ ನಡೆಸಲಾಗಿದೆ.

    ಮಿಂಚಿನ ದಾಳಿ
    ನಗರದ ಪ್ರಮುಖ ಕಟ್ಟಡಗಳು, ಗಣ್ಯರು, ಐಟಿಬಿಟಿ ಕಂಪನಿಗಳು ಹಾಗೂ ಪ್ರಮುಖ ಸರ್ಕಾರಿ ಕಚೇರಿಗಳನ್ನು ಗುರಿಯಾಗಿಟ್ಟುಕೊಂಡು ಜನಸಂದಣಿ ಇರುವ ಪ್ರದೇಶದಲ್ಲಿ ಬಾಂಬ್ ಸ್ಫೋಟಿಸಲು ಬಂಧಿತರು ಸಂಚು ರೂಪಿಸಿದ್ದರು ಎಂದು ಆಯುಕ್ತರು ತಿಳಿಸಿದ್ದಾರೆ. ನಗರದಲ್ಲಿ ತಲೆಮರೆಸಿಕೊಂಡಿರುವ ಕೆಲವು ಆರೋಪಿಗಳ ಪತ್ತೆಗೆ ಸಿಸಿಬಿ ಪೊಲೀಸರು ಕಾರ್ಯಚರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಕೆಲವು ಆರೋಪಿಗಳು ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿ ದೇಶವಿರೋಧಿ ಚಟುವಟಿಕೆ ನಡೆಸಲು ಸಂಚು ರೂಪಿಸುತ್ತಿದ್ದಾರೆ ಎಂಬ ಬಗ್ಗೆ ಬಂದ ಖಚಿತ ಮಾಹಿತಿಯನ್ನಾಧರಿಸಿ ಮಿಂಚಿನ ದಾಳಿ ನಡೆಸಿ ಐವರು ಶಂಕಿತರನ್ನು ಬಂಧಿಸಲಾಗಿದೆ.

    “ನನಗೆ ಅದರ ಮೇಲೆ ಯಾವುದೇ ನಿಯಂತ್ರಣವಿಲ್ಲ”: ತನ್ನ ಭಯದ ಬಗ್ಗೆ ಬಹಿರಂಗವಾಗಿ ಮಾತನಾಡಿದ ನಟಿ ಹುಮಾ ಖುರೇಷಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts