More

  ವಿದ್ಯುತ್​ ತಂತಿ ತಗುಲಿ ಎರಡು ಮರಿಯಾನೆ ಸೇರಿದಂತೆ ಐದು ಆನೆ ಸಾವು

  ರಾಂಚಿ: ಮೈನಿಂಗ್​ ಕಂಪನಿ ಸುತ್ತ ಹಾಕಲಾಗಿದ್ದ ಹೈಟೆನ್ಷನ್​ ವೈರ್​ ತಗುಲಿ ಎರಡು ಮರಿಯಾನೆ ಸೇರಿದಂತೆ ಐದು ಆನೆಗಳು ಏಕಕಾಲದಲ್ಲಿ ಮೃತಪಟ್ಟಿರುವ ಘಟನೆ ಜಾರ್ಖಂಡ್‌ನ ಪೂರ್ವ ಸಿಂಗ್‌ಭೂಮ್ ಜಿಲ್ಲೆಯ ಮುಸಾಬಾನಿ ಅರಣ್ಯ ಪ್ರದೇಶದ ಬೆನಾಸೋಲ್ ಉಪರಬಂಧ ಪೊಟಾಸ್ ಅರಣ್ಯದಲ್ಲಿ ಸೋಮವಾರ ತಡರಾತ್ರಿ ನಡೆದಿದೆ.

  ಹಿಂದೂಸ್ತಾನ್ ಕಾಪರ್ ಲಿಮಿಟೆಡ್‌ ಕಂಪನಿ ಸುತ್ತ ಹಾಕಲಾಗಿದ್ದ ಹೈಟೆನ್ಷನ್ ವೈರ್‌ ತಗುಲಿ ಈ ಅವಘಡ ಸಂಭವಿಸಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

  ಈ ಕುರಿತು ಪ್ರತಿಕ್ರಿಯಿಸಿರುವ ವಿಭಾಗೀಯ ಅರಣ್ಯಾಧಿಕಾರಿ ಮಮತಾ ಪ್ರಿಯದರ್ಶಿ, ಮುಸಾಬಾನಿಯ ಕಾಪರ್ ಟೌನ್‌ಶಿಪ್‌ನಲ್ಲಿರುವ ಬೆನಿಯಾಸಾಯಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಏಕಕಾಲದಲ್ಲಿ 33 ಸಾವಿರ ವೋಲ್ಟ್‌ಗಳ ವಿದ್ಯುತ್ ತಂತಿ ತಗುಲಿದ ಪರಿಣಾಮ ಈ ಅವಘಡ ಸಂಭವಿಸಿದೆ. ಅರಣ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಅದೇ ಹಿಂಡಿನ ಇನ್ನೂ ನಾಲ್ಕು ಆನೆಗಳನ್ನು ಓಡಿಸಿದ್ದಾರೆ. ಇತರ ನಾಲ್ಕು ಆನೆಗಳನ್ನು ಸುರಕ್ಷಿತವಾಗಿ ಓಡಿಸಿದ ನಂತರವೇ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

  Elephant Herd

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts