More

    5 ದಿನದ ನವಜಾತ ಶಿಶು ಮಾರಾಟ

    ಹೊನ್ನಾಳಿ: ಹೊನ್ನಾಳಿ ಸರ್ಕಾರಿ ಆಸ್ಪತ್ರೆಯಲ್ಲಿ ಐದು ದಿನಗಳ ಶಿಶುವನ್ನು ತಾಯಿ ಹಾಗೂ ಆಸ್ಪತ್ರೆ ಸಿಬ್ಬಂದಿ ಸೇರಿ ಬೇರೆಯವರಿಗೆ ಮಾರಾಟ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಮಾರಾಟವಾಗಿದ್ದ ಮಗುವನ್ನು ಜಿಲ್ಲಾ ಮಕ್ಕಳ ರಕ್ಷಣಾ ಇಲಾಖೆ ವಶಕ್ಕೆ ಪಡೆದು ಆರು ಜನರ ವಿರುದ್ಧ ದೂರು ದಾಖಲಿಸಿದೆ.

    ಬಾಣಂತಿ ಎಂಬ ಕಾರಣಕ್ಕೆ ತಾಯಿ ಬಿಟ್ಟು, ಮಗು ಖರೀದಿಸಿದ ದಾವಣಗೆರೆಯ ಲಾವಣ್ಯ, ಅಣ್ಣೇಶ್, ಮಧ್ಯಸ್ಥಿಕೆ ವಹಿಸಿದ ಆಸ್ಪತ್ರೆ ಶುಶ್ರೂಷಕ ಕುಮಾರ್, ಲ್ಯಾಬ್ ಟೆಕ್ನಿಷಿಯನ್ ಬಸವರಾಜ್, ಡಿ-ಗ್ರೂಪ್ ನೌಕರ ಮಹೇಶ್ ಅವರನ್ನು ಬಂಧಿಸಲಾಗಿದೆ. ಹೊನ್ನಾಳಿ ಸಮೀಪದ ಗ್ರಾಮವೊಂದರ ಮಹಿಳೆ 5 ದಿನಗಳ ಹಿಂದೆ ಹೊನ್ನಾಳಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಗಂಡ ಸತ್ತ ನಂತರ ಮಗು ಜನಿಸಿದೆ, ಹೀಗಾಗಿ ನನಗೆ ಮಗು ಬೇಡ. ಯಾರಿಗಾದರೂ ಕೊಡುತ್ತೇನೆ ಇಲ್ಲವೇ ಆಸ್ಪತ್ರೆಯಲ್ಲೇ ಬಿಟ್ಟು ಹೋಗುತ್ತೇನೆ ಎಂದಾಗ ದತ್ತು ಕೇಂದ್ರಕ್ಕೆ ಕೊಡಿ ಎಂದು ಕೆಲವರು ಸಲಹೆ ನೀಡಿದ್ದರು. ಮೇ 22ರಂದು ಆಸ್ಪತ್ರೆಗೆ ಹೋಗಿ ಮಗು ಬೇಡವೆಂದರೆ ಇಲಾಖೆ ವಶಕ್ಕೆ ಒಪ್ಪಿಸಲು ಹೇಳಿದಾಗ, ಮಗು ಕೊಡುವುದಿಲ್ಲ ಎಂದು ತಾಯಿ ಹೇಳಿದ್ದರು. 24ರಂದು ತಾಯಿ ಇದ್ದ ಗ್ರಾಮಕ್ಕೆ ತೆರಳಿದಾಗ ಅಲ್ಲಿ ಮಗು ಇರಲಿಲ್ಲ. ಈ ಬಗ್ಗೆ ವಿಚಾರಿಸಿದಾಗ 22ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದ ದಿನವೇ ಆಸ್ಪತ್ರೆಯಲ್ಲಿ ನೌಕರ ಮಹೇಶ್ ಮಗುವನ್ನು ಬೇರೊಬ್ಬರಿಗೆ ಕೊಡಿಸಿ, 5 ಸಾವಿರ ನೀಡಿದ್ದಾಗಿ ತಾಯಿ ತಿಳಿಸಿದ್ದಾಳೆ ಎಂದು ಸಿಡಿಪಿಒ ಮಹಾಂತಸ್ವಾಮಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

    ಜೂ. 1ರಿಂದ ತೆರೆಯಲಿವೆ ದೇವಸ್ಥಾನಗಳು; ಮಸೀದಿ, ಚರ್ಚ್ ಸದ್ಯಕ್ಕಿಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts