More

    ಕೇರಳದಲ್ಲಿ ಒಂದೇ ಕುಟುಂಬದ ಐವರಿಗೆ ಕೊರೊನಾ ಸೋಂಕು ಇಟಲಿಯಿಂದ ಮರಳಿದ ಮಾಹಿತಿ ಮುಚ್ಚಿಟ್ಟಿದ್ದ ದಂಪತಿ

    ನವದೆಹಲಿ: ಕೇರಳದ ಪತ್ತನಂತಿಟ್ಟ ಜಿಲ್ಲೆಯ ಒಂದೇ ಕುಟುಂಬದ ಐವರಲ್ಲಿ ಕರೊನಾ ವೈರಸ್ ಪತ್ತೆಯಾಗಿದ್ದು, ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 40ಕ್ಕೆ ಏರಿದೆ.

    ಕೆಲ ದಿನಗಳ ಹಿಂದೆ ಪತ್ತನಂತಿಟ್ಟದ ದಂಪತಿ ತಮ್ಮ ಮಗನೊಂದಿಗೆ ಇಟಲಿಗೆ ಭೇಟಿ ನೀಡಿ ವಾಪಸ್ಸಾಗಿದ್ದರು. ಅಲ್ಲಿಂದ ಬಂದ ಬಳಿಕ ಕೇರಳದಲ್ಲಿ ಸಂಬಂಧಿಕರನ್ನು ಭೇಟಿಯಾಗಿದ್ದರು. ಈ ಸಂಬಂಧಿಗಳಲ್ಲಿ ಇಬ್ಬರು ಜ್ವರದಿಂದಾಗಿ ಆಸ್ಪತ್ರೆಗೆ ಬಂದು ತಪಾಸಣೆ ನಡೆಸಿದಾಗಲೇ ವೈರಸ್ ಪತ್ತೆಯಾಗಿದೆ. ಬಳಿಕ ಕುಟುಂಬದ ಎಲ್ಲರನ್ನೂ ಪರೀಕ್ಷೆ ನಡೆಸಲಾಗಿದ್ದು, ಐವರಲ್ಲಿ ಪರೀಕ್ಷೆ ಪಾಸಿಟಿವ್ ತೋರಿಸಿದೆ. ಸದ್ಯ ಐವರನ್ನೂ ಆಸ್ಪತ್ರೆಯ ಪ್ರತ್ಯೇಕ ವಾರ್ಡ್​ಗಳಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.

    ಮುಂಜಾಗ್ರತಾ ಕ್ರಮವಾಗಿ ದಂಪತಿ ಜತೆಗೆ ವಾಸಿಸುತ್ತಿದ್ದ ಅವರ ವೃದ್ಧ ಪೋಷಕರನ್ನೂ ಸಹ ಆಸ್ಪತ್ರೆಯಲ್ಲಿಟ್ಟು ನಿಗಾವಹಿಸಲಾಗಿದೆ. ಅಲ್ಲದೇ ಇವರು ತಿರುಗಾಡಿದ ಪ್ರದೇಶ, ಇವರ ಸಂಪರ್ಕದಲ್ಲಿದ್ದವರ ಪತ್ತೆಗೆ ಆರೋಗ್ಯ ಇಲಾಖೆ ಪ್ರಯತ್ನಿಸುತ್ತಿದೆ. ಫೆ. 29ರಂದು ಇವರ ಜತೆ ಇಟಲಿಯಿಂದ ಬಂದಿದ್ದ ಇತರರಿಗೂ ಹುಡುಕಲಾಗುತ್ತಿದೆ. ದಂಪತಿ ವಿಮಾನ ನಿಲ್ದಾಣದಲ್ಲಿ ತಮ್ಮ ಪ್ರಯಾಣದ ಬಗೆಗಿನ ಮಾಹಿತಿಗಳನ್ನು ಮುಚ್ಚಿಟ್ಟಿದ್ದರಿಂದಲೇ ಇವರನ್ನು ತಪಾಸಣೆಗೆ ಒಳಪಡಿಸಲಿಲ್ಲ. ಹೀಗಾಗಿ ಪ್ರಕರಣ ಮುಂಚೆಯೇ ಬೆಳಕಿಗೆ ಬಂದಿರಲಿಲ್ಲ ಎಂದು ಕೇರಳ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಮಾಹಿತಿ ನೀಡಿದ್ದಾರೆ.

    ಶಬರಿಮಲೆ ಯಾತ್ರೆ ಕೈಬಿಡಲು ಸೂಚನೆ: ಶಬರಿಮಲೆ ಇರುವ ಪತ್ತನಂತಿಟ್ಟ ಜಿಲ್ಲೆಯಲ್ಲಿ ಐದು ಮಂದಿಗೆ ಕರೊನಾ ಖಚಿತಗೊಂಡಿರುವ ಹಿನ್ನೆಲೆಯಲ್ಲಿ ವೈರಸ್ ಬಾಧಿತರು ಹಾಗೂ ಇವರ ಸಂಪರ್ಕ ಹೊಂದಿರುವವರು ಶಬರಿಮಲೆ ಯಾತ್ರೆ ಕೈಬಿಡುವಂತೆ ದೇವಸ್ವಂ ಮಂಡಳಿ ಸೂಚಿಸಿದೆ. ಮೀನಮಾಸದ ಪೂಜೆ ಮಾ.13ರಿಂದ 18ರವರೆಗೆ ನಡೆಯಲಿದೆ.

    ಮಂಗಳೂರಿನಲ್ಲಿಯೂ ಶಂಕಿತ ಕೊರೊನಾ ಪತ್ತೆ: ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಬಂದಿಳಿದ ಜ್ವರಬಾಧಿತ ಪ್ರಯಾಣಿಕರೊಬ್ಬರನ್ನು ಕೊರೊನಾ ಶಂಕೆಯ ಹಿನ್ನೆಲೆಯಲ್ಲಿ ಪ್ರತ್ಯೇಕ ವಾರ್ಡ್​ಗೆ ವರ್ಗಾಯಿಸಲಾಗಿದೆ.

    ಇಬ್ಬರು ಕೊರೊನಾ ಶಂಕಿತರು ಸಾವು

    ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಹಾಗೂ ಜಮ್ಮು ಕಾಶ್ಮೀರದ ಲಡಾಖ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಕರೊನಾ ಸೋಂಕು ಶಂಕಿತ ವ್ಯಕ್ತಿಗಳು ಭಾನುವಾರ ಸಾವನ್ನಪ್ಪಿದ್ದಾರೆ. ಆದರೆ, ಇವರು ಕರೊನಾದಿಂದಲೇ ಮೃತಪಟ್ಟಿದ್ದಾರೆ ಎಂಬುದು ದೃಢಪಟ್ಟಿಲ್ಲ. ಪಶ್ಚಿಮ ಬಂಗಾಳದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜನರುಲ್ ಹಕ್ ಕೆಲ ದಿನಗಳ ಹಿಂದೆ ಸೌದಿ ಅರೇಬಿಯಾದಿಂದ ಮರಳಿದ್ದು, ತೀವ್ರ ಜ್ವರ, ಶೀತದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ. ಲಡಾಖ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೊಹಮ್ಮದ್ ಅಲಿ ಇರಾನ್​ನಿಂದ ಮರಳಿದ್ದು, ಆತನೂ ಕೂಡ ಜ್ವರದಿಂದಲೇ ಆಸ್ಪತ್ರೆಗೆ ದಾಖಲಾಗಿದ್ದ. ಇಬ್ಬರೂ ಶಂಕಿತರ ರಕ್ತದ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

    ಇಟಲಿಯಲ್ಲಿ 133 ಮಂದಿ ಮರಣ

    ಇಟಲಿಯಲ್ಲಿ ಕೊರೊನಾ ಕರೊನಾ ವೈರಸ್ ವೇಗವಾಗಿ ಹರಡುತ್ತಿದ್ದು, ಒಂದೇ ದಿನ 133 ಜನರು ಸಾವನ್ನಪ್ಪಿದ್ದಾರೆ. ಈ ಮೂಲಕ ಮೃತರ ಸಂಖ್ಯೆ 366ಕ್ಕೆ ಏರಿಕೆಯಾಗಿದೆ. ಇದರಿಂದ ವಿಶ್ವದಾದ್ಯಂತ ಸಾವನ್ನಪ್ಪಿದವರ ಸಂಖ್ಯೆ 3,802ಕ್ಕೆ ಏರಿದೆ. ಇಟಲಿಯಲ್ಲಿ ಹೊಸದಾಗಿ 1,492 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 7,375ಕ್ಕೆ ಹೆಚ್ಚಿದೆ. ಚೀನಾದಲ್ಲಿ ಭಾನುವಾರ 28 ಜನರು ಸಾವನ್ನಪ್ಪಿದ್ದು, ಸತ್ತವರ ಸಂಖ್ಯೆ 3,098ಕ್ಕೆ ಏರಿಕೆಯಾಗಿದೆ. 50 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 80,701ಕ್ಕೆ ಏರಿಕೆಯಾಗಿದೆ.

    ಕೊರೊನಾ ನೆಪದಲ್ಲಿ ದರ ಹೆಚ್ಚಳ

    ಕರೊನಾ ವೈರಸ್ ಭೀತಿಯನ್ನು ಲಾಭಕ್ಕೆ ಬಳಸಿಕೊಳ್ಳುತ್ತಿರುವ ಕೆಲ ಆನ್​ಲೈನ್ ಶಾಪಿಂಗ್ ತಾಣಗಳು, ಕೈ ಶುಚಿಗೊಳಿಸುವ ಲಿಕ್ವಿಡ್ ಮತ್ತು ಹ್ಯಾಂಡ್​ವಾಷ್​ಗಳ (ಸಾನಿಟೈಸರ್) ಬೆಲೆಗಳನ್ನು 16 ಪಟ್ಟು ಅಧಿಕಗೊಳಿಸಿವೆ. ಕೈ ಶುಚಿಗೊಳಿಸುವ ಹಲವು ಬ್ರಾ್ಯಂಡ್​ಗಳ 30 ಎಂ.ಎಲ್​ನ ಬಾಟಲ್​ಗೆ ಆನ್​ಲೈನ್ ಶಾಪಿಂಗ್ ವೈಬ್​ಸೈಟ್​ವೊಂದು ಬರೋಬ್ಬರಿ -ಠಿ; 999 ನಿಗದಿ ಪಡಿಸಿದೆ. ಅದರಲ್ಲೂ ಶೇ. 50ರಷ್ಟು ರಿಯಾಯಿತಿ ನೀಡಿದ್ದೇವೆ ಎಂದೂ ಉಲ್ಲೇಖಿಸಿದೆ. ಆದರೆ, ಈ ಬಾಟಲ್ ಅಂಗಡಿಗಳಲ್ಲಿ ನೂರಿನ್ನೂರು ರೂಪಾಯಿಗೆ ಲಭ್ಯವಾಗುತ್ತಿವೆ. ಇದರ ಜತೆಗೆ ಮಾಸ್ಕ್ ಬೆಲೆ ಕೂಡ ಹೆಚ್ಚಳವಾಗಿದೆ ಎಂಬ ದೂರುಗಳು ಕೇಳಿಬಂದಿವೆ.

    ತುರ್ತು ಪರಿಸ್ಥಿತಿ ಘೋಷಣೆ

    ಕೊರೊನಾ ಮಹಾಮಾರಿಯಿಂದಾಗಿ ಅಮೆರಿಕದಲ್ಲಿ ಈವರೆಗೆ 19 ಜನರು ಸಾವನ್ನಪ್ಪಿದ್ದು, ಸುಮಾರು 500 ಜನರು ಸೋಂಕಿನಿಂದ ಬಳಲುತ್ತಿದ್ದಾರೆ. ನ್ಯೂಯಾರ್ಕ್ ನಗರದಲ್ಲೇ ಮತ್ತೆ 13 ಪ್ರಕರಣಗಳು ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ನ್ಯೂಯಾರ್ಕ್​ನಗರದಲ್ಲಿ ತುರ್ತಪರಿಸ್ಥಿತಿ ಘೋಷಿಸಲಾಗಿದೆ. ಕ್ಯಾಲಿಫೋರ್ನಿಯಾದ ಸಮುದ್ರದಲ್ಲಿ ತಡೆ ಹಿಡಿಯಲ್ಪಟ್ಟಿರುವ 2,422 ಪ್ರಯಾಣಿಕರಿರುವ ಗ್ರಾ್ಯಂಡ್ ಪ್ರಿನ್ಸಸ್ ಹಡಗಿನಲ್ಲಿ ಕರೊನಾ ಪ್ರರಕಣಗಳು ಹೆಚ್ಚಾಗುವ ಭೀತಿ ಎದುರಾಗಿದೆ. 21 ಪ್ರಯಾಣಿಕರಲ್ಲಿ ಕರೊನಾ ಸೊಂಕು ದೃಢಪಟ್ಟ ಹಿನ್ನೆಲೆ ಹಡಗನ್ನು ತಡೆಹಿಡಿಯಲಾಗಿದೆ.

    ತಮಿಳುನಾಡಿನಲ್ಲಿ ಮತ್ತೊಬ್ಬರಿಗೆ ಕೊರೊನಾ ವೈರಸ್​ ಸೋಂಕು: 2ಕ್ಕೆ ಏರಿದ ಸೋಂಕು ಪೀಡಿತರ ಸಂಖ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts