More

    ಪೊಲೀಸ್​ ಠಾಣೆಯಲ್ಲಿ ಸಾವಪ್ಪಿದ ಯುವಕ; ‘ನಿರ್ಲಕ್ಷ್ಯ’ಕ್ಕಾಗಿ ಐವರು ಸಸ್ಪೆಂಡ್​

    ಲಖನೌ: ಉತ್ತರಪ್ರದೇಶದ ಈತಾಹ್​ ಜಿಲ್ಲೆಯಲ್ಲಿ 22 ವರ್ಷ ವಯಸ್ಸಿನ ಯುವಕನೊಬ್ಬ ಪೊಲೀಸ್​ ಕಸ್ಟಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡು ಸಾವಪ್ಪಿದ್ದಾನೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಐವರು ಪೊಲೀಸ್​ ಸಿಬ್ಬಂದಿಯನ್ನು ನಿರ್ಲಕ್ಷ್ಯದ ಆರೋಪದ ಮೇಲೆ ಸಸ್ಪೆಂಡ್ ಮಾಡಲಾಗಿದೆ.

    ಅಲ್ತಾಫ್​ ಎಂಬ ಯುವಕನನ್ನು ಮಂಗಳವಾರ (ನ.9) ಬೆಳಿಗ್ಗೆ ಮಹಿಳೆಯೊಬ್ಬಳ ಅಪಹರಣ ಮತ್ತು ಬಲವಂತದ ಮದುವೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಪೊಲೀಸ್​ ಠಾಣೆಗೆ ಕರೆತರಲಾಗಿತ್ತು. ಆ ವೇಳೆಯಲ್ಲಿ ಆತ ಟಾಯ್ಲೆಟ್ಟಿಗೆ ಹೋಗಬೇಕೆಂದು ಕೇಳಿದ. ಹಲವು ನಿಮಿಷಗಳಾದರೂ ಹಿಂತಿರುಗದಿದ್ದುದನ್ನು ನೋಡಿ ಪೊಲೀಸರು ಒಳಗೆ ಹೋಗಿ ನೋಡಿದರೆ ಅವನು ನೇಣು ಹಾಕಿಕೊಂಡಿದ್ದ. ತನ್ನ ಕಪ್ಪು ಜ್ಯಾಕೆಟಿನ ಲಾಡಿಯನ್ನು ಬಳಸಿ ನಲ್ಲಿಗೆ ಸಿಲುಕಿಸಿ ಉಸಿರುಗಟ್ಟಿಸಿಕೊಂಡಿದ್ದ. ಪ್ರಜ್ಞೆ ತಪ್ಪಿದ್ದ ಆತನನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ 10 ನಿಮಿಷದೊಳಗೆ ಸಾವಪ್ಪಿದ ಎಂದು ಈತಾಹ್​ ಪೊಲೀಸ್​ ಮುಖ್ಯಸ್ಥ ರೋಹನ್ ಪ್ರಮೋದ್ ಬೊತ್ರೆ ಟ್ವಿಟರ್​ನಲ್ಲಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ ಎನ್ನಲಾಗಿದೆ.

    ಇದನ್ನೂ ಓದಿ: ಮನೆಗೆ ಬಂದ ಮಗನ ಪ್ರೇಯಸಿ ಮೇಲೆ ಆತನ ತಂದೆಯಿಂದಲೇ ಅತ್ಯಾಚಾರ

    ಈ ಘಟನೆಯ ವೇಳೆ ಕರ್ತವ್ಯನಿರತರಾಗಿದ್ದ ಐವರು ಪೊಲೀಸರನ್ನು ‘ನಿರ್ಲಕ್ಷ್ಯ’ಕ್ಕಾಗಿ ಅಮಾನತುಗೊಳಿಸಲಾಗಿದೆ. ಮತ್ತೊಂದೆಡೆ, ಅಲ್ತಾಫ್​ನ ತಂದೆ ಚಾಂದ್​ ಮಿಯಾ ಅವರು, ಪೊಲೀಸರೇ ಅವನ ಸಾವಿಗೆ ಕಾರಣರಾಗಿದ್ದಾರೆಂದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. (ಏಜೆನ್ಸೀಸ್)

    ಹೆದ್ದಾರಿಯಲ್ಲಿ ಭೀಕರ ಅಪಘಾತ: ಟ್ಯಾಂಕರ್​ ಟ್ರಕ್​​​ ಅಪ್ಪಳಿಸಿದಂತೇ ಹೊತ್ತಿ ಉರಿದ ಬಸ್ಸು​

    ಪುನೀತ್​ ಮುದ್ದಿಸಿದ್ದ ಆನೆಮರಿಗೆ ಅವರದ್ದೇ ಹೆಸರು! ಅರಣ್ಯ ಇಲಾಖೆಯಿಂದ ವಿಶಿಷ್ಟ ಶ್ರದ್ಧಾಂಜಲಿ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts