More

    ಮೊದಲ ದಿನದ 5, 8ನೇ ತರಗತಿ ಮೌಲ್ಯಾಂಕನ ಯಶಸ್ವಿ

    ಬೆಂಗಳೂರು: ಖಾಸಗಿ ಶಾಲೆಗಳ ತೀವ್ರ ವಿರೋಧದ ನಡುವೆಯೂ ರಾಜ್ಯಾದ್ಯಂತ ಸೋಮವಾರ 5 ಮತ್ತು 8ನೇ ತರಗತಿಯ ಮೌಲ್ಯಾಂಕನ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ.

    ಮೊದಲ ದಿನ ಪ್ರಥಮ ಭಾಷೆ ಕನ್ನಡ ಪರೀಕ್ಷೆ ನಡೆದಿದ್ದು, 5ನೇ ತರಗತಿಗೆ 56,157 ಶಾಲೆಗಳಿಂದ 9,59,734 ವಿದ್ಯಾರ್ಥಿಗಳು ಹಾಗೂ 8ನೇ ತರಗತಿಗೆ 22,639 ಶಾಲೆಯ 9,43,919 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಎಂದು ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ದತ್ತಾಂಶ ನೀಡಿದೆ.

    ಇನ್ನು ಕೆಲವು ಶಾಲೆಗಳಲ್ಲಿ ಪ್ರಶ್ವೆಪತ್ರಿಕೆ ಬದಲಾಗಿ ಗೊಂದಲ ಉಂಟಾಗಿದ್ದ ಪ್ರಕರಣಗಳು ಸಹ ನಡೆದಿವೆ. ಕನ್ನಡ ಇರುವ ಕಡೆ ಇಂಗ್ಲಿಷ್ ಪ್ರಶ್ವೆಪತ್ರಿಕೆ ಮತ್ತು ಇಂಗ್ಲಿಷ್ ಇರುವ ಕಡೆ ಕನ್ನಡ ಪ್ರಶ್ನೆಪತ್ರಿಕೆ ನೀಡಲಾಗಿತ್ತು. ಅದೇ ರಿತಿ ಪ್ರಶ್ನೆಪತ್ರಿಕೆಯಲ್ಲಿ ಕಲಿಕಾ ಚೇತರಿಕೆಯಲ್ಲಿದ್ದ ಪ್ರಶ್ನೆಗಳೇ ಹೆಚ್ಚಾಗಿವೆ ಎಂಬ ಆರೋಪ ಕೇಳಿಬಂದಿದೆ.

    ಮೊದಲ ದಿನದ 5, 8ನೇ ತರಗತಿ ಮೌಲ್ಯಾಂಕನ ಯಶಸ್ವಿ

    ಇದನ್ನೂ ಓದಿ: 5 ಮತ್ತು 8ನೇ ತರಗತಿ ಪಬ್ಲಿಕ್ ಪರೀಕ್ಷೆಗೆ ಗ್ರೀನ್ ಸಿಗ್ನಲ್ ನೀಡಿದ ಸುಪ್ರೀಂ ಕೋರ್ಟ್

    ಆದರೆ, ಪಠ್ಯಪುಸ್ತಕದಲ್ಲಿರುವ ಮಾಹಿತಿಗೆ ಪೂರಕವಾಗಿಯೇ ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಸಮಜಾಯಿಸಿ ನೀಡಿದ್ದಾರೆಂದು ತಿಳಿದುಬಂದಿದೆ.

    ಇನ್ನು ಮೌಲ್ಯಾಂಕನ ನಡೆಸುವ ಬಗ್ಗೆ ಮೊದಲಿನಿಂದಲೂ ಬೆಂಬಲ ನೀಡುತ್ತಾ ಬಂದಿರುವ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ (KAMS) ಸಂಘಟನೆಯು, ರಾಜ್ಯಾದ್ಯಂತ ಪರೀಕ್ಷೆಗೆ ಮಕ್ಕಳು ಸಿದ್ಧರಾಗಿದ್ದು, ಮಕ್ಕಳ ಕಲಿಕೆಯನ್ನು ತಿಳಿಸುವ ಪ್ರಯತ್ನ ಸುಸೂತ್ರವಾಗಿ ನಡೆಯಲಿ ಎಂದು ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಬೆಂಬಲ ಸೂಚಿಸಿದ್ದಾರೆ.

    ಮಂಗಳವಾರ ದ್ವಿತೀಯ ಭಾಷೆ ಇಂಗ್ಲಿಷ್ ಹಾಗೂ ಕನ್ನಡ ಮೌಲ್ಯಾಂಕನ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts