More

    ದೇಶದಲ್ಲಿ ಕರೊನಾದಿಂದಾಗಿ ಸತ್ತಿದ್ದು 4 ಲಕ್ಷವಲ್ಲ, 49 ಲಕ್ಷ ಜನರು! ಅಘಾತಕಾರಿ ವರದಿ ಬಿಡುಗಡೆ

    ನವದೆಹಲಿ: ದೇಶದಲ್ಲಿ ಕರೊನಾ ತನ್ನ ಎರಡನೇ ಅಲೆಯನ್ನು ಮುಗಿಸುವ ಹಂತದಲ್ಲಿದೆ. ಈವರೆಗೆ 3 ಕೋಟಿಗೂ ಅಧಿಕ ಜನರಿಗೆ ಸೋಂಕು ದೃಢವಾಗಿದ್ದು, 4.18 ಲಕ್ಷಕ್ಕೂ ಅಧಿಕ ಜನರು ಸೋಂಕಿನಿಂದಾಗಿ ಕೊನೆಯುಸಿರೆಳೆದಿದ್ದಾರೆ. ಆದರೆ ಮೃತರ ಸಂಖ್ಯೆ ತಪ್ಪಿದ್ದು, ಭಾರತದಲ್ಲಿ ಸರಿ ಸುಮಾರು 49 ಲಕ್ಷ ಜನರು ಸೋಂಕಿಗೆ ಬಲಿಯಾಗಿದ್ದಾರೆಂದು ವರದಿಯೊಂದು ಹೇಳಿದೆ.

    ಅಮೆರಿಕದ ಸೆಂಟರ್ ಫಾರ್ ಗ್ಲೋಬಲ್ ಡೆವಲೆಪ್​ಮೆಂಟ್ ಹೆಸರಿನ ಸಂಸ್ಥೆ ಇಂತದ್ದೊಂದು ವರದಿ ಪ್ರಕಟಿಸಿದೆ. ವರದಿಯ ಪ್ರಕಾರ ದೇಶದ ವಿಭಜನೆ ಆದ ನಂತರ ಸಂಭವಿಸಿದ ಅತಿ ದೊಡ್ಡ ದುರಂತ ಕರೊನಾ ಎನ್ನಲಾಗಿದೆ. ಮೊದಲನೇ ಅಲೆ ಭಯಾನಕವಾಗಿತ್ತು ಆದರೆ ಅದರಲ್ಲಿ ಮರಣ ಪ್ರಮಾಣ ಕಡಿಮೆಯಿತ್ತು. ಆದರೂ ಮೊದಲನೇ ಅಲೆಯಲ್ಲಿ ಕಡಿಮೆಯೆಂದರೂ 20 ಲಕ್ಷ ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

    ಸುಮಾರು ಮೂರು ರೀತಿಯಲ್ಲಿ ನಡೆಸಲಾದ ಸಮೀಕ್ಷೆಯನ್ನಾಧರಿಸಿ ಈ ವರದಿ ತಯಾರಿಸಲಾಗಿದೆ. ಮೊದಲನೆಯದಾಗಿ ಗ್ರಾಹಕ ಪಿರಮಿಡ್ ಮನೆಯ ಸಮೀಕ್ಷೆಯನ್ನು ಆಧರಿಸಲಾಗಿದೆ. ಈ ಸಮೀಕ್ಷೆಯನ್ನು ಪ್ರತಿ 4 ತಿಂಗಳಿಗೊಮ್ಮೆ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಮ್‌ಇಐ) ನಡೆಸುತ್ತದೆ. ಎರಡನೆಯದಾಗಿ ಸಾವಿನ ನೋಂದಣಿ ಆಧಾರದ ಮೇಲೆ 34 ಲಕ್ಷ ಸಾವುಗಳನ್ನು ಅಂದಾಜಿಸಲಾಗಿದೆ. ಆದಾಗ್ಯೂ ಇದರಲ್ಲಿ ಕೇವಲ 7 ರಾಜ್ಯಗಳ ಡೇಟಾವನ್ನು ತೆಗೆದುಕೊಳ್ಳಲಾಗಿದೆ. ಮೂರನೆಯದಾಗಿ ಸಿರೊ ಸಮೀಕ್ಷೆ ಮತ್ತು ವಯಸ್ಸಿಗೆ ನಿರ್ದಿಷ್ಟವಾದ ಸೋಂಕಿನ ಸಾವಿನ ಪ್ರಮಾಣವನ್ನು ಆಧರಿಸಲಾಗಿದೆ. ಅದರಲ್ಲಿ 40 ಲಕ್ಷ ಸಾವನ್ನು ಅಂದಾಜಿಸಲಾಗಿದೆ. ಮೊದಲ ಅಲೆಯಲ್ಲಿ ಸುಮಾರು 15 ಲಕ್ಷ ಸಾವು ಮತ್ತು ಎರಡನೇ ಅಲೆಯಲ್ಲಿ 24 ಲಕ್ಷ ಸಾವು ಸಂಭವಿಸಿದೆ ಎಂದು ಹೇಳಲಾಗಿದೆ.

    ವಾಷಿಂಗ್ಟನ್ ಮೂಲದ ಸೆಂಟರ್ ಫಾರ್ ಗ್ಲೋಬಲ್ ಡೆವಲಪ್‌ಮೆಂಟ್ ಈ ವರದಿಯನ್ನು ಪ್ರಕಟಿಸಿದೆ. ಭಾರತದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣ್ಯಂ, ಹಾರ್ವರ್ಡ್ ವಿಶ್ವವಿದ್ಯಾಲಯದ ಅಭಿಷೇಕ್ ಆನಂದ್ ಮತ್ತು ಜಾಗತಿಕ ಅಭಿವೃದ್ಧಿ ಕೇಂದ್ರದ ನ್ಯಾಯಮೂರ್ತಿ ಸೆಂಡ್‌ಫೋರ್ಡ್ ವರದಿಯನ್ನು ಸಿದ್ಧಪಡಿಸಿದ್ದಾರೆ.

    ಈ ವರದಿಗೆ ಪ್ರತಿಕ್ರಿಯಿಸಿರುವ ಡಬ್ಲ್ಯುಎಚ್‌ಒ ಮುಖ್ಯ ವಿಜ್ಞಾನಿ ಡಾ.ಸೌಮ್ಯಾ ಸ್ವಾಮಿನಾಥನ್, ಪ್ರತಿ ದೇಶವು ಸಾವಿನ ನೈಜ ಅಂಕಿಅಂಶಗಳನ್ನು ತೋರಿಸಬೇಕು, ಇದರಿಂದ ಭವಿಷ್ಯದ ಸಾವುಗಳನ್ನು ತಡೆಯಬಹುದು ಎಂದು ಹೇಳಿದ್ದಾರೆ. (ಏಜೆನ್ಸೀಸ್)

    ಬಿಜೆಪಿ ರಾಷ್ಟ್ರೀಯ ವಕ್ತಾರರಾಗಿ ಪ್ರೇಮ್ ಶುಕ್ಲಾ ಮತ್ತು ಶಾಜಿಯಾ ಇಲ್ಮಿ ನೇಮಕ

    ಬಜಾಜ್ ಚೇತಕ್​ಗೆ ಕಾಂಪಿಟೇಶನ್ ಕೊಡತ್ತಾ ಓಲಾ ಸ್ಕೂಟರ್? ಹೇಗಿರಲಿದೆ ಗೊತ್ತಾ ಓಲಾ ಸ್ಕೂಟಿ?

    ಪಿಯುಸಿ ಆಯ್ತು ಮುಂದೇನು?: ವಿವಿಧ ಕೋರ್ಸ್​ಗಳು, ಉದ್ಯೋಗಾವಕಾಶಗಳ ಮಾಹಿತಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts