More

    ಸರ್ಕಾರಿ ವೈದ್ಯ ಸೀಟು ಶ್ರೀಮಂತರ ಪಾಲು; ಶೇ.48 ಸೀಟುಗಳು ಕೇಂದ್ರ ಪಠ್ಯಕ್ರಮ ವಿದ್ಯಾರ್ಥಿಗಳಿಗೆ | ಹಳ್ಳಿ ಮಕ್ಕಳಿಗಿಲ್ಲ ಲಾಭ

    ಬೆಂಗಳೂರು: ಸರ್ಕಾರಿ ಕೋಟಾದ 2022-23ನೇ ಸಾಲಿನ ವೈದ್ಯಕೀಯ ಸೀಟುಗಳಲ್ಲಿ ಶೇ.48 ಸೀಟುಗಳು ಸಿಬಿಎಸ್​ಇ/ಐಸಿಎಸ್​ಇ ಪಠ್ಯಕ್ರಮ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳ ಪಾಲಾಗಿದೆ.

    2020-21ರಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳಲ್ಲಿ 5.8 ಲಕ್ಷ ವಿದ್ಯಾರ್ಥಿಗಳು 2022ರಲ್ಲಿ ದ್ವಿತೀಯ ಪಿಯುಸಿ ಉತ್ತೀರ್ಣರಾಗಿದ್ದು, ಇದರಲ್ಲಿ 74,983 ಮಂದಿ ಕೇಂದ್ರ ಪಠ್ಯಕ್ರಮದ ವಿದ್ಯಾರ್ಥಿಗಳಾಗಿದ್ದಾರೆ. ಅಂದರೆ, ಶೇ.89 ರಾಜ್ಯಪಠ್ಯಕ್ರಮ ಮತ್ತು ಶೇ.11 ಕೇಂದ್ರ ಪಠ್ಯಕ್ರಮ ವಿದ್ಯಾರ್ಥಿಗಳಾಗಿದ್ದಾರೆ.

    2022-23ನೇ ಸಾಲಿನಲ್ಲಿ ಒಟ್ಟಾರೆ 4,530 ಸರ್ಕಾರಿ ವೈದ್ಯಕೀಯ ಸೀಟುಗಳು ಹಂಚಿಕೆಯಾಗಿದ್ದು, ಇದರಲ್ಲಿ 2,206 ಸೀಟುಗಳು (ಶೇ.49) ರಾಜ್ಯಪಠ್ಯಕ್ರಮ ಮತ್ತು 2,186 ಸೀಟುಗಳು (ಶೇ.48) ಸೀಟುಗಳು ಕೇಂದ್ರ ಪಠ್ಯಕ್ರಮ ಮತ್ತು 138 ಸೀಟುಗಳು (ಶೇ.3) ಕರ್ನಾಟಕೇತರ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ. ಅಂದರೆ ಶೇ.89 ವಿದ್ಯಾರ್ಥಿಗಳು ಶೇ.49 ವೈದ್ಯಕೀಯ ಸೀಟುಗಳನ್ನು ಮತ್ತು ಶೇ.11 ವಿದ್ಯಾರ್ಥಿಗಳು ಶೇ.48 ಸೀಟುಗಳನ್ನು ಪಡೆದುಕೊಂಡಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿಯ ಹಿನ್ನೆಲೆ ತಿಳಿಯಲಿದೆ.

    ಇದರ ಜತೆಗೆ ಪಠ್ಯಕ್ರಮ, ಸೌಲಭ್ಯಗಳು ಮತ್ತು ಶಾಲೆಗಳಲ್ಲಿ ಬೋಧನೆ ಮಾರ್ಗಗಳು ತಿಳಿಯಲಿವೆ. ಸಿಬಿಎಸ್​ಇ/ಐಸಿಎಸ್​ಇ ವ್ಯಾಸಂಗ ಮಾಡುವ ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಗ್ರಾಮೀಣ ಪ್ರದೇಶಕ್ಕಿಂತ ಉತ್ತಮ ಸೌಲಭ್ಯಗಳು ದೊರೆಯುತ್ತಿದೆ. ನಗರ ಪ್ರದೇಶದಲ್ಲಿರುವ ಸರ್ಕಾರಿ ಶಾಲೆಗಳಿಗಿಂತ ಉತ್ತಮ ಗುಣಮಟ್ಟದ ಸೌಲಭ್ಯಗಳನ್ನು ಖಾಸಗಿ ಶಾಲೆಗಳು ಒದಗಿಸಿರುತ್ತವೆ. ಅಲ್ಲದೆ, ಗ್ರಾಮೀಣ ಭಾಗದಲ್ಲಿ ಕೇಂದ್ರ ಪಠ್ಯಕ್ರಮ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಪಾಲಕರು ಕೂಡ ರೈತರು, ಭೂರಹಿತ ಕಾರ್ವಿುಕರು ಮತ್ತು ಕುಶಲಕರ್ವಿುಗಳಿಗಿಂತ ಆರ್ಥಿಕವಾಗಿ ಸಬಲರಾಗಿರುತ್ತಾರೆ. ಆದ್ದರಿಂದ ಕಾನೂನು ಪ್ರಕಾರ ಗ್ರಾಮೀಣ ವಿದ್ಯಾರ್ಥಿಗಳಿಗೆ ನೀಡುವ ಮೀಸಲಾತಿ ಸೀಟುಗಳನ್ನು ಪಡೆದುಕೊಳ್ಳುವಲ್ಲಿ ಗ್ರಾಮೀಣ ವಿದ್ಯಾರ್ಥಿಗಳು ವಿಫಲರಾಗುತ್ತಿದ್ದಾರೆ.

    ಶೇ.3.45 ಗ್ರಾಮೀಣ ಕೋಟಾ

    ಗ್ರಾಮೀಣ ಕೋಟಾದಲ್ಲಿ ವೈದ್ಯಕೀಯ ಸೇರಿ ವೃತ್ತಿಪರ ಕೋರ್ಸ್​ಗಳಿಗೆ ಪ್ರವೇಶ ಪಡೆಯುವ ಸರ್ಕಾರಿ ಶಾಲೆ ವಿದ್ಯಾರ್ಥಿಗಳ ಸಂಖ್ಯೆ ಶೇ.3.45 ರಷ್ಟಿದೆ. ಈ ಸೀಟುಗಳನ್ನು ಸಿಬಿಎಸ್​ಇ/ಐಸಿಎಸ್​ಇ ವಿದ್ಯಾರ್ಥಿಗಳು ಪಡೆದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆಯೋಗವು ಗ್ರಾಮೀಣ ಕೋಟಾವನ್ನು ಸರ್ಕಾರಿ ಶಾಲಾ ವಿದ್ಯಾರ್ಥಿ ಕೋಟಾವಾಗಿ ಪರಿಗಣಿಸಬೇಕು ಎಂದು ಶಿಫಾರಸು ಮಾಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts