More

    ರಾಜ್ಯದಲ್ಲಿ 45,000 ಉದ್ಯೋಗ ಸೃಷ್ಟಿಗೆ ತೆರೆದ ಬಾಗಿಲು

    ಶ್ರೀಕಾಂತ್ ಶೇಷಾದ್ರಿ
    ಬೆಂಗಳೂರು: ಕರೊನಾ ಮತ್ತು ಲಾಕ್​ಡೌನ್ ಪರಿಣಾಮದಿಂದ ರಾಜ್ಯದ ಉದ್ಯಮಗಳು ಕಂಗಾಲಾಗಿರುವಂತೆಯೇ ಕೈಗಾರಿಕೆ ಇಲಾಖೆಯಿಂದ ಧನಾತ್ಮಕ ಸುದ್ದಿಯೊಂದು ಹೊರಬಿದ್ದಿದೆ. ಕಳೆದ ಐದು ತಿಂಗಳ ಅವಧಿಯಲ್ಲಿ ಬರೋಬ್ಬರಿ 138 ಯೋಜನೆಗಳಿಗೆ 30,532 ಕೋಟಿ ರೂ.ಗಳನ್ನು ಕರ್ನಾಟಕದಲ್ಲಿ ಹೂಡಿಕೆ ಮಾಡಲು ವಿವಿಧ ಕಂಪನಿಗಳು ಸರ್ಕಾರದಿಂದ ಅನುಮೋದನೆ ಪಡೆದುಕೊಂಡಿವೆ.

    ಹೂಡಿಕೆ ಹೆಚ್ಚಲು ಕಾರಣಗಳೇನು?

    1 ರಾಜ್ಯದಲ್ಲಿ ಉದ್ಯಮಸ್ನೇಹಿ
    ವಾತಾವರಣಕ್ಕೆ ಸರ್ಕಾರ
    ಒತ್ತು ನೀಡಿರುವುದು.

    2 ಲೈಸೆನ್ಸ್, ನೀತಿ
    ನಿಯಮಗಳಲ್ಲಿ ರಿಯಾಯಿತಿ
    ನೀಡಿರುವುದು

    3 ಭೂ ಸುಧಾರಣೆ ಕಾಯ್ದೆ
    ಸೇರಿ ವಿವಿಧ ಕಾಯ್ದೆಗೆ
    ತಿದ್ದುಪಡಿ ತಂದಿರುವುದು

    4 ಉನ್ನತ ಮಟ್ಟದ ಸಮಿತಿ
    ಅನುಮತಿಯಿಂದಲೇ
    ಉದ್ಯಮ ಆರಂಭಕ್ಕೆ
                   ಅವಕಾಶ

    ಇದರಿಂದಾಗಿ 45,994 ಉದ್ಯೋಗ ಸೃಷ್ಟಿಯ ನಿರೀಕ್ಷೆ ಇದೆ. ರಾಜ್ಯದಲ್ಲಿ ಹೂಡಿಕೆದಾರರಿಗೆ ಅನುಕೂಲವಾಗುವಂತೆ ತಂದಿರುವ ಹೊಸ ಕೈಗಾರಿಕಾ ನೀತಿಯನ್ನು ಸರ್ಕಾರ ತಡಮಾಡದೆ ಅನುಷ್ಠಾನಗೊಳಿಸುವ ಸಾಧ್ಯತೆ ಹೆಚ್ಚಿದೆ. ಇನ್ನೊಂದೆಡೆ ಕೈಗಾರಿಕೆ ಸಚಿವರು ನಿರಂತರವಾಗಿ ಅಧಿಕಾರಿಗಳ ಸಭೆ ನಡೆಸಿ, ಜಿಲ್ಲಾಡಳಿತಗಳೊಂದಿಗೂ ರ್ಚಚಿಸಿ ಹೂಡಿಕೆದಾರರಿಗೆ ಇರುವ ತೊಡಕು ನಿವಾರಿಸಲು ಪ್ರಯತ್ನಿಸುತ್ತಿದ್ದಾರೆ. ಉದ್ಯಮಿಗಳಿಗೆ ಅನುಕೂಲ ಮಾಡಿಕೊಡಲು ನೋಡಲ್ ಅಧಿಕಾರಿಗಳನ್ನೂ ಗುರುತಿಸಲಾಗಿದ್ದು, ಅವರು ಸಣ್ಣಪುಟ್ಟ ವಿಘ್ನ ನಿವಾರಿಸುವ ಕೆಲಸ ಮಾಡಲಿದ್ದಾರೆ.

    ರಾಜ್ಯದಲ್ಲಿ 45,000 ಉದ್ಯೋಗ ಸೃಷ್ಟಿಗೆ ತೆರೆದ ಬಾಗಿಲುಸರ್ಕಾರ ಕೈಗೊಂಡ ಕ್ರಮ ಕೈಗಾರಿಕೋದ್ಯಮಿಗಳಲ್ಲಿ ಉತ್ಸಾಹ ತರಿಸಿದೆ. ಖಂಡಿತವಾಗಿ ಇನ್ನಷ್ಟು ಹೂಡಿಕೆ ಹರಿದು ಬರಲಿದೆ, ತಡವಾಗದೆ ಅನುಷ್ಠಾನವಾಗಲಿದೆ. ಕೈಗಾರಿಕೆ ಇಲಾಖೆ ಅಧಿಕಾರಿಗಳೂ ಎಲ್ಲ ರೀತಿಯ ಸಹಕಾರ ನೀಡುತ್ತಿದ್ದಾರೆ.
    | ಜಗದೀಶ ಶೆಟ್ಟರ್ ಕೈಗಾರಿಕಾ ಸಚಿವ

    ಇದನ್ನೂ ಓದಿ: ‘ಸೋಕಾಲ್ಡ್ ಅಯೋಧ್ಯೆ’ಯಲ್ಲಿ ಅಯೋಧ್ಯಾಧಾಮ ನಿರ್ಮಿಸ್ತಾರಂತೆ ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ

    ಆತ್ಮನಿರ್ಭರ ಪರಿಣಾಮ

    ಬಹುಶಃ ಕರೊನಾ ಅವಧಿಯಲ್ಲಿ ಇಷ್ಟೊಂದು ಮೊತ್ತದ ಹೂಡಿಕೆ ಬೇರೆ ಯಾವ ರಾಜ್ಯಗಳಿಗೂ ಬಂದಿರಲಿಕ್ಕಿಲ್ಲ. ಕರ್ನಾಟಕದಲ್ಲಿ ಎಲ್ಲ ಪ್ರಕಾರದ ಉದ್ಯಮಕ್ಕೂ ಸೂಕ್ತ ವಾತಾವರಣ ಇದೆ ಎಂಬುದು ಈ ಬೆಳವಣಿಗೆಯಿಂದ ಸ್ಪಷ್ಟವಾಗಿದೆ ಎಂದು ಅಭಿಪ್ರಾಯಪಡುವ ಕೈಗಾರಿಕೆ ಇಲಾಖೆ ಅಧಿಕಾರಿಗಳು, ಹೂಡಿಕೆ ಮಾಡಲು ಒಪ್ಪಿಗೆ ನೀಡುವುದಷ್ಟೇ ನಮ್ಮ ಕೆಲಸವಲ್ಲ, ಅನುಷ್ಠಾನಕ್ಕೆ ಪೂರಕವಾಗಿ ಸಹಕಾರ ನೀಡುತ್ತೇವೆ ಎಂದು ವಿವರಿಸುತ್ತಾರೆ. ಈ ಬೆಳವಣಿಗೆ ಕುರಿತು ‘ವಿಜಯವಾಣಿ’ಗೆ ವಿವರಣೆ ನೀಡಿದ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್, ಸರ್ಕಾರದ ನಿರಂತರ ಪ್ರಯತ್ನದಿಂದ ಉತ್ತಮ ವಾತಾವರಣ ಸೃಷ್ಟಿಯಾಗಿದೆ. ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆ. ಕರೊನಾ ಸಂದರ್ಭದಲ್ಲಿ ಎಂಎಸ್​ಎಂಸಿ ಕ್ಷೇತ್ರ ಮಂಕಾಗಿತ್ತು. ಈಗ ಪುನಃ ಚೇತರಿಸಿಕೊಳ್ಳುತ್ತಿದೆ. ಸರ್ಕಾರ, ಕೈಗಾರಿಕೆ ಇಲಾಖೆ ಕಾರ್ಯಕ್ರಮಗಳು, ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಕಾರ್ಯಕ್ರಮ ಈ ಕ್ಷೇತ್ರವನ್ನು ಚೇತರಿಸಿಕೊಳ್ಳುವಂತೆ ಮಾಡಿದೆ ಎಂದರು.

    ಧಾರವಾಡಕ್ಕೆ ಟಾಟಾ ಮೋಟಾರ್ಸ್

    ಟಾಟಾ ಮೋಟಾರ್ಸ್ ಧಾರವಾಡದಲ್ಲಿ 2,044 ಕೋಟಿ ರೂ. ಹೂಡಿಕೆ ಮಾಡಲು ಮುಂದೆ ಬಂದರೆ, ಶ್ರೀ ಸಿಮೆಂಟ್ ಕಲಬುರಗಿಯಲ್ಲಿ 850 ಕೋಟಿ ರೂ., ಓರಿಯಂಟ್ ಸಿಮೆಂಟ್ 749 ಕೋಟಿ ರೂ. ಹೂಡಿಕೆಗೆ ನಿರ್ಧರಿಸಿವೆ.

    ಎಲ್ಲೆಲ್ಲಿ ಉದ್ಯಮ?

    ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಧಾರವಾಡ, ಕಲಬುರಗಿ, ಮೈಸೂರು, ತುಮಕೂರು, ಯಾದಗಿರಿ, ಚಾಮರಾಜನಗರ, ಹಾಸನ, ಮಂಡ್ಯ, ಮಂಗಳೂರು, ಬಳ್ಳಾರಿ, ಬೆಳಗಾವಿ

    ಇದನ್ನೂ ಓದಿ: ಆಯುಷ್ ವೈದ್ಯರಾಗುವುದು ಹೀಗೆ…

    ವಾರದೊಳಗೆ ಸಭೆ

    15 ಕೋಟಿ ರೂ.ಗಿಂತ ಹೆಚ್ಚಿನ ಹೂಡಿಕೆ ಮಾಡುವವರಿಗೆ ಸರ್ಕಾರದ ಉನ್ನತ ಮಟ್ಟದ ಸಮಿತಿ ಅನುಮತಿ ಅಗತ್ಯ. ಆ ಸಂಪ್ರದಾಯಕ್ಕೆ ತಿಲಾಂಜಲಿ ಹಾಡಲಾಗಿದ್ದು ಸಭೆ ನಡೆಸಲು ನಿರ್ಧರಿಸಲಾಗಿದೆ. ಇನ್ನು 9-10 ದಿನದಲ್ಲೇ ಮುಂದಿನ ಸಭೆ ನಡೆಯಲಿದೆ ಎಂದು ಶೆಟ್ಟರ್ ತಿಳಿಸಿದರು.

    ಯಾವ್ಯಾವ ಕ್ಷೇತ್ರ?

    ಮಾಹಿತಿ ತಂತ್ರಜ್ಞಾನ, ಔಷಧ, ಇಂಧನ, ಉಕ್ಕು, ರಿಯಾಲ್ಟಿ, ಪ್ಲಾಸ್ಟಿಕ್, ಕೃಷಿ, ಆಹಾರ ಸಂಸ್ಕರಣೆ, ಹ್ಯಾಂಡ್ ಬ್ಯಾಗ್ಸ್, ಪಾದರಕ್ಷೆ, ಆಟೋಮೊಬೈಲ್ ಬಿಡಿಭಾಗಗಳು, ರೆಡಿಮೇಡ್ ಗಾರ್ಮೆಂಟ್ಸ್, ಲಾಜಿಸ್ಟಿಕ್ಸ್, ಇಂಜಿನಿಯರಿಂಗ್, ರಾಸಾಯನಿಕ ಉತ್ಪಾದನೆ, ಏರೋಸ್ಪೆಸ್, ಎಥೆನಾಲ್ ಉತ್ಪಾದನೆ, ಖಾದ್ಯತೈಲ, ಏರ್ ಕಂಡಿಷನಿಂಗ್, ಕೇಬಲ್ಸ್ ಇತ್ಯಾದಿ ವಲಯಗಳಲ್ಲಿ ಹೂಡಿಕೆಯಾಗಿದೆ.

    ಅನುಷ್ಠಾನ ತಡವಿಲ್ಲ 

    ಸರ್ಕಾರದ ಉನ್ನತ ಮಟ್ಟದ ಸಮಿತಿಯಿಂದ ಹೂಡಿಕೆಗೆ ಅನುಮತಿ ಪಡೆದುಕೊಂಡವರೆಲ್ಲ ಕೂಡಲೇ ತಮ್ಮ ಉದ್ಯಮ ಆರಂಭಿಸಬಹುದಾಗಿದೆ. ಈ ಹಿಂದೆ ವಿವಿಧ ಇಲಾಖೆಗಳಿಂದ ಎನ್​ಒಸಿ, ಅನುಮತಿ ಪತ್ರ ಪಡೆದುಕೊಳ್ಳಬೇಕಿತ್ತು. ಪ್ರಸ್ತುತ ಕಾನೂನು ತಿದ್ದುಪಡಿ ಮಾಡಿರುವುದರಿಂದ 3 ವರ್ಷದೊಳಗೆ ಅನುಮತಿ ಪಡೆದá-ಕೊಂಡರೆ ಸಾಕು. ಇದು ಕೈಗಾರಿಕೆಗಳಿಗೆ ಅನುಕೂಲ ಮತ್ತು ಸಮಾಧಾನ ತಂದಿದೆ ಎಂದು ಕೈಗಾರಿಕ ಸಚಿವ ಶೆಟ್ಟರ್ ವಿವರಿಸಿದರು.

    ನಿಮ್ಮ ಒಗ್ಗಟ್ಟನ್ನು ವಿಶ್ವಾಸ ಮತದ ವೇಳೆ ತೋರಿಸಿ: ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿ ಗೆಹ್ಲೋಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts