More

    ಒಂದೇ ದಿನ 45 ಲಕ್ಷ ರೂ. ಸೆಸ್ ಸಂಗ್ರಹ

    ಬ್ಯಾಡಗಿ: ಇಲ್ಲಿನ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಗುರುವಾರ 2,43,813 ಚೀಲ ಆವಕದಿಂದ ಭರ್ಜರಿ ವ್ಯಾಪಾರ ನಡೆದಿದ್ದು, ಸುಮಾರು 45 ಲಕ್ಷ ರೂ. ಮಾರುಕಟ್ಟೆ ಶುಲ್ಕ ಸಂಗ್ರಹವಾಗಿದೆ.

    ಕಳೆದ ಎರಡು ತಿಂಗಳಿಂದ ನಿರಂತರವಾಗಿ ಮೆಣಸಿನಕಾಯಿ ಆವಕ ಏರುತ್ತ ಸಾಗಿದ್ದು, ಸತತ ಲಕ್ಷ ಚೀಲ ದಾಟಿದ ಆವಕದಿಂದ ದರ ಸ್ಥಿರತೆ ಕಾಯ್ದುಕೊಂಡಿದೆ. ಡಬ್ಬಿ ತಳಿ ಕ್ವಿಂಟಾಲ್​ಗೆ 35 ಸಾವಿರ ರೂ. ದಾಟಿದೆ. ಹೀಗಾಗಿ ಬಹುತೇಕ ಬಳ್ಳಾರಿ, ಆಂಧ್ರಪ್ರದೇಶದ ಗಡಿಭಾಗದಿಂದಲೂ ಮೆಣಸಿನಕಾಯಿ ಹೆಚ್ಚು ಬರುತ್ತಿದೆ. ರೈತರಲ್ಲಿ ಹಾಗೂ ವರ್ತಕರಲ್ಲಿ ಸಂತಸ ಇಮ್ಮಡಿಗೊಂಡಿದೆ.

    ಗುರುವಾರದ ದರ: ಕಡ್ಡಿ 1029- 24269, ಡಬ್ಬಿ 1900- 35190, ಗುಂಟೂರು 700-10200 ರೂ. ದರದಲ್ಲಿ ಮಾರಾಟವಾಗಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts