More

    45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕೋವಿಶೀಲ್ಡ್ ಲಸಿಕೆ – ಜಿಲ್ಲಾಧಿಕಾರಿ ಡಾ. ಕೆ.ಹರೀಶಕುಮಾರ

    ಬೆಳಗಾವಿ: ಜನತಾ ಕರ್ಫ್ಯೂ ಸಂದರ್ಭದಲ್ಲಿಯೂ ಸರ್ಕಾರದ ನಿರ್ದೇಶನದಂತೆ 45 ವರ್ಷ ಮೇಲ್ಪಟ್ಟ ಎಲ್ಲ ನಾಗರಿಕರಿಗೂ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ.ಹರೀಶಕುಮಾರ ತಿಳಿಸಿದ್ದಾರೆ.

    ನಗರ ಪ್ರದೇಶಗಳಲ್ಲಿ 45 ವರ್ಷ ಮೇಲ್ಪಟ್ಟ ಎಲ್ಲ ನಾಗರಿಕರು ಕೋವಿಡ್-19 ಲಸಿಕೆ ಪಡೆದುಕೊಳ್ಳಲು ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು. ಲಸಿಕಾ ಕೇಂದ್ರಗಳಿಗೆ ತೆರಳುವಾಗ ಭಾವಚಿತ್ರ ಹೊಂದಿದ ಅಧಿಕೃತ ಗುರುತಿನ ಚೀಟಿ ಹಾಗೂ ಆನ್ ಲೈನ್ ನೋಂದಣಿಯ ದಾಖಲೆ ತರುವುದು ಕಡ್ಡಾಯ ಎಂದರು.

    ಗ್ರಾಮೀಣ ಪ್ರದೇಶಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಉಪ ಕೇಂದ್ರ ಗಳು ಸೇರಿ ಎಲ್ಲ ಲಸಿಕಾ ಕೇಂದ್ರಗಳಲ್ಲಿ ಲಸಿಕಾಕರಣಕ್ಕಾಗಿ ಕ್ರಮ ಕೈಗೊಳ್ಳಲಾಗುವುದು. ಅಲ್ಲಿನ ಅನುಕೂಲವಾಗುವಂತೆ ಜನಸಂದಣಿ ತಪ್ಪಿಸಲು ಕ್ಷೇತ್ರ ಕಾರ್ಯಕರ್ತರು ಉಪಕೇಂದ್ರ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನಿರ್ದಿಷ್ಟ ಸಮಯದ ಸ್ಲಾಟ್‌ಗಳೊಂದಿಗೆ ಲಸಿಕೆ ನೀಡಲು ಅನುಕೂಲಕರ ಸಮಂಜಸ ಗುಂಪುಗಳನ್ನು ಸಜ್ಜುಗೊಳಿಸಲಾಗಿದೆ.

    ಸ್ವಯಂ ಸೇವಕರಿಗೆ ದೃಢೀಕರಣಕ್ಕಾಗಿ ಗುರುತಿನ ಚೀಟಿ ಅಥವಾ ಪಾಸ್ ನೀಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಜಿಲ್ಲೆಯಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತರು ಅಥವಾ ಅಧಿಕೃತ ಸ್ವಯಂ ಸೇವಕರು ಲಸಿಕೆದಾರರಿಗೆ ಲಸಿಕಾಕರಣದ ಚೀಟಿ, ಪಾಸ್ ನೀಡುತ್ತಾರೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ವತಿಯಿಂದ ಫಲಾನುಭವಿಗಳನ್ನು ವ್ಯಾಕ್ಸಿನೇಷನ್ ತಾಣಗಳಿಗೆ ಕರೆತರಲು ಕೋವಿಡ್-19 ಲಸಿಕೆ ವಾಹನಗಳ ವ್ಯವಸ್ಥೆ ಮಾಡಲಾಗುವುದು. ವಾಹನಗಳಿಗೂ ಪಾಸ್, ಸ್ಟಿಕ್ಕರ್ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts