More

    44 ಬಾಲ ಕಾರ್ವಿುಕರ ರಕ್ಷಣೆ

    ಹುಬ್ಬಳ್ಳಿ: ಬಾಲ ಕಾರ್ವಿುಕ ಹಾಗೂ ಕಿಶೋರ ಕಾರ್ವಿುಕ ಪದ್ಧತಿ ನಿಮೂಲನೆಗೊಳಿಸುವ ಉದ್ದೇಶದಿಂದ ಧಾರವಾಡ ಜಿಲ್ಲಾಡಳಿತ, ರಾಷ್ಟ್ರೀಯ ಬಾಲ ಯೋಜನಾ ಸಂಘ, ಕಾರ್ವಿುಕ ಇಲಾಖೆ ಸೇರಿ ವಿವಿಧ ಇಲಾಖೆಗಳು ಮತ್ತು ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಹುಬ್ಬಳ್ಳಿ ಮತ್ತು ಧಾರವಾಡ ಮಾರುಕಟ್ಟೆ ಪ್ರದೇಶಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ 44 ಮಕ್ಕಳನ್ನು ರಕ್ಷಿಸಲಾಗಿದೆ.

    ಹುಬ್ಬಳ್ಳಿಯ ದುರ್ಗದ ಬೈಲ್, ಶಾ ಬಜಾರ್, ಮೂರುಸಾವಿರ ಮಠ ಸುತ್ತಲಿನ ಪ್ರದೇಶ ಹಾಗೂ ಧಾರವಾಡದ ನೆಹರೂ ಮಾರ್ಕೆಟ್, ಸಿಬಿಟಿ, ಸೂಪರ್ ಮಾರ್ಕೆಟ್ ಸೇರಿ ವಿವಿಧ ಕಡೆ ನಡೆಸಲಾದ ದಾಳಿಯಲ್ಲಿ ಹೂವು, ಹಣ್ಣು, ತರಕಾರಿ ಮಾರಾಟ ಹಾಗೂ ಪಾಲಕರಿಗೆ ಸಹಾಯ ಮಾಡುತ್ತಿದ್ದ ಮಕ್ಕಳನ್ನು ರಕ್ಷಿಸಿ ಪಾಲಕರಿಗೆ ಕಾನೂನಾತ್ಮಕ ತಿಳಿವಳಿಕೆ ನೀಡಲಾಯಿತು.

    ಹುಬ್ಬಳ್ಳಿಯಲ್ಲಿ 20 ಹಾಗೂ ಧಾರವಾಡದಲ್ಲಿ 24 ಸೇರಿ 44 ಮಕ್ಕಳನ್ನು ಕೆಲಸದಿಂದ ಮುಕ್ತಿಗೊಳಿಸಲಾಗಿದೆ. 4 ಜನ ಕಿಶೋರ ಕಾರ್ವಿುಕರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಗಿದೆ ಎಂದು ಕಾರ್ವಿುಕ ಅಧಿಕಾರಿಗಳು ತಿಳಿಸಿದ್ದಾರೆ.

    ಎನ್.ಸಿ.ಎಲ್.ಪಿ. ನಿರ್ದೇಶಕ ಬಾಳಗೌಡ ಪಾಟೀಲ, ಕಾರ್ವಿುಕ ಅಧಿಕಾರಿ ಮಾರಿಕಾಂಬಾ ಹುಲಕೋಟಿ, ಮಲ್ಲಿಕಾರ್ಜುನ ಜೋಗೂರ, ಅಕ್ಬರ ಅಲ್ಲಾಪೂರ, ಶಮಿ ಎಚ್., ಸಂಗೀತಾ ಬೆನಕನಕೊಪ್ಪ, ಮೀನಾಕ್ಷಿ ಶಿಂದಿಹಟ್ಟಿ, ತಹಸೀಲ್ದಾರ್ ವಿಜಯಕುಮಾರ ಕಡಕೋಳ, ಡಾ. ಕಮಲಾ ಬೈಲೂರ, ಸಂಕಲ್ಪ ಸಂಸ್ಥೆಯ ಪ್ರಕಾಶ ಹೂಗಾರ, ಮಕ್ಕಳ ಸಹಾಯವಾಣಿಯ ಚಂದ್ರಶೇಖರ ರಾಹುತರ, ಆನಂದ ಸವಣೂರ, ಉಮಾ ರೊಟ್ಟಿಗವಾಡ, ಮಕ್ಕಳ ರಕ್ಷಣಾ ಘಟಕದ ಕರೆಪ್ಪ ಕೌಜಲಗಿ, ಪ್ರಭಾಕರ ಜಿ, ಮಹ್ಮದಲಿ ತಹಸೀಲ್ದಾರ, ಎಸ್.ಎಂ. ಮುಲ್ಲಾ, ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts