More

    ಕೇರಳಕ್ಕೆ ಸಾಗಿಸುತ್ತಿದ್ದ 4375 ಲೀ. ಸ್ಪಿರಿಟ್ ವಶ

    ಕಾರವಾರ: ಗ್ಲೂಕೋಸ್ ಬಾಟಲಿಯ ಜತೆ ಗೋವಾದಿಂದ ಅಕ್ರಮವಾಗಿ ಸಾಗಿಸುತ್ತಿದ್ದ 4375 ಲೀಟರ್ ಸ್ಪಿರಿಟ್ ಅನ್ನು ಮಾಜಾಳಿಯ ಅಬಕಾರಿ ತನಿಖಾ ಠಾಣೆಯಲ್ಲಿ ವಶಕ್ಕೆ ಪಡೆಯಲಾಗಿದೆ.
    ಮದ್ಯ ತಯಾರಿಕಾ ಕಂಪನಿಗಳಿಗೆ ಅಧಿಕೃತ ದಾಖಲೆಗಳೊಂದಿಗೆ ಮಾತ್ರ ಸ್ಪಿರಿಟ್ ಸಾಗಿಸಲು ಅವಕಾಶವಿದೆ. ಆದರೆ, ಗೋವಾದಿಂದ ಕೇರಳಕ್ಕೆ ವೈದ್ಯಕೀಯ ಸಾಮಗ್ರಿ ಜತೆ 35 ಲೀಟರ್​ನ 125 ಕ್ಯಾನ್​ಗಳಲ್ಲಿ 2,53,705 ಲೀಟರ್ ಸ್ಪಿರಿಟ್ ಅನ್ನು ತುಂಬಿ ಸಾಗಿಸಲಾಗುತ್ತಿತ್ತು. ಅದು ಗೊತ್ತಾಗಬಾರದು ಎಂಬ ಕಾರಣಕ್ಕೆ ರಟ್ಟಿನ ಬಾಕ್ಸ್​ನಲ್ಲಿ ಕ್ಯಾನ್​ಗಳನ್ನು ತುಂಬಿ ಪ್ಯಾಕ್ ಮಾಡಲಾಗಿತ್ತು. ವಾಸನೆ ಬರದಂತೆ ತಡೆಯಲು ಕ್ಯಾನ್​ಗಳಿಗೆ ಬಲೂನ್ ಹಾಕಿ ವ್ಯವಸ್ಥಿತವಾಗಿ ಪ್ಯಾಕ್ ಮಾಡಲಾಗಿತ್ತು.
    ಕೇರಳ ಮೂಲದ ಜಿಷ್ಣು ಒ.ಕೆ. ಬಂಧಿತ. ಸ್ಪಿರಿಟ್ ಜತೆಗೆ ಲಾರಿಯಲ್ಲಿದ್ದ 7,14,000 ರೂ. ಮೌಲ್ಯದ 100 ಬಾಕ್ಸ್ ಗ್ಲೂಕೋಸ್, 20.80 ಲಕ್ಷ ಮೌಲ್ಯದ ಲಾರಿಯನ್ನೂ ವಶಕ್ಕೆ ಪಡೆಯಲಾಗಿದೆ. ಅಬಕಾರಿ ಡಿಸಿ ವನಜಾಕ್ಷಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಉಪ ಅಧೀಕ್ಷಕಿ ಸುವರ್ಣಾ ನಾಯ್ಕ, ನಿರೀಕ್ಷಕ ಬಸವರಾಜ್, ಉಪ ನಿರೀಕ್ಷಕ ಪಿ.ಕೆ.ಹಳದನಕರ್, ಸಿಬ್ಬಂದಿ ಎಂ.ಎಂ. ನಾಯ್ಕ, ಕೆ.ಜಿ. ಬಂಟ್, ಎನ್.ಎನ್. ಖಾನ್, ಕುಂದಾ ನಾಯ್ಕ, ವಿಶಾಲ ನಾಯ್ಕ, ಆನಂದ ಕೊಂಡೇಕರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts