More

    428 ಜನ ಕ್ವಾರಂಟೈನ್​ನಲ್ಲಿ

    ಸಿದ್ದಾಪುರ: ತಾಲೂಕಿನಲ್ಲಿ ಒಟ್ಟು 424 ಜನ ಹೋಂ ಕ್ವಾರಂಟೈನ್​ನಲ್ಲಿ, ಸಿದ್ದಾಪುರ ಸರ್ಕಾರಿ ಆಸ್ಪತ್ರೆ ಹಾಗೂ ಕೊಂಡ್ಲಿ ಹಾಸ್ಟೆಲ್​ನಲ್ಲಿ ಇಬ್ಬರು ಸೇರಿ ಒಟ್ಟು 428 ಜನ ಕ್ವಾರಂಟೈನ್​ನಲ್ಲಿದ್ದಾರೆ ಎಂದು ತಹಸೀಲ್ದಾರ್ ಮಂಜುಳಾ ಎಸ್. ಭಜಂತ್ರಿ ಹೇಳಿದರು.

    ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 67 ಜನರ ಗಂಟಲ ದ್ರವವನ್ನು ವೈದ್ಯಕೀಯ ತಪಾಸಣೆಗೆ ಕಳುಹಿಸಲಾಗಿದೆ. ಅದರಲ್ಲಿ 50 ಜನರ ವರದಿ ನೆಗೆಟಿವ್ ಬಂದಿದೆ. ಇನ್ನೂ 17 ಜನರ ವರದಿ ಬರಬೇಕಾಗಿದೆ. ಹೆಗ್ಗೋಡಮನೆಯ ಮಹಿಳೆಯೊಬ್ಬರ ಗಂಟಲ ದ್ರವ ತಪಾಸಣೆಗೆ ಕಳುಹಿಸಿದ್ದು, 12 ದಿನಗಳಾದರೂ ವರದಿ ಬಂದಿಲ್ಲ ಎಂದರು.

    ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ದೆಹಲಿ ಹಾಗೂ ಪಶ್ಚಿಮಬಂಗಾಳಗಳಿಂದ ತಾಲೂಕಿಗೆ ಬಂದ ವ್ಯಕ್ತಿಗಳ ಕುರಿತು ನಿಗಾ ವಹಿಸಲಾಗುತ್ತಿದೆ. ಈವರೆಗೆ ತಾಲೂಕಿನಲ್ಲಿ 54 ಜನರಲ್ಲಿ ಮಂಗನಕಾಯಿಲೆ ಪಾಸಿಟಿವ್ ಬಂದಿದ್ದು, ಹೆಚ್ಚಿನವರು ಗುಣಮುಖರಾಗಿದ್ದಾರೆ. ಕೆಲವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಹಸೀಲ್ದಾರ್ ಹೇಳಿದರು.

    ತಾಲೂಕು ಆಸ್ಪತ್ರೆಯಲ್ಲಿ ರೋಗಿಗಳ ತಪಾಸಣೆಗೆ ಚೀಟಿ ಮಾಡಿಸಲು 15 ರೂ. ತೆಗೆದುಕೊಳ್ಳಲಾಗುತ್ತಿದ್ದು, ಈ ಕುರಿತು ಆರೋಗ್ಯಾಧಿಕಾರಿಗಳೊಂದಿಗೆ ರ್ಚಚಿಸಿ ಕ್ರಮ ಜರುಗಿಸಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts