More

    ಮತ್ತೆ ಏರುಗತಿಯಲ್ಲಿ ಕರೊನಾ

    ಮಂಗಳೂರು: ದ.ಕ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಕರೊನಾ ಏರುಗತಿ ಕಾಣತೊಡಗಿದ್ದು, ಶನಿವಾರವೂ ಐದು ಸಾವು, 401 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.
    ತೀವ್ರ ಉಸಿರಾಟ ತೊಂದರೆಯ 18, ಐಎಲ್‌ಐ(ಇನ್‌ಫ್ಲುಯೆಂಜಾ ಮಾದರಿ ಸಮಸ್ಯೆ) ಇದ್ದ 210, ನೇರ ಸಂಪರ್ಕದಿಂದ 97 ಮಂದಿ ಸೋಂಕಿಗೊಳಗಾಗಿದ್ದಾರೆ. 76 ಮಂದಿಯ ಸೋಂಕಿನ ಮೂಲ ಪತ್ತೆಯಾಗಿಲ್ಲ. ಮಂಗಳೂರಿನಲ್ಲಿ ಅತ್ಯಧಿಕ 227, ಬಂಟ್ವಾಳದ 47, ಪುತ್ತೂರಿನ 52, ಸುಳ್ಯದ 30, ಬೆಳ್ತಂಗಡಿಯ 24, ಇತರ ಜಿಲ್ಲೆಗಳ 21 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಜಿಲ್ಲೆಯಲ್ಲಿ ಒಟ್ಟು ಪಾಸಿಟಿವ್ ಆದವರ ಸಂಖ್ಯೆ 16959ಕ್ಕೇರಿದ್ದರೆ ಮೃತರ ಸಂಖ್ಯೆ 439ಕ್ಕೆ ತಲಪಿದೆ. ಶನಿವಾರ 204 ಮಂದಿ ಸೋಂಕು ಮುಕ್ತರಾಗಿದ್ದಾರೆ. ಸೋಂಕುಮುಕ್ತರಾದವರ ಸಂಖ್ಯೆ 12813ಕ್ಕೆ ತಲಪಿದೆ.

    ಕಾಸರಗೋಡಿನಲ್ಲಿ 150 ಪ್ರಕರಣ: ಜಿಲ್ಲೆಯ 150 ಮಂದಿ ಸಹಿತ ಕೇರಳದಲ್ಲಿ ಶನಿವಾರ 2885 ಮಂದಿಯಲ್ಲಿ ಕೋವಿಡ್ ಕಾಣಿಸಿಕೊಂಡಿದೆ. 15 ಮಂದಿ ಮೃತಪಟ್ಟಿದ್ದಾರೆ.

    ಉಡುಪಿಯಲ್ಲಿ 169 ಮಂದಿಗೆ ಸೋಂಕು
    ಉಡುಪಿ: ಜಿಲ್ಲೆಯಲ್ಲಿ ಶನಿವಾರ 169 ಮಂದಿಗೆ ಕೋವಿಡ್ ಪಾಸಿಟಿವ್ ವರದಿಯಾಗಿದೆ. ಅನಾರೋಗ್ಯಕ್ಕೀಡಾಗಿ ಮೃತಪಟ್ಟ ಇಬ್ಬರು ಹಿರಿಯ ನಾಗರಿಕರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಸಾವಿನ ಸಂಖ್ಯೆ 130ಕ್ಕೆ, ಒಟ್ಟು ಸೋಂಕಿತರ ಸಂಖ್ಯೆ 1,3905ಕ್ಕೆೆ ಏರಿದೆ. 1,125 ಮಂದಿಯ ಗಂಟಲ ದ್ರವ ಮಾದರಿಯನ್ನು ಕೋವಿಡ್ ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ. ಇನ್ನೂ 451 ಮಂದಿಯ ವರದಿ ಬರಲು ಬಾಕಿ ಇದೆ. 1,760 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts