More

    ಶೇ.40 ಭ್ರಷ್ಟಸರ್ಕಾರ ತೊಲಗಲಿ :ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಹೇಳಿಕೆ

    ವಿಜಯಪುರ : ಮತ್ತೆ ನಮ್ಮ ರಾಜ್ಯ ದೇಶದಲ್ಲಿ ನಂ.1 ಆಗಿ ರಾಜ್ಯದ ಗತವೈಭವ ಮರುಕಳಿಸಬೇಕಾದರೆ, ಶೇ.40 ಭ್ರಷ್ಟ ಸರ್ಕಾರ ತೊಲಗಬೇಕು. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಗುತ್ತಿಗೆದಾರರ ಸಂಘದ ಪ್ರಕಾರ ಬಹುತೇಕ ಬಿಜೆಪಿ ಸಚಿವರು ಎಲ್ಲ ಇಲಾಖೆಗಳಲ್ಲಿ ಶೇ.40 ಲಂಚ ತೆಗೆದುಕೊಳ್ಳುವುದರಲ್ಲಿ ಭಾಗಿ ಇದ್ದಾರೆ. ಬಿಜೆಪಿಯವರು ಆಡಳಿತ ವ್ಯವಸ್ಥೆ ಹಾಳು ಮಾಡಿದ್ದಾರೆ. ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಸರಿಪಡಿಸಲು ನಮಗೆ ಎರಡು ವರ್ಷಬೇಕು. ಆದಷ್ಟು ಬೇಗ ಈ ಭ್ರಷ್ಟ ಸರ್ಕಾರ ತೊಲಗಬೇಕು. ಭವ್ಯ ಸಂಸ್ಕೃತಿ, ಇತಿಹಾಸ ನಮ್ಮ ರಾಜ್ಯ ಹೊಂದಿದೆ. ಅದನ್ನು ಉಳಿಸಿಕೊಂಡು ಹೋಗಲು ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

    ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಜನಸಾಗರವನ್ನು ನೀವೆಲ್ಲ ನೋಡಿದ್ದಿರಿ. ಆದರೆ ಬಿಜೆಪಿ ಸಂಕಲ್ಪಯಾತ್ರೆಯಲ್ಲಿ ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವೆ ಸ್ಮತಿ ಇರಾನಿ ಮಾತನಾಡುವಾಗ ಖಾಲಿ ಕುರ್ಚಿಗಳಿದ್ದವು. ಖಾಲಿ ಕುರ್ಚಿಗಳನ್ನು ತೋರಿಸಿ ಲಕ್ಷಾಂತರ ಜನ ಎಂದು ತೋರಿಸಿದ್ದಾರೆ. ಬೇಕಿದ್ದರೆ ಖಾಲಿ ಕುರ್ಚಿಗಳ ವಿಡಿಯೋ ಸಾಕ್ಷಿ ಕೊಡುತ್ತೇನೆ ಎಂದು ಕುಟುಕಿದರು.

    ಪಿಎಸ್‌ಐ ಅಕ್ರಮ ಪ್ರಕರಣ; ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ
    ಪಿಎಸ್‌ಐ ಅಕ್ರಮ ಪ್ರಕರಣವನ್ನು ಸರ್ಕಾರ ಸಿಐಡಿ ತನಿಖೆಗೆ ವಹಿಸಿದೆ. ಎರಡು-ಮೂರು ತಿಂಗಳಲ್ಲಿ ನಿಷ್ಪಕ್ಷಪಾತವಾದ ತನಿಖೆ ಮಾಡಿ ನಿರಪರಾಧಿಗಳಿಗೆ ನ್ಯಾಯ ಒದಗಿಸಬೇಕು ಹಾಗೂ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಎಂ.ಬಿ.ಪಾಟೀಲ ತಿಳಿಸಿದರು. ಪಿಎಸ್‌ಸೈ ಒಂದೇ ಅಲ್ಲ ಇನ್ನೂ ಬೇರೆ ಬೇರೆ ಹಗರಣಗಳು ಹೊರಬರುತ್ತಿವೆ. ತಪ್ಪಿತಸ್ಥರನ್ನು ತೆಗೆದು ಹಾಕಿ ಕಷ್ಟಪಟ್ಟು ಹಗಲು ರಾತ್ರಿ ಓದಿ ಪ್ರಾಮಾಣಿಕವಾಗಿ ಪರೀಕ್ಷೆ ಬರೆದವರಿಗೆ ನ್ಯಾಯ ದೊರಕಿಸುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts